ಬೆಂಗಳೂರು: ಕೊರೊನಾ ಸೋಂಕಿನಿಂದ ಸೃಷ್ಟಿಯಾಗಿರುವ ನವಯುಗದ ತಾರತಮ್ಯ, ಅಸ್ಪೃಶ್ಯತೆಗೆ ಮನನೊಂದು ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರು ಆತ್ಮಹತ್ಯೆಗೆ ಶರಣಾದರೆಂಬ ಸುದ್ದಿ ತಿಳಿದು ಬೇಸರವಾಗಿದ್ದು, ಇಂಥ ಕೆಲಸಕ್ಕೆ ಯಾರು ಮುಂದಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಸರ್ಕಾರ ಸೋಂಕಿತರು,ಕುಟುಂಬದವರ ವಿಚಾರದಲ್ಲಿ ಸೂಕ್ಷ್ಮವಾಗಿ,ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಹೇಳಿದ್ದು ಇದೇ ಕಾರಣಕ್ಕೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ತಿಳಿಸಿದ್ದಾರೆ.
ಕ್ವಾರಂಟೈನ್ ಮಾಡಲೆಂದು ಸೋಂಕಿತರ ಮನೆಗಳ ಮುಂದೆ ಸೂಚನಾ ಫಲಕ ಹಾಕುವುದು, ಅವರ ಮನೆ ಬಂದ್ ಮಾಡುವುದು ಹೊಸ ತಾರತಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಸರ್ಕಾರದ ಅವಾಂತರಗಳಿಗೆ ಇದೊಂದು ಉದಾಹರಣೆಯಷ್ಟೆ. ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂಥ ಘಟನೆಗಳು ಹೆಚ್ಚದಿರಲಿ. ಸರ್ಕಾರ ಜವಾಬ್ದಾರಿ ಮೆರೆಯಲಿ ಎಂದು ಹೇಳಿದ್ದಾರೆ.
Ivargella estu helidaru aste bidi sir