ಇಸ್ಲಾಮಾಬಾದ್: ಪಾಕಿಸ್ಥಾನದ ವಶದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ವಕೀಲರನ್ನು ನೇಮಿಸಬೇಕೆಂದು ಪಾಕ್ ಸರ್ಕಾರ, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಪಾಕ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖೀಸಿದೆ.
ಆದರೆ ಇಂಥ ಅರ್ಜಿಯನ್ನು ಸಲ್ಲಿಸುವಾಗ, ಸಂಬಂಧ ಪಟ್ಟಿರುವ ಭಾರತವನ್ನಾಗಲಿ, ಜಾಧವ್ ಅಭಿಪ್ರಾಯವನ್ನಾಗಲೀ ಪಡೆ ಯುವ ಸೌಜನ್ಯವನ್ನು ಸರ್ಕಾರ ತೋರಿಸಿಲ್ಲ. ಅಂದರೆ ಅದಕ್ಕೆ ಅನಿಸಿದಂತೆ ಮಾಡುತ್ತಿದೆ ಎಂಬ ಅನುಮಾನ ಇದರಿಂದ ಶುರುವಾಗಿದೆ.
Avra bhuddi elli bidthare