NEWSಉದ್ಯೋಗನಮ್ಮರಾಜ್ಯ

ವಿಪ್ರೋದ ಐವರು ನೌಕರರಲ್ಲಿ ಕೊರೊನಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಹಾಮಾರಿ ಕೊರೊನಾ ಎಲ್ಲಾ ಸ್ಥಳಗನ್ನು ಇತ್ತೀಚೆಗೆ ವೇಗವಾಗಿ ಆವರಿಕೊಳ್ಳುತ್ತಿದ್ದು, ವಿಪ್ರೋ ಸಂಸ್ಥೆಯ ಐದು ಮಂದಿ ನೌಕರರನ್ನು ಸುತ್ತಿಕೊಂಡಿದೆ.

ವಿಪ್ರೊದ ಐವರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಹೇಳಲಾಗಿದ್ದು, ಇದರಿಂದ ಸಾವಿರಾರು ಮಂದಿ ನೌಕರರು ಕೆಲಸ ಮಾಡುವ ಈ ಸಂಸ್ಥೆಯಲ್ಲಿ ಆತಂಕ ಮನೆ ಮಾಡಿದೆ.

ಇನ್ನು ಪಾಸಿಟಿವ್‌ ಬಂದಿರುವ ಐದು ಮಂದಿ ನೌಕರರ ಪ್ರಥಮ ಸಂಪರ್ಕದಲ್ಲಿದ್ದವರನ್ನು ಓಂ ಕ್ವಾರಂಟೈನ್‌ ಮಾಡಲಾಗಿದ್ದು, ಅವರ ಕಟುಂಬದವನ್ನು ಕ್ವಾರಂಟೈನ್‌ ಮಾಡಲಾಗಿದೆ.

ಇದರಿಂದ ವಿಪ್ರೊ ಇತರ ನೌಕರರಲ್ಲೂ ಆಂತಕ ಶುರುವಾಗಿದೆ. ಹೀಗಾಗಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ವಿಪ್ರೋ ಟೆಕ್ನಾಲಜೀಸ್‌ ಎಂಬ ಹೆಸರಿನಲ್ಲಿ 1980ರಲ್ಲಿ ಆರಂಭಗೊಂಡ ಸಾಫ್ಟ್‌ವೇರ್‌ ಕಂಪೆನಿ ಇಂದು ದೇಶದ ಎರಡನೇ ಅತೀ ದೊಡ್ಡ ಸಾಫ್ಟ್‌ವೇರ್‌ ಕಂಪೆನಿಯಾಗಿ ಹೊರಹೊಮ್ಮಿದೆ. ವಿಶ್ವದ 54  ದೇಶಗಳಲ್ಲಿ ತನ್ನ ಕಚೇರಿಯನ್ನು ತೆರೆದಿರುವ ವಿಪ್ರೋದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಜೊತೆಗೆ ವಿಪ್ರೋ ಕಂಪೆನಿ ಗ್ರಾಹಕರ ಮನೆ ಬಳಕೆ ವಸ್ತುಗಳು, ಹೆಲ್ತ್‌ಕೇರ್‌ ಮತ್ತು ಮೂಲಸೌಕರ್ಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಿದೆ.

ವಿಪ್ರೋದ ಮೊದಲ ಸೂರ್ಯಕಾಂತಿ  ಎಣ್ಣೆ ಕಂಪೆನಿಯ ನೆನಪಿಗಾಗಿ ವಿಪ್ರೋ ಲೋಗೋದಲ್ಲಿ ಇಂದಿಗೂ ಸೂರ್ಯಕಾಂತಿಯ ಹೂವಿರುವುದನ್ನು ನೀವು ನೋಡಿರಬಹುದು.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ