NEWSದೇಶ-ವಿದೇಶನಮ್ಮರಾಜ್ಯರಾಜಕೀಯ

ಆಮ್ ಆದ್ಮಿ ಪಕ್ಷದ ಕರ್ನಾಟಕ  ನೂತನ ಉಸ್ತುವಾರಿ ಕಪಿಲ್ ಭಾರದ್ವಾಜ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಮ್ ಆದ್ಮಿ ಪಕ್ಷದ ಕರ್ನಾಟಕ  ನೂತನ ಉಸ್ತುವಾರಿಯಾಗಿ  ಕಪಿಲ್ ಭಾರದ್ವಾಜ್  ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ತಿಳಿಸಿದ್ದಾರೆ.

ನ್ಯೂಡೆಲ್ಲಿ ಚುನಾವಣಾ ವಿಜಯದ ನಂತರ ಆಮ್ ಆದ್ಮಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಹೊರಟಿದ್ದು, ಇದರ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿನ ಘಟಕಗಳಲ್ಲಿ ಸಂಘಟನೆಯ ಪುನರ್ರಚನೆ ಮಾಡುತ್ತಿದೆ.

ಅಂತೆಯೇ  ಪಕ್ಷ ಕರ್ನಾಟಕದ ನೂತನ ರಾಜ್ಯ ಉಸ್ತುವಾರಿಯಾಗಿ ಆಮ್ ಆದ್ಮಿ ಪಕ್ಷದ ಭರವಸೆಯ ಯುವ ನಾಯಕ, ಚುನಾವಣಾ ತಂತ್ರಜ್ಞ, ನ್ಯೂಡೆಲ್ಲಿಯ ಗ್ರಾಹಕ ಸಹಕಾರ ಸಂಘದ ಅಧ್ಯಕ್ಷ ಕಪಿಲ್  ಭಾರದ್ವಾಜ ಅವರನ್ನು ಪಕ್ಷದ ರಾಷ್ಟೀಯ ವ್ಯವಹಾರಗಳ ಸಮಿತಿ ನೇಮಿಸಿದೆ ಎಂದು ತಿಳಿಸಿದ್ದಾರೆ.

ಕಪಿಲ್ ಭಾರದ್ವಾಜ್  ಅವರು ಯುಎಸ್ಎಯಲ್ಲಿ ಶಿಕ್ಷಣವನ್ನು ಪೂರೈಸಿ ಕೆಲ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ, ತಮ್ಮದೇ ಆದ ಸಾಫ್ಟ್ವೇರ್ ಉದ್ಯಮವನ್ನು ಆರಂಭಿಸಿದ್ದಾರೆ. 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಸಮಿತಿ ಹಾಗೂ ಬೂತ್ ಮ್ಯಾನೇಜ್ಮೆಂಟ್ ನ ಉಸ್ತುವಾರಿಯಾಗಿದ್ದರು. ನಂತರ 2017 ಪಂಜಾಬ್ ವಿಧಾನಸಭೆ ಚುನಾವಣೆ ಹಾಗೂ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು.

ಫೆಬ್ರವರಿಯಲ್ಲಿ ನಡೆದ ನ್ಯೂಡೆಲ್ಲಿ  ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮತ್ತು ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಪಕ್ಷದ ಗೆಲುವಿನ ರೂವಾರಿಯಾಗಿದ್ದರು.

ಕಪಿಲ್ ಭಾರದ್ವಾಜ್  ಅವರ ನೇಮಕವನ್ನು ಹರ್ಷದಿಂದ ಸ್ವಾಗತಿಸಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು, ದೆಹಲಿಯ ಜನಪರ ಆಡಳಿತದ ಮಾದರಿಯು ನಮ್ಮ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಈ ಕನಸು ಕೈಗೂಡಲು ಕಪಿಲ್ ಭಾರದ್ವಾಜ್ ಜತೆಗೆ ಪಕ್ಷವು ಶ್ರಮಿಸಲಿದೆ ಎಂದು ಹಾರೈಸಿದ್ದಾರೆ. .

ನೇಮಕಾತಿಯ ನಂತರ ಕನ್ನಡಲ್ಲೇ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ ಕಪಿಲ್,  ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಆಡಳಿತದಲ್ಲಿ ಮತ್ತು ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಕೇವಲ ಲೂಟಿಯೊಂದೇ ಗುರಿಯಾಗಿಟ್ಟುಕೊಂಡಿರುವ ಈ ಸರ್ಕಾರವು ಕರ್ನಾಟಕದ ಹೆಸರನ್ನು ಹಾಳುಗೆಡವುತ್ತಿದೆ ಎಂದರು.

ಈ ಬಾರಿ ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ- ಸ್ಥಗಿತಗೊಂಡ ರೈತರ ಕೆಲಸ ಕಾರ್ಯಗಳು ಸಾಲುಮರದ ತಿಮ್ಮಕ್ಕನವರಿಂದ ಮನುಕುಲ ರಕ್ಷಿಸುವ ಕೆಲಸವಾಗಿದೆ: ಗೃಹ ಸಚಿವ ಪರಮೇಶ್ವರ್‌ ಜನರ ಸಮಸ್ಯೆಗೆ ಧ್ವನಿಯಾಗಲಿದೆ ಎಎಪಿ: ಪಾರ್ಕ್, ಆಟದ ಮೈದಾನದಲ್ಲಿ ಅವ್ಯವಸ್ಥೆ ಇದ್ದರೆ ಫೋಟೊ, ವಿಡಿಯೋ ಕಳಿಸಿ ಬನ್ನೂರು ಕಾವೇರಿ ವೃತ್ತ, ಬಸವೇಶ್ವರ ಪ್ರತಿಮೆ ಬಳಿಯ ಸಿಸಿ ಕ್ಯಾಮರಾ ತೆರವಿಗೆ ಆಗ್ರಹಿಸಿ ಸಹಸ್ರಾರು ರೈತರ ಪ್ರತಿಭಟನೆ- ಆ... ಸೆ.27ರಂದು EPS ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ WELCOME TO KSRTC ಸ್ನಾನಗೃಹ ಬಸ್ - ಕಳಪೆ ಬಸ್‌ ಬಿಟ್ಟ NWKRTC ನಿಗಮಕ್ಕೆ ಛೀಮಾರಿಹಾಕಿದ ಪ್ರಯಾಣಿಕ KSRTC: ಬಸ್‌ ಬರುತ್ತಿರುವುದ ಗಮನಿಸದೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಡಿಕ್ಕಿ- ಕಾಲು ಮುರಿತ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಿದ ಕೆಎಚ್‌ಎಂ ಹೈಕೋರ್ಟ್ ಬಿಗ್ ಶಾಕ್ ಜತೆಗೆ ಸಿಎಂ ಸಿದ್ದರಾಮಯ್ಯಗೆ ನಾಳೆ ಕೂಡ ಮಹತ್ವದ ದಿನ