ನ್ಯೂಡೆಲ್ಲಿ: ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ ಎಂದು ಅಮೆರಿಕ ಉದ್ಯಮಿಗಳಿಗೆ ಆಹ್ವಾನ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತ-ಅಮೆರಿಕ ಉದ್ಯಮ ಮಂಡಳಿ ಆಯೋಜಿಸಿರುವ 2 ದಿನಗಳ ಇಂಡಿಯಾಸ್ ಐಡಿಯಾಸ್ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಜನತೆಯನ್ನುದ್ದೇಶಿಸಿ ಮೋದಿ ಮಾತನಾಡಿದರು.
ಭಾರತದಲ್ಲಿ ಬಂಡವಾಳ ಹೂಡಿಕೆ ಈ ಸಮಯ ಅತ್ಯಂತ ಸೂಕ್ತವಾಗಿದೆ ಇನ್ನು ಮುಂದೆ ಈ ರೀತಿಯ ಸಮಯ ಬರುವುದಿಲ್ಲ ಹೀಗಾಗಿ ಉದ್ಯಮಿಗಳು ಹೂಡಿಕೆ ಮಾಡಲು ಮುಂದೆ ಬನ್ನಿ ಎಂದು ಮೋದಿ ಒತ್ತಿ ಹೇಳಿದ್ದಾರೆ.
ಕೊರೊನಾ ಸೋಂಕು ಸವಾಲುಗಳನ್ನು ಎದುರಿಸಿ ಸದೃಢ ಜಗತ್ತನ್ನು ನಾವು ಕಟ್ಟಬೇಕಿದೆ. ವಿಶ್ವ ಕಲ್ಯಾಣಕ್ಕಾಗಿ ಭಾರತ ಮತ್ತು ಅಮೆರಿಕ ಈ ಕೆಲಸವನ್ನು ಶ್ರದ್ಧೆಯಿಂದ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.
ಆತ್ಮನಿರ್ಭರ್ ಭಾರತದ ಮೂಲಕ ಭಾರತವು ವಿಶ್ವದ ಏಳಿಗೆ ಮತ್ತು ಸ್ಥಿತಿಸ್ಥಾಪಕತ್ವದೆಡೆಗೆ ಕೊಡುಗೆ ನೀಡುತ್ತಿದೆ. ಅದೇ ರೀತಿ ನಾವು ಅಮೆರಿಕದ ಸಹಭಾಗಿತ್ವವನ್ನು ಬಯಸಿದ್ದೇವೆ. ಜತೆಗೆ ಪ್ರತಿವರ್ಷ ನಾವು ವಿದೇಶಾಂಗ ನೀತಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ ಎಂದು ವಿವರಿಸಿದರು.
2019-20ರಲ್ಲಿ ಭಾರತದಲ್ಲಿ ಎಫ್‌ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಇದೀಗ ಶೇ. 20ರಷ್ಟು ಏರಿಕೆಯಾಗಿದೆ. ಭಾರತವು ಏಪ್ರಿಲ್-ಜುಲೈ ನಡುವಿನಲ್ಲಿ 20 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ. ಮಾರುಕಟ್ಟೆಗಳು ಯಾವಾಗ ತೆರೆದುಕೊಳ್ಳುತ್ತದೆಯೋ ಆ ವೇಳೆ ಅವಕಾಶ ಮತ್ತು ಆಯ್ಕೆಗಳು ಹೆಚ್ಚಾಗಿ ಸಿಗಲಿವೆ ಎಂದು ಪ್ರಧಾನಿ ಹೇಳಿದರು.
Hudrappa hudi next electionge higle ready agthide