ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಸೋಂಕಿನ ನಡೆವೆ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಿದ್ದು, ವಿಧಾನ ಪರಿಷತ್ತಿಗೆ ಐವರು ಸದಸ್ಯರ ನಾಮಕರಣ ಪ್ರಕ್ರಿಯೆಯನ್ನು ಸದ್ದಿಲ್ಲದೇ ಆರಂಭಿಸಿದೆ.
ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈ ಬಾರಿಯೂ ಹಳ್ಳಿ ಹಕ್ಕಿ ವಿಶ್ವನಾಥ್‌ಗೆ ನಿರಾಸೆ ಕಾದಿದೆ ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ತಿನ ಐದು ಸ್ಥಾನಗಳ ಪೈಕಿ ವಿಶ್ವನಾಥ್ ಅವರನ್ನು ಒಂದು ಸ್ಥಾನಕ್ಕೆ ನಾಮಕರಣ ಇರಾದೆಯನ್ನು ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ. ಆದರೆ ಬಿಜೆಪಿ ದಿಲ್ಲಿ ಪ್ರಭುತ್ವ ಸಿಎಂ ಕೋರಿಕೆಗೆ ಕೆಂಪು ಬಾವುಟ ಹಾರಿಸುವ ಮೂಲಕ ಹಳ್ಳಿಹಕ್ಕಿಯ ರೆಕ್ಕೆಯನ್ನು ದುರ್ಬಲಗೊಳಿಸು ಹೊರಟಿದೆ ಎಂದು ಹೇಳಿಲಾಗುತ್ತಿದೆ.
ಈ ಮೂಲಕ ತಾವು ಮತ್ತೊಮ್ಮೆ ಸಿಎಂ ಆಗಲು ಸಹಕರಿಸಿದ ವಿಶ್ವನಾಥ್ ಅವರನ್ನು ಎಂಎಲ್‌ಸಿ ಮಾಡುವ ಬಿಎಸ್ವೈ ಪ್ರಯತ್ನ ಈ ಬಾರಿಯೂ ಕೈಗೂಡುವ ಯಾವುದೇ ಸಾಧ್ಯತೆಗಳಿಲ್ಲ ಎನ್ನಲಾಗಿದೆ.
ವಿಶ್ವನಾಥ್ ಸೇರಿದಂತೆ ಸಿಎಂ ಸೂಚಿಸಿರುವ ಮೂವರು ಹೆಸರುಗಳಿಗೆ ಬಿಜೆಪಿ ಹೈಕಮಾಂಡ್ ನಿರಾಸೆಯ ಪ್ರತಿಕ್ರಿಯೆ ನೀಡಿದೆ. ಈ ಮೊದಲು ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ವಿಶ್ವನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದರು.