NEWSನಮ್ಮಜಿಲ್ಲೆನಮ್ಮರಾಜ್ಯ

ರಾಜಧಾನಿಯಲ್ಲಿ ಕೊರೊನಾ ರಣ ಕೇಕೆ: 16 ಸಾವಿರ ಮೀರಿದ ಕಂಟೈನ್‌ಮೆಂಟ್‌ ವಲಯಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಕೊರೊನಾ ಸೋಂಕಿನಿಂದ ಜನರು ತತ್ತರಿಸಿಹೋಗುತ್ತಿದ್ದಾರೆ. ಈನಡುವೆ ಇಲ್ಲಿನ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆ ಎಷ್ಟು ಎಂದು ತಿಳಿದರೆ ನಿಮಗೆ ಭಯವಾಗದೆ ಇರದು.

ಹೌದು! ನಗರದಲ್ಲಿ ಈಗ 16005 ಕಂಟೈನ್ ಮೆಂಟ್ ವಲಯಗಳಿವೆ. ಮೇ ತಿಂಗಳಲ್ಲಿ ಇದ್ದದ್ದು ಕೇವಲ 20 ಕಂಟೈನ್ ಮೆಂಟ್ ವಲಯಗಳು. ಕೆಲ ದಿನಗಳಿಂದ ನಗರದಲ್ಲಿ ಸರಿಸುಮಾರು 2 ಸಾವಿರ ಕೋವಿಡ್-19 ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿವೆ. ಇವುಗಳಲ್ಲಿ 12325 ಸಕ್ರಿಯ ಕಂಟೈನ್ ಮೆಂಟ್ ವಲಯಗಳಾಗಿವೆ. ಬೆಂಗಳೂರು ದಕ್ಷಿಣ ವಲಯ ಅದರಲ್ಲಿ ಮುಂಚೂಣಿಯಲ್ಲಿದ್ದು 3935 ಕಂಟೈನ್ ಮೆಂಟ್ ವಲಯಗಳು, ಪೂರ್ವದಲ್ಲಿ 2256 ಪಶ್ಚಿಮದಲ್ಲಿ 1,770 ಬೊಮ್ಮನಹಳ್ಳಿಯಲ್ಲಿ 1,548 ಯಲಹಂಕದಲ್ಲಿ 437 ಪ್ರಕರಣಗಳಿವೆ. ಒಟ್ಟಾರೆ 13276 ರಸ್ತೆಗಳು, 1,276 ಅಪಾರ್ಟ್ ಮೆಂಟ್ ಗಳು, 23 ಕೊಳಚೆ ಪ್ರದೇಶಗಳು, 40 ಕ್ಲಸ್ಟರ್ ಗಳು ಮತ್ತು ಒಂದು ಹೊಟೇಲ್ ಗಳನ್ನು ಕಳೆದ ಸೋಮವಾರ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಬಿಬಿಎಂಪಿ ಕೋವಿಡ್-19 ವಾರ್ ರೂಂ ಅಂಕಿಅಂಶ ತಿಳಿಸಿದೆ.

ಲಾಕ್ ಡೌನ್ ಸಡಿಲ ಮಾಡಿದ ನಂತರ ನಿಮ್ಮ ಎಚ್ಚರಿಕೆ, ಮುಂಜಾಗರೂಕತೆಯಲ್ಲಿ ನೀವಿರಿ ಎಂದು ಎಷ್ಟು ಹೇಳಿದರೂ ಜನರು ಮುಂಜಾಗ್ರತೆ ಪಾಲಿಸುತ್ತಿಲ್ಲ, ಇದರಿಂದಾಗಿಯೇ ಇಷ್ಟೊಂದು ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದರೆ, ತಜ್ಞರ ಪ್ರಕಾರ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಜನರನ್ನು ಆರೋಪಿಸುವುದನ್ನು ನಿಲ್ಲಿಸಬೇಕು. ತೀವ್ರ ಸೋಂಕಿನ ಸಮಸ್ಯೆಯಲ್ಲಿರುವವರ ಬಗ್ಗೆ ಸರಿಯಾಗಿ ಸರ್ಕಾರ ಮತ್ತು ಪಾಲಿಕೆ ಸಮೀಕ್ಷೆ ನಡೆಸಿ ಹಿರಿಯರು ಮತ್ತು ಕೊಮೊರ್ಬಿಡ್ ರೋಗಿಗಳ ಹಿಮ್ಮುಖ ಪ್ರತ್ಯೇಕತೆ ಮಾಡಬೇಕು ಎನ್ನುತ್ತಿದ್ದಾರೆ.

ಕೋವಿಡ್ ತಜ್ಞರ ಸಮಿತಿಯ ಸದಸ್ಯ ಮತ್ತು ಪ್ರೊಫೆಸರ್ ಡಾ.ಗಿರಿಧರ್ ಬಾಬು, ಸಾರಿ ಮತ್ತು ಐಎಲ್ಐ ಸಮೀಕ್ಷೆಗಳನ್ನು ಪ್ರತಿ 10 ದಿನಗಳಿಗೊಮ್ಮೆ ನಡೆಸಬೇಕು. ಅದರ ಜತೆಗೆ ವಿಸ್ತೃತ ಪರೀಕ್ಷೆ, ಕಟ್ಟುನಿಟ್ಟಿನ ಕೊರೊನಾ ಸೋಂಕಿತರ ಪ್ರತ್ಯೇಕತೆ, ಹಿಮ್ಮುಖ ಕ್ವಾರಂಟೈನ್ ಗೊಳಪಡಿಸಬೇಕು. ಇದರಿಂದ ಕೊರೊನಾ ಹರಡುವುದನ್ನು ತಡೆಗಟ್ಟಬಹುದು ಜತೆಗೆ ಆಸ್ಪತ್ರೆಗಳ ಮೇಲೆ ಭಾರ ಬೀಳುವುದಿಲ್ಲ.ಸಾವಿನ ಪ್ರಮಾಣವನ್ನು ಕೂಡ ಕಡಿಮೆ ಮಾಡಬಹುದು ಎಂದು ವಿವರಿಸಿದ್ದಾರೆ.

ಆರಂಭಿಕ ಹಂತದಲ್ಲಿ ಕಂಟೈನ್‌ಮೆಂಟ್ ಪ್ರದೇಶಗಳೆಂದು ಸೀಲ್ ಡೌನ್ ಮಾಡುವುದು ಉಪಯೋಗವಾಗಬಹುದು. ಅದರ ಬದಲು ಈಗ ರಿವರ್ಸ್ ಕ್ವಾರಂಟೈನ್ ಮೇಲೆ ಗಮನ ನೀಡಬೇಕು. ಹಲವು ಪ್ರದೇಶಗಳಲ್ಲಿ ಸೋಂಕು ಹರಡಿದಾಗ ಕಂಟೈನ್ ಮೆಂಟ್ ಉತ್ತಮ ಕಾರ್ಯತಂತ್ರವಾಗುವುದಿಲ್ಲ. ಸರ್ಕಾರ ಕೊರೊನಾ ಸಮುದಾಯಕ್ಕೆ ಪಸರಿಸಿದೆ ಎಂದು ಒಪ್ಪಿಕೊಂಡರೆ ಆಗ ಕಂಟೈನ್ ಮೆಂಟ್‌ನಿಂದ ಆದ್ಯತೆಯನ್ನು ಬೇರೆಡೆಗೆ ಗಮನಹರಿಸಬೇಕು,ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಪ್ಪಿಸುವುದು ಮತ್ತು ಅಧಿಕ ಅಪಾಯ ಇರುವ ಗುಂಪನ್ನು ರಕ್ಷಿಸುವುದು ಎನ್ನುತ್ತಾರೆ ಡಾ.ಸಿಲ್ವಿಯಾ ಕರ್ಪಗಮ್.

ಬಹುತೇಕ ಎಲ್ಲಾ ಪ್ರದೇಶಗಳು ಕೊರೊನಾಯುಕ್ತವೆ
ತಜ್ಞರು, ಬಿಬಿಎಂಪಿ ಅಧಿಕಾರಿಗಳು ಸೂಕ್ಷ್ಮವಾಗಿ ಎಲ್ಲಾ ಪ್ರದೇಶಗಳನ್ನು ಗಮನಿಸುತ್ತಿದ್ದೇವೆ . ನಮ್ಮ ಫೀಲ್ಡ್ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸರಿಯಾದ ವಿಳಾಸ ಸಿಗದಿರುವುದರಿಂದ ಪಾಸಿಟಿವ್ ಆದವರನ್ನು ಪತ್ತೆ ಹಚ್ಚುವುದು ವಿಳಂಬವಾಗುತ್ತಿದೆ. ಇಲ್ಲದಿದ್ದರೆ ಅದೇ ದಿನ ಅಥವಾ ಮರುದಿನ ಬ್ಯಾರಿಕೇಡ್ ಹಾಕಲಾಗುತ್ತದೆ ಎಂದು ಬೆಂಗಳೂರಿನ ಕಂಟೈನ್ ಮೆಂಟ್ ಪ್ರದೇಶವೊಂದರ ಉಸ್ತುವಾರಿ ಹೊತ್ತಿರುವ ಬಿಬಿಎಂಪಿ ನೋಡಲ್ ಅಧಿಕಾರಿ ಬಸವರಾಜ್  ತಿಳಿಸುತ್ತಾರೆ.

Leave a Reply

error: Content is protected !!
LATEST
KSRTC ನೌಕರರ ವೇತನ ವಿಷಯದಲ್ಲಿನ ನಿಮ್ಮ ಗೋಸುಂಬೆ ಆಟಗಳಿಗೆ ಯಾರು ಇಲ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ..!! NWKRTC: ಪಿಎಫ್‌ ಲೋನ್‌ ಹಣ ರಿಲೀಸ್‌ಗೂ ಕೊಡಬೇಕು ಸಾವಿರಾರು ರೂ. ಲಂಚ - ಧನದಾಹಿ ಸಿ.ಎಸ್‌.ಗೌಡರ್‌ ಪರ ನಿಂತರೇ ಡಿಸಿ? ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ- ಸ್ಥಗಿತಗೊಂಡ ರೈತರ ಕೆಲಸ ಕಾರ್ಯಗಳು ಸಾಲುಮರದ ತಿಮ್ಮಕ್ಕನವರಿಂದ ಮನುಕುಲ ರಕ್ಷಿಸುವ ಕೆಲಸವಾಗಿದೆ: ಗೃಹ ಸಚಿವ ಪರಮೇಶ್ವರ್‌ ಜನರ ಸಮಸ್ಯೆಗೆ ಧ್ವನಿಯಾಗಲಿದೆ ಎಎಪಿ: ಪಾರ್ಕ್, ಆಟದ ಮೈದಾನದಲ್ಲಿ ಅವ್ಯವಸ್ಥೆ ಇದ್ದರೆ ಫೋಟೊ, ವಿಡಿಯೋ ಕಳಿಸಿ ಬನ್ನೂರು ಕಾವೇರಿ ವೃತ್ತ, ಬಸವೇಶ್ವರ ಪ್ರತಿಮೆ ಬಳಿಯ ಸಿಸಿ ಕ್ಯಾಮರಾ ತೆರವಿಗೆ ಆಗ್ರಹಿಸಿ ಸಹಸ್ರಾರು ರೈತರ ಪ್ರತಿಭಟನೆ- ಆ... ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ WELCOME TO KSRTC ಸ್ನಾನಗೃಹ ಬಸ್ - ಕಳಪೆ ಬಸ್‌ ಬಿಟ್ಟ NWKRTC ನಿಗಮಕ್ಕೆ ಛೀಮಾರಿಹಾಕಿದ ಪ್ರಯಾಣಿಕ KSRTC: ಬಸ್‌ ಬರುತ್ತಿರುವುದ ಗಮನಿಸದೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಡಿಕ್ಕಿ- ಕಾಲು ಮುರಿತ