Please assign a menu to the primary menu location under menu

NEWSನಮ್ಮರಾಜ್ಯಸಿನಿಪಥ

ತ್ರಿಕೋನ ಚಿತ್ರಕ್ಕೆ ಸಿಕ್ಕಾಯಿತು ಯು/ಎ ಪ್ರಮಾಣಪತ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತ್ರಿಭಾಷೆಯಲ್ಲಿ ನಿರ್ಮಾಣವಾಗಿರುವ ತ್ರಿಕೋನ ಚಿತ್ರಕ್ಕೆ ಕನ್ನಡದಲ್ಲಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ಇದರಿಂದ ಖುಷಿಯಾಗಿರುವ ಚಿತ್ರತಂಡ ಲಾಕ್ ಡಾನ್ ಸಡಿಲಗೊಂಡು ಚಿತ್ರಮಂದಿರ ಬಾಗಿಲು ತೆರೆದ ತಕ್ಷಣ ಸಿನಿಮಾ ಬಿಡುಗಡೆ ಮಾಡಲು ಅಣಿಯಾಗಿದೆ.

ರಾಜಶೇಖರ್ ಈ ಚಿತ್ರಕ್ಕೆ ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಂಡವಾಳ ಹೂಡಿದ್ದಾರೆ. ಜತೆಗೆ ಇವರೇ ಕಥೆ ಬರೆದಿದ್ದಾದ್ದು, ʼ143ʼ ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನವಿದೆ.

ವಿಶೇಷವೆಂದರೆ ಈ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೇ ಸೌಂಡ್ ಮ್ಯೂಟ್ ಸಹ ಮಾಡದೆ ಸೆನ್ಸಾರ್ ಮಂಡಳಿಯು ಯು/ಎ ಅರ್ಹತಾ ಪತ್ರನೀಡಿದ್ದು, ಚಿತ್ರತಂಡಕ್ಕೆ ಹೆಮ್ಮೆ ಎನಿಸಿದೆ, ಇನ್ನು ತೆಲುಗು ತಮಿಳಿನಲ್ಲೂ ಸದ್ಯದಲ್ಲೇ ಸೆನ್ಸಾರ್ ಆಗಲಿದ್ದು, ಆ ಮೂಲಕ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ.

ಮೂರು ಭಾಷೆಗಳಲ್ಲಿ ಮೂರು ಬೇರೆ ಚಿತ್ರಕಥೆಯೊಂದಿಗೆ ಚಿತ್ರ ನಿರ್ಮಿಸಿರುವುದು ಚಿತ್ರರಂಗದ ಇತಿಹಾಸದಲ್ಲೇ ಇದು ಪ್ರಥಮ ಪ್ರಯತ್ನ ಎಂದು ನಿರ್ಮಾಪಕ ರಾಜಶೇಖರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಇನ್ನು ಸುರೇಂದ್ರನಾಥ್ ಸಂಗೀತ ನಿರ್ದೇಶನ, ಶ್ರೀನಿವಾಸ್ ಮೇಲುಕೋಟೆ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ಜಾನಿ ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಸುರೇಶ್ ಹೆಬ್ಳಿಕರ್, ಲಕ್ಷ್ಮಿ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧು ಕೋಕಿಲ, ಭಜರಂಗಿ ಮಾರುತೇಶ್ , ರಾಜೀವರ್‌, ಅದಿತಿ ರಾಜ್, ಹಾಸಿನಿ ತಾರಾಬಳಗದಲ್ಲಿದ್ದಾರೆ.

Leave a Reply

error: Content is protected !!
LATEST
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ