CrimeNEWSನಮ್ಮರಾಜ್ಯರಾಜಕೀಯ

ಧರ್ಮೇಗೌಡರ ಸಾವು ಬರೀ ಸಾವಲ್ಲ, ಇವತ್ತಿನ ರಾಜಕಾರಣದ ಕೊಲೆ: ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡರು ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಅಘಾತಕ್ಕೆ ಒಳಗಾಗಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರ ಸಾವು ಬರೀ ಸಾವಲ್ಲ, ಇವತ್ತಿನ ರಾಜಕಾರಣದ ಕೊಲೆ ಎಂದು ವಿಷಾದಿಸಿದ ವ್ಯಕ್ತಪಡಿಸಿದ್ದು, ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಸಜ್ಜನ ವ್ಯಕ್ತಿತ್ವದ ಧರ್ಮೇಗೌಡರು ಬಲಿಯಾಗಿದ್ದಾರೆ. ಇವತ್ತಿನ ಎಲ್ಲಾ ರಾಜಕಾರಣಿಗಳೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.

ಧರ್ಮೇಗೌಡರ ತಂದೆ ಲಕ್ಷ್ಮಯ್ಯ 2004ರಲ್ಲಿ ಒಂದು ಮಾತು ಕೇಳಿದ್ದರು. ನಾನು ಕಣ್ಮುಚ್ಚುವುದರೊಳಗೆ ನನ್ನ ಮಗನನ್ನು ಮಂತ್ರಿಯಾಗಿ ನೋಡುವ ಆಸೆ ಇದೆ ಎಂದು ಆಸೆ ತೋಡಿಕೊಂಡಿದ್ದರು. ನಮಗೆ ಧರ್ಮೇಗೌಡ ಅರನ್ನು ಮಂತ್ರಿ ಮಾಡಲು ಆಗಲಿಲ್ಲ. ಎಂಎಲ್​ಸಿ ಮಾಡಿ ಉಪಸಭಾಪತಿ ಮಾಡಿದೆವು. ಉಪಸಭಾಪತಿಯನ್ನಾಗಿ ಮಾಡಿದ್ದೇ ಅವರ ಸಾವಿಗೆ ಕಾರಣವಾಯಿತಾ ಎಂದು ಕಣ್ಣಾಲೆಗಳನ್ನು ತೇವ ಮಾಡಿಕೊಂಡರು.

ಧರ್ಮೇಗೌಡ ಮತ್ತು ಅವರ ಸಹೋದರ ಭೋಜೇಗೌಡ ಇಬ್ಬರೂ ಒಂದು ಹಂತದಲ್ಲಿ ಕಾಂಗ್ರೆಸ್ ಸೇರಲು ಹೊರಟಿದ್ದರು. ಕಾಂಗ್ರೆಸ್ ಸೇರಲು ಯೋಚಿಸಿರುವುದಾಗಿ ನನ್ನ ಬಳಿ ಬಂದು ಹೇಳಿದರು. ನಿಮಗೆ ಕುಮಾರಣ್ಣ ಬೇಕೆಂದರೆ ಉಳಿದುಕೊಳ್ಳಿ ಎಂದು ಹೇಳಿದ್ದೆ. ಆ ಒಂದು ಮಾತಿನಿಂದ ಅವರು ಜೆಡಿಎಸ್ ಪಕ್ಷದಲ್ಲಿ ಉಳಿದುಕೊಂಡರು ಎಂದು ಧರ್ಮೇಗೌಡರ ನಿಷ್ಠೆಯನ್ನು ಕುಮಾರಸ್ವಾಮಿ ನೆನಪಿಸಿಕೊಂಡರು.

ಸದನದಲ್ಲಿ ನಡೆದ ಗಲಾಟೆ ಪ್ರಕರಣದಿಂದ ಅವರು ಮನನೊಂದಿದ್ದರು. ಆ ಪ್ರಕರಣದಲ್ಲಿ ಧರ್ಮೇಗೌಡರ ಮೇಲೆಯೇ ದೋಷ ಹೊರಿಸೋಕೆ ಪ್ರಯತ್ನ ನಡೆದಿದೆಯಂತೆ. ಅದರಿಂದಲೂ ಅವರು ಮನನೊಂದು ಈ ರೀತಿ ಮಾಡಿಕೊಂಡರೋ ಗೊತ್ತಿಲ್ಲ. ಎಲ್ಲಾ ಸತ್ಯಾಂಶಗಳು ಹೊರಬರಬೇಕು ಎಂದು ಹೇಳಿದರು.

ಸಭಾಪತಿ ಪೀಠದಲ್ಲಿ ಕೂರಲು ಧರ್ಮೇಗೌಡ ಒಪ್ಪಿರಲಿಲ್ಲ. ನಾನೂ ಕೂಡ ಬೇಡ ಎಂದು ಹೇಳಿದ್ದೆ. ಆದರೂ ಒತ್ತಡ ಹಾಕಿ ಅವರನ್ನ ತಂದು ಕೂರಿಸಿದರು. ಮನಸ್ಸಿಲ್ಲದೆ ಅವರು ಪೀಠದ ಮೇಲೆ ಕೂತರು. ಆನಂತರ ಆದ ಘಟನೆ ನಿಮಗೆ ಗೊತ್ತಿದೆ. ನಮ್ಮ ನಮ್ಮ ಸ್ವಾರ್ಥಕ್ಕೆ ಇದು ಆಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಯಾರೂ ಕೂಡ ಯಾವುದೇ ವ್ಯಕ್ತಿಗಳ ಜತೆ ಚೆಲ್ಲಾಟ ಆಡಬಾರದು ಎಂದರು.

Leave a Reply

error: Content is protected !!
LATEST
20 ದಿನದೊಳಗೆ ರೈತರಿಗೆ ಬರ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ KSRTC: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್‌ -6ಮಂದಿಗೆ ಗಾಯ KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ - DC ಮೌನ NWKRTC: ಬಸ್‌ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮಹಿಳೆ ಧಾರುಣಸಾವು ಬಸ್‌ - ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ : ನಾಲ್ವರು ಮೃತ, ಹಲವರಿಗೆ ಗಾಯ KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?