NEWSಕೃಷಿನಮ್ಮರಾಜ್ಯ

ಮಿತ ಯೂರಿಯಾ ಬೆಳೆಗೆ ಹಿತ : ಡಾ.ಚೇತನಾ ಪಾಟೀಲ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ:   ರೈತರು ಯೂರಿಯಾ ರಸಗೊಬ್ಬರದ ಬಳಕೆಯನ್ನು ಮಿತವಾಗಿ ಮಾಡಬೇಕು, ಉತ್ತಮ ಮಳೆಯಾದ ಸಂದರ್ಭದಲ್ಲಿ ಭೂಮಿಯ ತೇವಾಂಶ ಹೆಚ್ಚಿರುತ್ತದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಇದರ ಜತೆಗೆ ಅಧಿಕ ಪ್ರಮಾಣದ ಯೂರಿಯಾ ಬಳಕೆಯಿಂದ ಬೆಳೆಗಳಿಗೆ ರೋಗ ಹಾಗೂ ಕೀಟಬಾಧೆ ಹೆಚ್ಚಾಗುವ ಸಂಭವವಿರುತ್ತದೆ ಹಾಗೂ ಅಧಿಕ ಬಳಕೆಯಿಂದ ಮಣ್ಣಿನ ರಚನೆ ಹಾಳಾಗಿ ಭೂ ಫಲವತ್ತತೆ ಕಡಿಮೆಯಾಗುವ ಸಂಭವವಿದೆ. ಆದ್ದರಿಂದ ಮಣ್ಣು ಪರೀಕ್ಷಾ ವರದಿಯ ಶಿಫಾರಸು ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಬೇಕು ಹಾಗೂ ಕಾಂಪ್ಲೆಕ್ಸ್ ಡಿ.ಎ.ಪಿ ಮತ್ತು ಎಂ.ಓ.ಪಿ ರಸಗೊಬ್ಬರಗಳನ್ನು ಸಹ ಬಳಸಬೇಕು ಎಂದು ತಿಳಿಸಿದ್ದಾರೆ.

ಯೂರಿಯಾ ರಸಗೊಬ್ಬರದಲ್ಲಿ ಸಣ್ಣ ಕಾಳು – ದಪ್ಪ ಕಾಳಿನ ರಸಗೊಬ್ಬರ ಸರಬರಾಜಾಗುತ್ತಿದ್ದು, ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎರಡೂ ಗೊಬ್ಬರದಲ್ಲಿರುವ ಸಾರಜನಕದ ಪ್ರಮಾಣ ಒಂದೇ ರೀತಿ ಆಗಿರುತ್ತದೆ. ಆದ್ದರಿಂದ ಲಭ್ಯವಿರುವ ಗಾತ್ರದ ಯೂರಿಯಾವನ್ನು ರೈತರು ಬಳಕೆ ಮಾಡಬೇಕು.

ತೋಟಗಾರಿಕೆ ಬೆಳೆಗಳಿಗೆ ಹಾಗೂ ಹನಿ ನೀರಾವರಿ ಬೆಳೆಗಳಿಗೆ ಶೇ.100 ರಷ್ಟು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು. ಕಬ್ಬು ಬೆಳೆಗಾರರು ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ಅಮೋನಿಯಂ ಸಲ್ಫೇಟ್ ಬಳಸಬೇಕು. ರಸಗೊಬ್ಬರ ಖರೀದಿಸುವಾಗ ರೈತರು ತಪ್ಪದೇ ತಮ್ಮ ಗುರುತಿನ ಚೀಟಿ, ಆಧಾರ ಕಾರ್ಡ್ ಮಾಹಿತಿಯನ್ನು ಪರಿಕರ ಮಾರಾಟ ಮಾಲೀಕರಿಗೆ ಒದಗಿಸಿ ರಸೀದಿಯನ್ನು ಪಡೆಯಬೇಕು.

ಯೂರಿಯಾ ರಸಗೊಬ್ಬರ ಸಸ್ಯಗಳಿಗೆ ಸಾರಜನಕ ಒದಗಿಸಿ ಉತ್ತಮ ಫಸಲು ಬಿಡಲು ನೆರವಾಗುತ್ತದೆ. ಹೆಚ್ಚು ಫಸಲು ಬರಲಿ ಎಂದು ವಿಪರೀತ ಯೂರಿಯಾ ಗೊಬ್ಬರ ಹಾಕಿದರೆ ಸಮಸ್ಯೆಗಳು ಹೆಚ್ಚಾಗಿ ಬರುವ ಬೆಳೆಯನ್ನೂ ಹಾಳು ಮಾಡುತ್ತದೆ. ಬೆಳೆಗೆ ಶಿಫಾರಸು ಮಾಡಿದ ಸಾರಜನಕ ,ರಂಜಕ : ಪೊಟ್ಯಾಷ್  ಅನುಪಾತ 4:2:1. ಆದರೆ 2017-18ರ ಅಂಕಿಅಂಶಗಳ ಪ್ರಕಾರ ಬಳಕೆ ಪ್ರಮಾಣದ ಅನುಪಾತ 6.1:2.46:1 ರಷ್ಟಿದೆ. ಸಾರಜನಕಯುಕ್ತ ಗೊಬ್ಬರ ಬಳಕೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳಕ್ಕೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಯೂರಿಯಾ ಬಳಸಬಾರದು. ರೈತರು ಪ್ರತಿ ಎಕರೆಗೆ ಎರಡು ಚೀಲ ಯೂರಿಯಾವನ್ನು ಅಂದರೆ 100 ಕೆ.ಜಿ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸುತ್ತಿದ್ದಾರೆ ಆದರೆ ವಿಜ್ಞಾನಿಗಳ ಶಿಫಾರಸ್ಸಿನ ಪ್ರಕಾರ ಮೆಕ್ಕೆಜೋಳದ ಬೆಳೆಗೆ ಪ್ರತಿ ಎಕರೆಗೆ ಬಿತ್ತನೆ ಸಮಯದಲ್ಲಿ ಡಿ.ಎ.ಪಿ 64 ಕೆ.ಜಿ, ಯೂರಿಯಾ 16 ಕೆ.ಜಿ, ಎಮ್.ಓ.ಪಿ 24 ಕೆ.ಜಿ ಅಥವಾ 10:26:26 ಗೊಬ್ಬರ ಬಳಸಿದಲ್ಲಿ 58 ಕೆ.ಜಿ 10:26:26, ಯೂರಿಯಾ 30 ಕೆ.ಜಿ, ಎಮ್.ಓ.ಪಿ 92 ಕೆ.ಜಿ ಬಳಸಬಹುದಾಗಿದೆ. ಹಾಗೂ ಮೇಲು ಗೊಬ್ಬರವಾಗಿ 43 ಕೆಜಿ ಯೂರಿಯಾವನ್ನು ಬೆಳೆಯ 45 ರಿಂದ 50 ದಿನಗಳ ಹಂತದಲ್ಲಿ ಒಂದು ಬಾರಿ ಮಾತ್ರ ಮೇಲ್ಗೊಬ್ಬರವಾಗಿ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲ ಕಾರಣದಿಂದ ಅನಗತ್ಯವಾಗಿ ಯೂರಿಯಾ ಬಳಸದೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಮಿತವಾಗಿ ಬಳಸಿ ವ್ಯವಸಾಯದ ಖರ್ಚನ್ನು ಮಿತಗೊಳಿಸಿ ಹೆಚ್ಚು ಫಸಲು ಮತ್ತು ಆದಾಯ ಪಡೆಯುವ ಜಾಣ್ಮೆ ತೋರಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ  ತಿಳಿಸಿದ್ದಾರೆ.

 

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...