ತಿ.ನರಸೀಪುರ: ಮೈಸೂರು ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಅದು ತಿ.ನರಸೀಪುರ ತಾಲೂಕಿನಲ್ಲೂ ಮುಂದುವರಿದಿದ್ದು, ಇಂದು ಒಂದೇದಿನ 10 ಕೊರೊನಾ ಸೋಂಕಿತರು ಪತ್ತೆಯಾಗಿದ್ದು ತಾಲೂಕಿನಾದ್ಯಂತ ಒಟ್ಟು 101 ಮಂದಿಗೆ ವಕ್ಕರಿಸಿದೆ.
ಕೊರೊನಾ ಸೋಂಕಿತರನ್ನು ಮೈಸೂರಿನ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಮನೆಯವರಿಗೆ ಸೋಂಕಿನ ಬಗ್ಗೆ ತಿಳಿವಳಿಕೆ ನೀಡಿ ಮನೆಯಿಂದ ಹೊರ ಬಾರದಂತೆ ತಿಳಿಸಿದ್ದಾರೆ.
ಒಟ್ಟಾರೆ ಕೊರೊನಾ ತಾಲೂಕಿನ ಗ್ರಾಮಗ್ರಾಮಕ್ಕೂ ಹಬ್ಬುತ್ತಿದ್ದು, ಜನರು ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಮಾಸ್ಕ್, ಸ್ವಾನಿಟೈಸರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.