Vijayapatha – ವಿಜಯಪಥ
Saturday, November 2, 2024
NEWSನಮ್ಮರಾಜ್ಯ

ವಿಜಯಪುರ ಜಿಲ್ಲೇಲಿ ಮತ್ತೆ ಮತ್ತೆ ಭೂಕಂಪನ: ಜೀವ ಭಯದಲ್ಲಿ ಜನತೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಜಿಲ್ಲೆಯ ಜನತೆಯನ್ನು ಬೆನ್ನು ಬಿಡದಂತೆ ಮತ್ತೆ ಮತ್ತೆ ಭೂಕಂಪನ ವಾಗುತ್ತಿದೆ. ಹೌದು! ಕಳೆದ ಎರಡು ದಿನದಲ್ಲಿ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದ ಸುತ್ತ 7 ಬಾರಿ ಭೂಮಿ ಕಂಪಿಸಿದ್ದು ಜನರು ಜೀವ ಭಯದಲ್ಲಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಶುಕ್ರವಾರ (ಇಂದು) ಬೆಳಗಿನ ಜಾವ 6.45, ತಡರಾತ್ರಿ 1.30 ಗಂಟೆ ಅವಧಿಯಲ್ಲಿ ಒಟ್ಟು 7 ಬಾರಿ ಜನರಿಗೆ ಕಂಪನದ ಅನುಭವ ಆಗಿದೆ. ನಿನ್ನೆ ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೆ 5 ಬಾರಿ ಕಂಪನ ಆಗಿದೆ ಎನ್ನುತ್ತಿದ್ದಾರೆ ತಾಲೂಕಿನ ನಿವಾಸಿಗಳು.

ಕೊಲ್ಹಾರ ತಾಲೂಕಿನ ಮಲಘಾಣ, ಮಸೂತಿ ಗ್ರಾಮಗಳಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸುತ್ತಿದೆ. ಮಲಘಾಣ-ಮಸೂತಿ ಗ್ರಾಮಗಳ 10 ಕಿಮೀ ವ್ಯಾಪ್ತಿಯಲ್ಲಿ ಕಂಪನ ಅನುಭವ ಅಗಿದೆ.

ಕಳೆದ ಅಕ್ಟೋಬರ್ 20 ರಂದು ಮಸೂತಿ- ಮಲಘಾಣ ಗ್ರಾಮಕ್ಕೆ‌ ಭೂವಿಜ್ಞಾನಿಗಳ ತಂಡ ಭೇಟಿ ನೀಡಿತ್ತು. ಹೈದ್ರಾಬಾದ್‌ನ (NGRI) ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ಪರಿಣಿತ ಭೂವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಮಿಯ ಆಳದಲ್ಲಿ ನಡೆಯುವ ಬದಲಾವಣೆ, ಚಲನವಲನಗಳ ಮೇಲೆ ನಿಗಾ ಇಡಲು ತಾತ್ಕಾಲಿಕ ಸಿಸ್ಮೋಮಿಟರ್ ಅಳಡಿಸಿದ್ದರು.

ಇದರಿಂದ ಪ್ರತಿ ಕಂಪನಗಳ ಮಾಹಿತಿ ಸಂಗ್ರಹಿಸಿ ಹೈದರಾಬಾದ್ ಕೇಂದ್ರಕ್ಕೆ ಕಳುಹಿಸುವ ವಿಶೇಷ ಯಂತ್ರ ಇದಾಗಿದ್ದು, ಸರಣಿ ಭೂಕಂಪನದ ಮಾಹಿತಿ ಬರಬೇಕಿದೆ.

ಈ ನಡುವೆ ತಾಲೂಕಿನಲ್ಲಿ ಸಂಭವಿಸುತ್ತಿರುವ ಈ ಭೂಕಂಪನದಿಂದ ಜನರು ರಾತ್ರಿಹೊತ್ತಲ್ಲಿ ನಿದ್ರೆ ಮಾಡುವ ಬದಲಿಗೆ ಜೀವ ಭಯದಲ್ಲಿ ಕಾಲದೂಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಶೀಘ್ರ ಮಾಹಿತಿ ಪಡೆದು ಗ್ರಾಮಗಳ ನಿವಾಸಿಗಳು ನೆಮ್ಮದಿಯಿಂದ ವಾಸ ಮಾಡುವ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ