ಬೆಂಗಳೂರು: ಕೊರೊನಾ ಗೆದ್ದು ಕರ್ತವ್ಯಕ್ಕೆ ಹಿಂತಿರುಗಿದ ಉಚ್ಚ ನ್ಯಾಯಾಲಯದ ಸಿಬ್ಬಂದಿ ಮೇರಿ ಜೋಸೆಫೈನ್ ಅವರನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.
ಈ ಮೂಲಕ ನಮ್ಮ ಹೋರಾಟ ರೋಗದ ವಿರುದ್ಧವೇ ಹೊರತು ರೋಗಿಗಳ ವಿರುದ್ಧ ಅಲ್ಲ ಎಂದು ಮೇಲ್ಪಂಕ್ತಿ ಹಾಕಿಕೊಟ್ಟಿರುವ ನ್ಯಾಯಮೂರ್ತಿಗಳಿಗೆ ನನ್ನ ಅಭಿನಂದನೆಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಮ್ಮ ಟ್ವಿಟರ್ನಲ್ಲಿ ತಿಳಿಸಿದ್ದಾರೆ.