Vijayapatha – ವಿಜಯಪಥ
Saturday, November 2, 2024
NEWSನಮ್ಮರಾಜ್ಯ

ತುಕ್ಕು ಹಿಡಿಯುತ್ತಿರುವ ಬಿಎಂಟಿಸಿ ವೋಲ್ವೋ ಬಸ್‌ಗಳು ಶಾಶ್ವತವಾಗಿ ಮೂಲೆ ಸೇರಲಿವೆಯೇ ?

ಸಂಚಾರ ಸ್ಥಗಿತದಿಂದ 500 -600 ಕೋಟಿ ರೂ.ಗಳ ವರೆಗೆ ಲಾಸ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ರಾಜ್ಯ ರಾಜದಾನಿಯಲ್ಲಿ ಬಿಎಂಟಿಸಿಯ ವೋಲ್ವೋ ಬಸ್‌ಗಳು ಇನ್ಮುಂದೆ ಕಾಣುವುದಿಲ್ವಾ? ಹೌದು ಸಂಸ್ಥೆಯಲ್ಲಿ ದಶಕಗಳ ಕಾಲ ದರ್ಬಾರ್‌ ನಡೆಸಿದ ವೋಲ್ವೋ ಬಸ್‌ಗಳು ಈಗ ಅಂತ್ಯ ಹಾಡಲು ಸಜ್ಜಾಗಿವೆ. ಹೌದು ಲಾಕ್‌ಡೌನ್‌ ಇಂತಹುದ್ದೊಂದು ನಿರ್ಧಾರ ಕೈಗೊಳ್ಳಲು ಅಧಿಕಾರಿಗಳನ್ನು ಪ್ರೇರೇಪಿಸಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬಿಎಂಟಿಸಿ ವೋಲ್ವೋ ಬಸ್‌ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಬಿಎಂಟಿಸಿಯ ಒಟ್ಟು 800 ವೋಲ್ವೋ ಬಸ್‌ಗಳಲ್ಲಿ ಸದ್ಯ ಕೇವಲ 70 ಬಸ್‌ಗಳನ್ನು ಮಾತ್ರ ಓಡಾಡುತ್ತಿವೆ. ಲಾಕ್‌ಡೌನ್‌ನಿಂದಾಗಿ ಬಿಎಂಟಿಸಿ ಪಾಲಿಗೆ ಚಿನ್ನದ ಮೊಟ್ಟೆಯಂತಿದ್ದ ವೋಲ್ವೋ ಬಸ್‌ಗಳು ನಿಂತಲ್ಲೇ ನಿಂತಿದ್ದಾವೆ.

ಅದು ಸಾಲದು ಎಂಬಂತೆ ಈಗ ಈ ಬಸ್‌ಗಳು ಒಂದೆಡೆ ತುಕ್ಕು ಹಿಡಿದಿದ್ದರೆ, ಮತ್ತೊಂದೆಡೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹೀಗಾಗಿ ಇವುಗಳನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಇತ್ತ ಪ್ರಯಾಣಿಕರ ಸಂಖ್ಯೆ ಕುಸಿತ ಹಾಗೂ ಪ್ರಯಾಣ ಕಾರ್ಯಾಚರಣೆ ದುಬಾರಿಯಾಗಿರುವ ಕಾರಣದಿಂದ ಈ ಬಸ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಲು ಬಿಎಂಟಿಸಿಯಿಂದ ಸಾಧ್ಯವಾಗುತ್ತಿಲ್ಲ.

ಇದರಿಂದ ಸುಮಾರು ಒಂದೂವರೆ ಸಾವಿರ ಚಾಲನ ಸಿಬ್ಬಂದಿಯನ್ನು ಬಿಎಂಟಿಸಿ ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನಿಗಮದ ಬೇರೆಬೇರೆ ಘಟಕಗಳಿಗೆ ವರ್ಗಾವಣೆಗೆ ಮಾಡಲು ಮುಂದಾಗಿದೆ. ಹೀಗಾಗಿ ವೋಲ್ವೋ ಬಸ್ಗಳು ಮತ್ತೊಂದು ವರ್ಷ ನಿಂತಲೇ ನಿಲ್ಲಬೇಕಾಗುತ್ತದೆ ಎಂದು ಮೂಲಗಳು ತಿಳಿಸಿದೆ

ಕಳೆದ ವರ್ಷ ಲಾಕ್ಡೌನ್ ಹಿನ್ನೆಲೆಯಲ್ಲಿ ವೋಲ್ವೋ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು ನಗರದಲ್ಲಿ ಕೊರೊನಾ ಸೋಂಕು ತಗ್ಗಿನ ಹಿನ್ನೆಲೆಯಲ್ಲಿ ಸೇವೆ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿತ್ತು. ಪ್ರಯಾಣಿಕರಿಗೆ ಅನುಗುಣವಾಗಿ ನಿತ್ಯ 4000 ದಿಂದ 4500 ಸಾಮಾನ್ಯ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.

ಆದರೆ 800 ವೋಲ್ವೋ ಬಸ್‌ಗಳ ಮಾರ್ಗಗಳಲ್ಲಿ ಕೇವಲ 70 ಬಸ್‌ಗಳು ಮಾತ್ರ ಕಾರ್ಯಾಚರಣೆ ಮಾಡುತ್ತೇವೆ. ಹೀಗಾಗಿ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಡಿಪೋಗಳಲ್ಲಿ ನಿಂತಲ್ಲೇ ನಿಂತಿವೆ ವೋಲ್ವೋ ಬಸ್‌ಗಳು.

ಪೋಲೋ ಬಸ್‌ಗಳಿಗೆ ಬೇಡಿಕೆಯಿಲ್ಲ, ಕೋವಿಡ್‌ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಏರಲು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲಿಯೂ ದರ ದುಬಾರಿಯಿಂದ ಎಂದು ಪ್ರಯಾಣಿಕರು ದೂರ ಉಳಿದಿದ್ದಾರೆ.

ಬಹುತೇಕ ಐಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿರುವುದು ವಾಣಿಜ್ಯ ಚಟುವಟಿಕೆಗಳು ಕಡಿಮೆಯಾಗಿರುವುದರಿಂದ ವೋಲ್ವೋ ಬಸ್ ಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಇನ್ನು ಬೇಡಿಕೆ ಇಲ್ಲದಿರುವ ಈ ಹೊತ್ತಲ್ಲಿ ಮತ್ತೆ ವೋಲ್ವೋ ಬಸ್‌ಗಳು ಕಾರ್ಯಾಚರಣೆ ಮಾಡಿದರೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಪೂರ್ಣಪ್ರಮಾಣದಲ್ಲಿ ವೋಲ್ವೋ ಬಸ್ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ಬಿಎಂಟಿಸಿ ಹೇಳುತ್ತಿದೆ.

ಸಂಸ್ಥೆಗೆ ಬಿಳಿಯಾನೆಯಾಗಿರುವ ವೋಲ್ವೋ ಬಸ್‌ಗಳು:  ಬಿಎಂಟಿಸಿಗೆ ಬಿಳಿಯಾನೆ ಯಾಗಿ ಪರಿಣಮಿಸಿರುವ ವೋಲ್ವೋ ಬಸ್‌ಗಳು ಕಳೆದ ಒಂದು ವರ್ಷದಿಂದ ಡಿಪೋಗಳಲ್ಲಿ ಧೂಳು ತಿನ್ನುತ್ತ ನಿಂತಿವೆ.

ಬಿಎಂಟಿಸಿಗೆ ಈ ಬಸ್ ಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಏಕೆಂದರೆ ಒಂದು ವರ್ಷದಿಂದ ಒಂದೇಕಡೆ ನಿಲುಗಡೆ ಮಾಡಿರುವುದರಿಂದ ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ.

ಡಿಪೋಗಳಲ್ಲಿ ನಿಲುಗಡೆ ಮಾಡಿರುವ ಹಲವು ಬಸ್‌ಗಳ ಟೈರ್‌ಗಳು ಒಡೆದಿವೆ, ಇಂಜಿನ್ ಗಳಲ್ಲಿ ದೋಷಗಳು ಕಾಣಿಸಿಕೊಂಡಿವೆ. ಇದೀಗ ಮತ್ತೊಂದು ವರ್ಷ ಬಸ್‌ಗಳು ಡಿಪೋಗಳಲ್ಲೇ ಉಳಿದರೆ ಬಹುತೇಕ ಬಸ್‌ಗಳ ಇಂಜಿನ್ ಗಳು ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆ ವೋಲ್ವೋ ಬಸ್‌ಗಳು ಸಂಸ್ಥೆಗೆ ಬಂದಾಗಿನಿಂದಲೂ ಸಾವಿರಾರು ಕೋಟಿ ರೂ.ಗಳ ಲಾಸ್‌ ಆಗಿದೆ.

ಹೀಗಾಗಿ ಈ ಬಸ್‌ಗಳಿಂದ ಆಗಿರುವ ಲಾಸ್‌ಅನ್ನು ಯಾರಿಂದ ಬರಿಸಬೇಕು ಎಂಬುದರ ಬಗ್ಗೆ ಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಲಾಸ್‌ಗೆ ಕಾರಣವಾಗಲು ಅಂದು ವೋಲ್ವೋ ಬಸ್‌ಗಳನ್ನು ಸಂಸ್ಥೆಯಲ್ಲಿ ತುಂಬಿ ಸಾರ್ವಜನಿಕರ ಹಣ ಕೊಳ್ಳೆ ಹೊಡೆದಿರುವ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳ ಆಸ್ತಿ ಜಪ್ತಿ ಮಾಡಿ ವಸೂಲಿ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸಿದರೆ ಸಂಸ್ಥೆಯಲ್ಲಿ ಆಗಿರುವ ಮತ್ತು ಆಗುತ್ತಿರುವ ಲಾಸ್‌ ಸರಿದೂಗಿಸಬಹುದಾಗಿದೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ