ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 2627 ಹೊಸ ಸೋಂಕಿತರು ಭಾನುವಾರ ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 38843 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇಂದು 71 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಈವರೆಗೆ ರಾಜ್ಯದಲ್ಲಿ 688 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ. ಇಂದು ರಾಜ್ಯದ 71 ಮಂದಿ ಅಸುನೀಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ 1525, ದಕ್ಷಿಣ ಕನ್ನಡ 196, ಧಾರವಾಡ 129, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 71, ರಾಯಚೂರು 48, ಮೈಸೂರು 42, ಹಾಸನ್ 31, ಚಿಕ್ಕಬಳ್ಳಾಪುರ 39, ಹಾವೇರಿ 44, ಚಾಮರಾಜನಗರ 10, ರಾಮನಗರ 4 ಸೇರಿ ರಾಜ್ಯದಲ್ಲಿ 2627 ಮಂದಿ ಸೋಂಕಿಗೆ ಇಂದು ಒಳಗಾಗಿದ್ದಾರೆ.
38843 ಜನರ ಪೈಕಿ 15409 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 22746 ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇನ್ನು ಬೆಂಗಳೂರಿನಲ್ಲಿ 45, ಮೈಸೂರು 3, ಹಾವೇರಿಯಲ್ಲಿ 2, ರಾಮನಗರದಲ್ಲಿ ಒಂದು ಸೇರಿ ಒಟ್ಟು 71ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಭಾನುವಾರ ಒಂದೇ ದಿನ 693 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 532 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ 867,020 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 867,020 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 22,762 ಮಂದಿ ಮೃತಪಟ್ಟಿದ್ದಾರೆ. 541,227 ಮಂದಿ ರೋಗಮುಕ್ತರಾಗಿದ್ದಾರೆ. 303,031 ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಪಂಚಾದ್ಯಂತ ಈವರೆಗೆ 12,896,697 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 568,586 ಜನರು ಮೃತಪಟ್ಟಿದ್ದಾರೆ, 7,512,511 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail