ನ್ಯೂಡೆಲ್ಲಿ: ರಾಜಾಸ್ಥಾನದ ಅಧಿಕಾರದ ನಾಟಕದ ಮುಂದಿನ ಅಂಕ ಬೆಂಗಳೂರಿನಲ್ಲಿ ತೆರೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕೆಂಪು ಬಾವುಟ ಹಾರಿಸಿ ಹರಿಯಾಣದ ಹೋಟೆಲ್ ಒಂದರಲ್ಲಿ ಬೀಡುಬಿಟ್ಟಿದ್ದ ಸಚಿನ್ ಪೈಲಟ್ ಮತ್ತವರ ಬೆಂಗಲಿಗ ಶಾಸಕರ ದಂಡು ಈಗ ಬೆಂಗಳೂರಿಗೆ ತಮ್ಮ ವಾಸ ಬದಲಿಸಲಿದೆ ಎಂದು ಹೇಳಲಾಗುತ್ತಿದ್ದೆ.
ತಮ್ಮನ್ನು ಹುಡುಕಿಕೊಂಡು ರಾಜಾಸ್ಥಾನ ಪೊಲೀಸರು ತಂಡ ಹರಿಯಾಣದ ರೆಸಾರ್ಟ್‌ಗೆ ಬರುತ್ತಿರುವ ವಿಷಯ ಗೊತ್ತಾದ್ದರಿಂದ ಪೈಲಟ್ ಗ್ಯಾಂಗ್ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಈಗ ಬಿಜೆಪಯದ್ದೇ ಸರ್ಕಾರವಿರುವ ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದೆ.
ರಾಷ್ಟ್ರಪತಿ ಆಡಳಿತಕ್ಕೆ ಮಾಯಾವತಿ ಆಗ್ರಹ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಶಿಫಾರಸು ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಜನರ ದುರಾದೃಷ್ಟ ಎಂದ ವಸುಂಧರಾ
ಕಾಂಗ್ರೆಸ್ ಒಳಜಗಳಕ್ಕೆ ರಾಜಸ್ಥಾನಿ ಜನರ ಹಣ ವ್ಯರ್ಥವಾಗುತ್ತಿರುವುದು ದುರದೃಷ್ಟಕರ ಎಂದು ಅಧಿಕಾರಕ್ಕಾಗಿ ಕಾಗ್ರೆಸಿನಲ್ಲಿ ಕಿತ್ತಾಟ ಮುಗಿಲೇರಿರುವುದಕ್ಕೆ ಮಾಜಿ ಸಿಎಂ ವಸುಂಧರಾ ರಾಜೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.