ಬೆಂಗಳೂರು: ವಿಶ್ವ ಮಾರಿ ಕೊರೊನಾ ಮಂಗಳವಾರವೂ ಸಹ ರಾಜ್ಯದಲ್ಲಿ ಅಬ್ಬರಿಸಿದ್ದು ಬರೋಬ್ಬರಿ 3649 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 71,069 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಮರಣ ಮೃದಂಗವನ್ನು ತೀವ್ರಗೊಳಿಸಿದ್ದು ಇಂದು 61 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1470 ಕ್ಕೆ (ಅನ್ಯ ಕಾರಣಕ್ಕೆ 6ಸೇರಿ) ಏರಿಕೆಯಾಗಿದೆ.
ಕೊರೊನಾ ಸೋಂಕಿನಿಂದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 22 ಮಂದಿ ಸೇರಿ ರಾಜ್ಯದಲ್ಲಿ ಒಟ್ಟು 61 ಮಂದಿ ಮೃತಪಟ್ಟಿದ್ದು, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1714 ಪ್ರಕರಣಗಳು ಸೇರಿ ರಾಜ್ಯದಲ್ಲಿ ಒಟ್ಟು 3649 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 71,069ಕ್ಕೇರಿಕೆಯಾಗಿದೆ. ಈ ಪೈಕಿ 583 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ 520 ಜನ ಸೇರಿ ಒಟ್ಟು 1,664 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಉಳಿದಂತೆ ಬಳ್ಳಾರಿಯಲ್ಲಿ 193, ದಕ್ಷಿಣ ಕನ್ನಡದಲ್ಲಿ 149, ಮೈಸೂರಿನಲ್ಲಿ 135, ಯಾದಗಿರಿಯಲ್ಲಿ 117, ಉತ್ತರ ಕನ್ನಡದಲ್ಲಿ 109, ಹಾಸನದಲ್ಲಿ 107, ಕೋಲಾರದಲ್ಲಿ 103, ಕಲಬುರಗಿಯಲ್ಲಿ 99, ದಾವಣಗೆರೆಯಲ್ಲಿ 95, ಬೆಂಗಳೂರು ಗ್ರಾಮಾಂತರದಲ್ಲಿ 95, ಉಡುಪಿ, ಧಾರವಾಡದಲ್ಲಿ ತಲಾ84, ಚಿಕ್ಕಬಳ್ಳಾಪುರದಲ್ಲಿ 81, ಚಿಕ್ಕಮಗಳೂರಿನಲ್ಲಿ 68, ಬೀದರ್ನಲ್ಲಿ 66, ಬಾಗಲಕೋಟೆಯಲ್ಲಿ 65, ತುಮಕೂರು 47, ಕೊಪ್ಪಳ 45, ಹಾವೇರಿ 39, ಚಾಮರಾಜನಗರ 34, ಬೆಳಗಾವಿ 23, ಚಿತ್ರದುರ್ಗ 23, ಶಿವಮೊಗ್ಗ 20, ಗದಗದಲ್ಲಿ 15, ವಿಜಯಪುರ, ಮಂಡ್ಯದಲ್ಲಿ ತಲಾ 13, ರಾಮನಗರದಲ್ಲಿ 8, ರಾಯಚೂರಿನಲ್ಲಿ 4, ಕೊಡಗಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail