ನ್ಯೂಡೆಲ್ಲಿ: ಸತತವಾಗಿ 3ನೇ ದಿನವೂ ಕೂಡ ಭಾರತದಲ್ಲಿ 6ಸಾವಿರಕ್ಕೂ ಹೆಚ್ಚು ಕೊರೋನಾ ಕೇಸು ಪತ್ತೆಯಾಗಿದ್ದು, ಸೋಮವಾರ ದಾಖಲೆಯ 6,977 ಪ್ರಕರಣಗಳು ದೃಢಪಟ್ಟಿದ್ದು, 154 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,845ಕ್ಕೆ ಏರಿದೆ.
ಇನ್ನು 24 ಗಂಟೆಗಳಲ್ಲಿ ಮಹಾಮಾರಿಗೆ 154 ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 4021ಕ್ಕೆ ಏರಿಕೆಯಾಗಿದೆ. 1,38,845 ಮಂದಿ ಸೋಂಕಿತರಲ್ಲಿ 57720 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ. ಒಂದೇ ದಿನ 6,977 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಈ ವರೆಗಿನ ಗರಿಷ್ಠ ಪ್ರಮಾಣವಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಅತೀ ಹೆಚ್ಚು 3041 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ತಮಿಳುನಾಡಿನಲ್ಲಿ 765, ನ್ಯೂಡೆಲ್ಲಿ 508, ಗುಜರಾತ್ 394, ಪಶ್ಚಿಮ ಬಂಗಾಳದಲ್ಲಿ 208 ಮತ್ತು ರಾಜಸ್ತಾನದಲ್ಲಿ 152, ಕರ್ನಾಟಕದಲ್ಲಿ 130 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ದೇಶದ ಜನರು ಕೊರೊನಾ ಭಯದಲ್ಲೇ ಬದುಕು ಸಾಗಿಸಬೇಕಾದ ಪರಿಸ್ಥತಿ ಇನ್ನಷ್ಟು ಹೆಚ್ಚಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail