ವಿಶ್ವಸಂಸ್ಥೆ: ಕೊರೊನಾ ಸೋಂಕಿಗೆ ಸದ್ಯ ಚಿಕಿತ್ಸೆ ನೀಡುತ್ತಿದ್ದು, ಇನ್ನೆರಡು ವಾರದಲ್ಲಿ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವಿಶ್ವದ 39 ದೇಶಗಳ ವಿಜ್ಞಾನಿಗಳು ತಯಾರಿಸಿರುವ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶ ಇನ್ನೆರಡು ವಾರದಲ್ಲಿ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್ ತಿಳಿಸಿದ್ದಾರೆ.
ಈ ಪರೀಕ್ಷೆಗಾಗಿ ಜಗತ್ತಿನಾದ್ಯಂತ ಐದು ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರನ್ನು ಬಳಸಿಕೊಳ್ಳಲಾಗಿದೆ. ಅವರ ಮೇಲೆ ಈ ಲಸಿಕೆಗಳ ಪ್ರಯೋಗ ಮಾಡಲಾಗುತ್ತಿದ್ದು, ಫಲಿತಾಂಶ ಇನ್ನೆರಡು ವಾರದಲ್ಲಿ ಲಭ್ಯವಾಗಲಿದೆ ಎಂದು ವಿವರಿಸಿದ್ದಾರೆ.
ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಚಿಕಿತ್ಸೆಗೆ ರೆಂಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್ / ರಿಟೊನವಿರ್ ಬಳಕೆ ಸೂಚಿಸಿತ್ತು.
ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಪ್ರಯೋಜನವಿಲ್ಲ ಎಂದು ಹೇಳಿ ಬಹುತೇಕ ದೇಶಗಳು ಈ ಔಷಧ ಬಳಕೆ ಮತ್ತು ಪ್ರಯೋಗವನ್ನು ಕೈ ಬಿಟ್ಟಿವೆ. ಅಮೆರಿಕದ ರೆಂಡೆಸಿವಿರ್ ಲಸಿಕೆ ಮೇಲೆ ಒಂದಷ್ಟು ಪ್ರಯೋಗ ನಡೆಯುತ್ತಿದೆ.