ಮಂಡ್ಯ: ಹೊರ ದೇಶದಿಂದ ಬಂದಿರುವವರನ್ನು ಜಿಲ್ಲೆಯ ಕೆ.ಆರ್.ಪೇಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿ ಕ್ವಾರಂಟೈನ್‌ನಲ್ಲಿರುವವರು ಇಂದು ಬೀದಿಗಿಳಿದು ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ವಿದೇಶದಿಂದ ಬಂದವರನ್ನು ಕೆ.ಆರ್.ಪೇಟೆಯ ಗವಿಮಠ ಸಮೀಪದ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಅವರು ನಮಗೆ ಸರಿಯಾದ ಚಿಕತ್ಸೆ ನೀಡುತ್ತಿಲ್ಲ. ಆಹಾರವನ್ನು ಕೊಡುತ್ತಿಲ್ಲ. ಕುರಿದೊಡ್ಡಿಗೆ ಹಾಕಿದಂತೆ ನಮ್ಮನ್ನು ಹಾಕಿ ಅಧಿಕಾರಿಗಳು ಹೋಗಿದ್ದಾರೆ ಎಂದು ಪ್ರತಿಟನಾಕಾರರು ಆರೋಪಿಸಿದ್ದಾರೆ.
ಇನ್ನು ನಾವು ಬಂದು 14 ದಿನಕ್ಕೂ ಹೆಚ್ಚು ದಿನವಾಗಿದೆ ಆದರೂ ನಮ್ಮನ್ನು ತಪಾಸಣೆಗೆ ಒಳಪಡಿಸಿ ಮನೆಗೆ ಹೋಗಲು ಅನುವು ಮಾಡಿಕೊಡುತ್ತಿಲ್ಲ. ಇದರಿಂದ ನಮಗೆ ಇಲ್ಲಿ ಇರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಆತ್ಮಹತ್ಯೆ ಬೆದರಿಕೆ
ಇನ್ನು ಕಲಬುರಗಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಕ್ವಾರಂಟೈನ್‌ಗೆ ಒಳಪಡಿಸಿರುವವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇದೇ ರೀತಿ ಅಧಿಕಾರಿಗಳು ಮಾಡಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆಯನ್ನು ಹಾಕಿದ್ದಾರೆ.
ಆದರೂ ಅಧಿಕಾರಿಗಳು ಮಾತ್ರ ಇವರಿಗೆ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದ ಆರೋಪ ಕೇಳಿಬರುತ್ತಿದೆ. 14 ದಿನ ಕ್ವಾರಂಟೈನ್ ಅವಧಿ ಮುಗಿಸಿರುವ ನಮ್ಮನ್ನು ಮನೆಗೆ ಕಳುಹಿಸಿ ಎಂದು ಕ್ವಾರಂಟೈನ್‌ಗಳು ಹೇಳುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail