ಮೈಸೂರು: ಕ್ವಾರಂಟೈನ್ ಉಲ್ಲಂಘಿಸಿ ತಲೆ ಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನ ಸಂಬಂಧಿಕರ ಮನೆಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಹೈದರಾಬಾದ್ನಿಂದ ಕ್ವಾರಂಟೈನ್ ಗೋಡೆ ಹಾರಿ ಬಂದು ಸುದ್ದಿವಾಹಿನಿಯೊಂದರಲ್ಲಿ ತಮ್ಮ ಬಗ್ಗೆ ಎದ್ದಿದ್ದ ಆರೋಪಗಳನ್ನು ಸಾಬೀತುಪಡಿಸಲು ಬಂದು ಹೋದನಂತರ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದ ಬೆಂಗಳೂರು ಪೊಲೀಸರ ಕೈಗೆ ಮೈಸೂರಲ್ಲಿ ಸಿಕ್ಕಿದ್ದಾನೆ.
ಈತನನ್ನು ಹಿಡಿಯಲು ಮೂರು ತಂಡಗಳನ್ನು ಮಾಡಲಾಗಿತ್ತು. ಕ್ವಾರಂಟೈನ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಮೈಸೂರಲ್ಲಿ ಪ್ರತಾಪನನ್ನು ವಶಕ್ಕೆ ಪಡೆದುಕೊಂಡು ಬೆಮಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.