ಬೆಂಗಳೂರು: ಕೊರೊನಾಗೆ ಇಂದು ಬೆಂಗಳೂರಿನಲ್ಲಿ ಬೆಳಗ್ಗೆ 11.30ರ ವರೆಗೆ 16 ಮಂದಿ ಮೃತಪಟ್ಟಿದ್ದಾರೆ.
ವಿಕ್ಟೋರಿಯಾದಲ್ಲಿ ಇಬ್ಬರು ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಮೂರು, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಒಂದು ಸೇರಿ ನಗರದಲ್ಲಿ ಒಟ್ಟು 16 ಮಂದಿ ವಿಶ್ವಮಾರಿ ಕೊರೊನಾಗೆ ಬಲಿಯಾಗಿದ್ದು, ಇನ್ನು ಸಂಜೆ ವೇಳೆಗೆ ಇನ್ನೆಷ್ಟು ಮಂದಿಯನ್ನು ಇದು ಪಡೆಯುತ್ತದೆಯೋ ಎಂಬ ಆತಂಕ ಎದುರಾಗಿದೆ.
ಇನ್ನು ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಕೊಡಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದು, ಇದರಿಂದ ಸಿಎಂ ಬಿಎಸ್‌ವೈ ಅವರು ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾಗಿದ್ದು, ಇನ್ನು ಎಷ್ಟು ದಿನ ನಿಮ್ಮ ಜತೆ ಬರಿ ಸಭೆ ಮಾಡಿಕೊಂಡಿ ಕೂರಬೇಕು. ಕೊರೊನಾ ಸೋಂಕಿತರ ಬಗ್ಗೆ ನಿಮಗೇಕೆ ಕಾಳಜಿ ಇಲ್ಲ. ಅವರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.