ಬೆಂಗಳೂರು: ಬಿಬಿಎಂಪಿಯ ಪೂರ್ವ ವಲಯಕ್ಕೆ ಸಂಬಂಧಿಸಿದಂತೆ ವಸತಿ ಸಚಿವರೂ ಆದ ಪೂರ್ವ ವಲಯದ ಕೋವಿಡ್-19 ಸೋಂಕು ನಿಂಯಂತ್ರಣಾ ಉಸ್ತುವಾರಿ ಸೋಮಣ್ಣ ಇಂದು ಮಧ್ಯಾಹ್ನ 3ಗಂಟೆಗೆ ಪೂರ್ವ ವಲಯದ ಎಲ್ಲಾ ಪಾಲಿಕೆ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ಆಯೋಜಿಸಿದ್ದಾರೆ.
ಎಂ.ಜಿ.ರಸ್ತೆಯ ಮೆಯೋಹಾಲ್ ನ ಕೆನೊಫಿ ಹೋಟೆಲ್ ಸಭಾಂಗಣ, 2ನೇ ಮಹಡಿ, ಪಿಯುಬಿ ಕಟ್ಟಡದಲ್ಲಿ ನಡೆಯುವ ಸಭೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಕುರಿತು ಯಾವುರೀತಿ ಕ್ರಮ ಜರುಗಿಸಬೇಕು, ಏನು ಮುಂಜಾಗ್ರತೆ ಅನುಸರಿಸಬೇಕು, ಈಗಾಗಲೇ ಸೋಂಕು ಇರುವವರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುವುದು ಸೇರಿದಂತೆ ಹಲವು ವಿಷಗಳ ಬಗ್ಗೆ ಚರ್ಚಿಸಲಾಗುವುದು ಎಂದು ಜಂಟಿ ಆಯುಕ್ತರು (ಪೂರ್ವ) ತಿಳಿಸಿದ್ದಾರೆ.