NEWSಆರೋಗ್ಯನಮ್ಮರಾಜ್ಯರಾಜಕೀಯ

ವೇತನ ತಾರತಮ್ಯ ಸರಿಪಡಿಸಲು ಆಗ್ರಹಿಸಿ ಆಯುಷ್‌ ವೈದ್ಯರ ಸಾಮೂಹಿಕ ರಾಜೀನಾಮೆ

ಆರೋಗ್ಯ ಸಚಿವ ಶ್ರೀರಾಮುಲುಗೆ ರಾಜೀನಾಮೆ ಪತ್ರ ನೀಡಿದ 1800 ಆಯುಷ್‌ ವೈದ್ಯರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೇತನ ತಾರತಮ್ಯ ಬಗೆಹರಿಸುವಂತೆ ಹಾಗೂ ಖಾಸಗಿ ಆಯುಷ್ ವೈದ್ಯರಿಗೂ ತುರ್ತು ಪರಿಸ್ಥಿತಿಯಲ್ಲಿ ಅಲೋಪತಿ ಔಷಧ ನೀಡಲು ಅವಕಾಶ ನೀಡುವಂತೆ ಒತ್ತಾಯಿಸಿ ರಾಜ್ಯದ 1,800 ಮಂದಿ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಸರ್ಕಾರಿ ಗುತ್ತಿಗೆ ವೈದ್ಯರ ಮುಷ್ಕರ, ಆಶಾ ಕಾರ್ಯಕರ್ತೆಯರ ಮುಷ್ಕರದ ನಡುವೆಯೇ ಕೊರೊನಾ ಸಂಕಷ್ಟದ ನಡುವೆ ಸರ್ಕಾರಕ್ಕೆ 3ನೇ ಸವಾಲು ಈ ಮೂಲಕ ಎದುರಾದಂತ್ತಾಗಿದೆ.

ರಾಜ್ಯಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ ಆಯುಷ್ ಕ್ಲಿನಿಕ್ ಗಳನ್ನು ಮುಚ್ಚಿರುವ ಆಯುಷ್ ವೈದ್ಯರು, ನಮ್ಮ ಬೇಡಿಕೆ ಈಡೆರುವವರೆಗೂ ಅನಿರ್ದಿಷ್ಟಾವಧಿ ಸೇವಾ ಬಹಿಷ್ಕಾರ ಮುಂದುವರಿಸಿದ್ದಾರೆ.

ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸೇವೆಯಿಂದ ಬಹುತೇಕ ಆಯುಷ್ ವೈದ್ಯರು ಹಿಂದೆ ಸರಿದಿದ್ದು, ವೈದ್ಯ ಸಿಬ್ಬಂದಿ ಕೊರತೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ಮಂಜೂರಾಗಿರುವ ಎಂಬಿಬಿಎಸ್ ಹುದ್ದೆಗಳಲ್ಲಿ ಆಯುಷ್ ವೈದ್ಯರು, ರಾಷ್ಟ್ರೀಯಬಾಲ್ ಸ್ವಾಸ್ಥ್ಯ ಕಾರ್ಯಕ್ರಮ ವೈದ್ಯರು, ರಾಷ್ಟ್ರೀಯ ಆರೋಗ್ಯ ಆಯೋಗದ ಅಡಿಯಲ್ಲಿ ಆಯುಷ್ ವೈದ್ಯರು ಗುತ್ತಿಗೆ ಆಧಾರದ ಮೇಲೆ ವಿಮೆ ಮತ್ತು ಪಿಎಫ್ ಇಲ್ಲದೆಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ಆಯುಷ್ ವೈದ್ಯರಿಗೆ 19,404 ರೂ. ಬಲ್ ಸ್ವಾಸ್ಥ್ಯ ವೈದ್ಯರಿಗೆ 25,000 ರೂ. ಎಂಬಿಬಿಎಸ್ ಮಾಡಿರುವವರಿಗೆ 26,000 ರೂ. ವೇತನ ನೀಡಲಾಗುತ್ತಿದೆ. ಆದರೆ, ಆಲೋಪತಿ ವೈದ್ಯರಿಗೆ 52,000 ರೂ.ವೇತನ ನೀಡಲಾಗುತ್ತಿದೆ.

ನಮಗೂ ಸಮಾನ ವೇತನ ಬೇಕು. ಕೊರೊನಾದಿಂದ ಸತ್ತರೆ ನಮಗೂ 50 ಲಕ್ಷ ರೂ. ಪರಿಹಾರ ನೀಡಬೇಕು. ಈಗಾಗಲೇ ಸಾಕಷ್ಟು ಆಯುಷ್ ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವೈದ್ಯ ಮಧುಕರ್  ಹೇಳಿದ್ದಾರೆ.

ಆಯುಷ್ ಫೆಡರೇಶನ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಡಾ.ಮಹವೀರ್ ಮಾತನಾಡಿ, ಖಾಸಗಿ ಆಯುಷ್ ವೈದ್ಯರಿಗೆ ಸಮಗ್ರ ತರಬೇತಿ ನೀಡಬೇಕು. ಸರ್ಕಾರಿ ಆಯುಷ್ ವೈದ್ಯರಿಗೆ ಅಲೋಪತಿ ಔಷಧಿಗಳ ಶಿಫಾರಸು ಮಾಡಲು ನಿಯಮ ರೂಪಿಸಲಾಯಿತು. ಆದರೆ ಅದನ್ನು ಖಾಸಗಿ ವೈದ್ಯರಿಗೆ ವಿಸ್ತರಿಸಲಾಗಿಲ್ಲ. ಸರ್ಕಾರವು ನಮ್ಮ ಸೇವೆಗಳನ್ನು ಕೋವಿಡ್ -19 ನಿರ್ವಹಣೆಗೆ ಉಚಿತವಾಗಿ ಬಳಸುತ್ತಿದೆ, ಆದರೆ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಬುಧವಾರ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ಎಲ್ಲಾ ವೈದ್ಯರ ರಾಜೀನಾಮೆ ಪತ್ರ ನೀಡಿದ್ದೇವೆ. ಅವರು ರಾಜೀನಾಮೆ ಅಂಗೀಕರಿಸಲು ಒಪ್ಪಿಲ್ಲ. ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ನಮ್ಮ ಸೇವೆ ಬಹಿಷ್ಕರಿಸಿದ್ದೇವೆ ಎಂದು ಭಾರತೀಯ ಆಯುಷ್ ವೈದ್ಯರ ಒಕ್ಕೂಟ ತಿಳಿಸಿದೆ.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ