NEWSರಾಜಕೀಯಲೇಖನಗಳುಸಂಸ್ಕೃತಿ

ಹೆಣ್ಣು ಎಂದರೆ ಅಸಡ್ಡೆ ಎನ್ನುವ ಕಾಲಘಟ್ಟದಲ್ಲೇ ಮಹಾನ್ ಸಾಧನೆ ಮಾಡಿದ ರಾಜ್ಯದ ಮೊದಲ ಮಹಿಳಾ ಮಂತ್ರಿ ಯಶೋದರ ದಾಸಪ್ಪ

ನಾಳೆ ಮೈಸೂರಿನ ಕಸಾಪದಲ್ಲಿ ಮಹಾನ್ ಸಾಧಕಿ ಕುರಿತು  "ಮರೆಯಲಾಗದ ಮಹನೀಯರು" ಕಾರ್ಯಕ್ರಮ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ವಿಶೇಷ
ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು ಎಂಬ ನಾಣ್ಣುಡಿಯಂತೆ ಸಾಧಕರ ವಂಶದಲ್ಲಿ ಮಹಾನ್ ಸಾಧಕಿಯ ಜನನವಾಗುತ್ತದೆ ಅವರು ದೊಡ್ಡ ಬಳ್ಳಾಪುರ ತಾಲೂಕಿನ ಕಲ್ಲುದೇವರಹಳ್ಳಿಯಲ್ಲಿ ಚಿಕ್ಕಣ್ಣೇಗೌಡರ ವಂಶದ ಮೇರು ಕಿರೀಟ ಎಂಬ ಖ್ಯಾತಿ ಪಡೆದ  ಕೆ.ಎಚ್.ರಾಮಯ್ಯ ಹಾಗೂ ರೇವಮ್ಮ ದಂಪತಿಗೆ 1905 ರ ಮೇ 28 ರಂದು ಮೊದಲ ಮಗುವಾಗಿ ಒಂದು ಹೆಣ್ಣು ಮಗು ಜನನವಾಗುತ್ತದೆ. ಆ ಮಗುವಿಗೆ  ಸಾರ್ವಕಾಲಿಕ ಆದರ್ಶ ಮಹಿಳೆ ಭಗವಾನ್ ಬುದ್ಧರ ಆದರ್ಶ ಪತ್ನಿ ಯಶೋದರೆಯ ನೆನಪಿಗೆ ಯಶೋದರಾ ಎಂದು ನಾಮಕರಣ ಮಾಡುತ್ತಾರೆ ಅವರೇ ಕರ್ನಾಟಕದ ಪ್ರಥಮ ಮಹಿಳಾ ಸಚಿವರು ಸ್ವಾತಂತ್ರ್ಯ ಹೋರಾಟಗಾರರು ಆದ ಶ್ರೀ ಮತಿ ಯಶೋದರ ದಾಸಪ್ಪನವರು.

ಸಮಾಜದ ಸುಧಾರಣೆಯೇ ಪ್ರಥಮ ಎಂಬ ಧ್ಯೇಯ ಹೊಂದಿದ್ದ  ಮಯ್ಯನವರು ಹಿಂದುಳಿದ ವರ್ಗಗಳ ಮೀಸಲಾತಿಗೆ ಒತ್ತಾಯಿಸಿದರು. ಅದರಲ್ಲಿ ಸಫಲರಾದರು. ಒಕ್ಕಲಿಗರ ಮಕ್ಕಳು ಶಿಕ್ಷಿತರಾಗಬೆಕು ಆಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂಬ ಧ್ಯೇಯ ಹೊಂದಿದ್ದ ರಾಮಯ್ಯನವರು 1906 ರ ಏಪ್ರಿಲ್ ನಲ್ಲಿ ಹಲವು ಸಮಾನ ಮನಸ್ಕ ಸಮುದಾಯದ ಬಂಧುಗಳೊಡನೆ ಸೇರಿ ಒಕ್ಕಲಿಗರ ಆಂತರಿಕ ಸರ್ಕಾರ ರಾಜ್ಯ ಒಕ್ಕಲಿಗರ ಸಂಘಕ್ಕೆ ಅಡಿಗಲ್ಲು ನೆಟ್ಪವರು ಬಾಲಕಿ ಯಶೋದರ ಸಹ ತನ್ನ ತಂದೆಯ ಸದ್ಗುಣಗಳನ್ನು ಸಮಾಜಮುಖಿ ಸಿದ್ಧಾಂತಗಳನ್ನು ನೋಡುತ್ತಾ ಅನುಭವಿಸುತ್ತಾ ಬೆಳೆದವರು.

ಹೆಣ್ಣು ಮಕ್ಕಳ ಶಿಕ್ಷಣ ಕನಸಿನ ಮಾತಾದ್ದ ಕಾಲದಲ್ಲಿ…
ಸಮಾಜಮುಖಿ ಚಿಂತಕರಾದ ಕೆ ಎಚ್ ರಾಮಯ್ಯನವರು ಶಿಕ್ಷಣ ಕೆಲವರು ಮುಂದುವರಿದ ಜನಾಂಗದ ಸ್ವತ್ತಾಗಿದ್ದ ವೇಳೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಕನಸಿನ ಮಾತಾಗಿತ್ತು.  ತನ್ನ ಮಗಳಿಗೆ ಮನೆಯಿಂದಲೆ ಸ್ತ್ರೀ ಶಿಕ್ಷಣ ಪ್ರಾರಂಭ ಮಾಡಿದರು. ಪರಿಣಾಮ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತೀರ್ಣರಾದ ಯಶೋದರ ಅವರನ್ನು ಮದ್ರಾಸಿಗೆ ಇಂಟರ್ಮೀಡಿಯೆಟ್ ಅಧ್ಯಯನಕ್ಕೆ ಕಳುಹಿಸಲಾಗುತ್ತದೆ. ಗ್ರಾಮೀಣ ಸಂಸ್ಕೃತಿಯ ರೇವಮ್ಮ ವಿರೋಧ ವ್ಯಕ್ತಪಡಿಸಿದರು ಸಹ ಮಗಳ ಭವಿಷ್ಯದ ಹಾಗೂ ಸಾಮಾಜಿಕ ಸುಧಾರಣೆ ಬಗ್ಗೆ ಕನಸು ಕಂಡಿದ್ದ ರಾಮಯ್ಯನವರು ಶ್ರೀಮತಿಗೆ ಮನವರಿಕೆ ಮಾಡಿಕೊಡುತ್ತಾರೆ. ಪರಿಣಾಮ ಯಶೋದರಮ್ಮ ಶಿಕ್ಷಿತರಾಗುತ್ತಾರೆ.

ಒಕ್ಕಲಿಗರ ಸಂಘದ ಅಭಿವೃದ್ಧಿಗಾಗಿ ಚಂದಾ ವಸೂಲಿ ಮಾಡಲು ಆ ಮೂಲಕ ಒಕ್ಕಲಿಗರ ಶ್ರೇಯೋಭಿವೃದ್ಧಿ ಕಾಣಬೇಕು. ಒಕ್ಕಲಿಗರ ಮಕ್ಕಳು ಶಿಕ್ಷಿತರಾಗಬೇಕು ಎಂದು ಊರು ಊರು ಸುತ್ತುತ್ತಿದ್ದ ಕೆ ಎಚ್ ರಾಮಯ್ಯನವರಿಗೆ ಕೊಡಗಿನ ಜಡ್ಜ್ ಆಗಿದ್ದ ಚನ್ನಯ್ಯ ನವರ ಪರಿಚಯವಾಗಿತ್ತು. ಜಸ್ಟೀಸ್ ಮಿಲ್ಲರ್ ಸಮಿತಿಯ ಸದಸ್ಯರಾಗಿದ್ದ ಚನ್ನಯ್ಯನವರು ಸಹ ರಾಜ್ಯ ಒಕ್ಕಲಿಗರ ಸಂಘದ ನಿರ್ಮಾತೃಗಳಲ್ಲಿ ಒಬ್ಬರು. ಹೀಗೆ ಬೆಳೆದ ಸ್ನೇಹ ಸಂಬಂಧ ವಾಗಿ ಪರಿವರ್ತನೆಗೊಂಡಿತು. ಚನ್ನಯ್ಯನವರ ಮೂರನೇ ಮಗ ಎಚ್.ಸಿ. ದಾಸಪ್ಪ ಹಾಗೂ ರಾಮಯ್ಯನವರ ಪುತ್ರಿ ಯಶೋದರ ನಡುವೆ 1926 ರಲ್ಲಿ ವಿವಾಹ ಮಹೋತ್ಸವ ಏರ್ಪಟ್ಟು. ಅಂದಿನಿಂದ ಯಶೋದರ ಅವರು ಶ್ರೀಮತಿ ಯಶೋದರ ದಾಸಪ್ಪ ಎಂದು ಬದಲಾದರು.

ವಕೀಲ ವೃತ್ತಿಗೆ ಇತಿಶ್ರೀ ಹಾಡಿದ ದಾಸಪ್ಪ 
ಪತಿ ದಾಸಪ್ಪ ಸಹ ಸಮಾಜಮುಖಿ ಚಿಂತನೆಯಿಂದ ಕೂಡಿದ್ದು ಮೈಸೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು.  ಸಮಾಜಮುಖಿ ಮನಸ್ಸಿನ ದಾಸಪ್ಪ ವಕೀಲ ವೃತ್ತಿಗೆ ಇತಿಶ್ರೀ ಹಾಡಿ ಮೈಸೂರು ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಹಾಗೂ ಸಾಮಾಜಿಕ  ಕ್ಷೇತ್ರಕ್ಕೆ ಅಡಿಯಿಟ್ಟರು. ಪ್ರಜಾಪಕ್ಷ ಎಂಬ ರಾಜಕೀಯ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ದಾಸಪ್ಪನವರು ಪ್ರಜಾ ಪ್ರತಿನಿಧಿ ಸಭೆ ಹಾಗೂ ನ್ಯಾಯ ವಿದೇಯಕ ಸಭೆಯ ಸದಸ್ಯರಾಗಿದ್ದರು.

ಸ್ವಾತಂತ್ರ ಹೋರಾಟದಲ್ಲಿ ಕನ್ನಡಿಗರ ಪಾತ್ರ ಎಂದಾಗ ಹಲವು ಮಹನೀಯರ ಸಾಲಿನಲ್ಲಿ ಬರುವ ಹೆಸರು ಶ್ರೀ ದಾಸಪ್ಪ ಹಾಗೂ ಶ್ರೀಮತಿ ಯಶೋದರ ದಾಸಪ್ಪ. ಹೀಗಿರುವಾಗ 1954 ರಲ್ಲಿ ಮೈಸೂರು ರಾಜ್ಯದ ವಿಧಾನ ಸಭೆಗೆ ಆಯ್ಕೆಯಾಗಿ ಆರು ವರ್ಷದ ನಂತರ ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿ ಆಯ್ಕೆಯಾಗುವ ಮೂಲಕ 1959 ರಿಂದ 63 ರವರೆಗೆ ಲೋಕಸಭಾ ಅಂದಾಜು ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪಾರ್ಲಿಮೆಂಟರಿ ಉಪನಾಯಕರಾಗಿ ಆಯ್ಕೆಗೊಂಡವರು. ನೆಹರು ಮಂತ್ರಿ ಮಂಡಲದಲ್ಲಿ ಸಂಪುಟ ದರ್ಜೆಯ ರೈಲ್ವೇ ಸಚಿವರಾಗಿ, ಶಾಸ್ತ್ರಿಯವರ ಆಳ್ವಿಕೆಯಲ್ಲಿ ಕೈಗಾರಿಕೆ ಹಾಗೂ ನೀರಾವರಿ ಸಚಿವರಾಗಿದ್ದವರು.

ಗಾಂಧಿ ತತ್ವಕ್ಕೆ ಮಾರು ಹೋಗಿದ್ದ ದಂಪತಿ
ಗಾಂಧಿ ತತ್ವಕ್ಕೆ ಮಾರು ಹೋಗಿದ್ದ ದಂಪತಿ ಸ್ವತಂತ್ರ ಪೂರ್ವದಲ್ಲಿ ಸೇವಾಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಬಂದು ಮೈಸೂರಿನಲ್ಲಿ ಸತಿಪತಿಗಳಿಬ್ಬರು ಸ್ವಾತಂತ್ರ ಹಾಗೂ ಸೇವೆಯ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದರು. ಇವರ ಭಾಷಣಕ್ಕೇ ರಾಜದ್ರೋಹದ ಪಟ್ಟ ಕಟ್ಟಿದ್ದರು. ಇದನ್ನು ಪತ್ರಿಕೆ ಮೂಲಕ ಓದಿದ್ದ ಗಾಂಧೀಜಿ ದಾಸಪ್ಪ ಒಬ್ಬ ನಿಷ್ಠಾವಂತ ದೇಶ ಸೇವಕ ಎಂದು ಬರೆದಿದ್ದರು.

ಯಶೋದರಮ್ಮ ದಾಸಪ್ಪ ದಂಪತಿಗೆ ಇಬ್ಬರು ಮಕ್ಕಳು. ಒಬ್ಬರು ತುಳಸೀದಾಸ್ ಇನ್ನೊಬ್ಬರು ರಾಮದಾಸ್. ತುಳಸೀದಾಸ್ ದಾಸಪ್ಪ ಮೂರು ಬಾರಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿಪಾದಿಸಿದ್ದರು.

ದಾಸಪ್ಪ ದಂಪತಿ ಸೇವಾಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಹರಿಜನ ಅನಾಥ ಮಗುವೊಂದನ್ನ ಪೋಷಣೆಗೆ ನೀಡಿರುತ್ತಾರೆ. ಅದನ್ನ ಪ್ರಸಾದವೆಂಬಂತೆ ಸ್ವೀಕರಿಸುವ ದಂಪತಿ ಎರಡು ಮಕ್ಕಳ ಜತೆ ಮೂರನೆಯವರಾಗಿ ಕಂಡು ಸಾಕಿ ಸಲಹಿ ಮದುವೆ ಮಾಡಿ ಸಮಭಾಗದ ಆಸ್ತಿಯನ್ನು ಸಹ ಕೊಟ್ಟ ಧೀಮಂತ ವ್ಯಕ್ತಿತ್ವ ಶ್ರೀಮತಿ ದಾಸಪ್ಪ ದಂಪತಿಗಳದು.

ಒಕ್ಕಲಿಗರ ಮನೆಯಲ್ಲಿ ಮನೆ ಮಗಳಾಗಿ ಬೆಳೆದ ಆ ದಲಿತ ಮಗುವಿಗೆ ಪ್ರೀತಿಯಿಂದ ಭಾರತಿ ಎಂದು ಕರೆದಿದ್ದರು ಶ್ರೀಮತಿ ದಾಸಪ್ಪ. 1964 ರಲ್ಲಿ ದಾಸಪ್ಪನವರು ಹೃದಯಾಘಾತದಿಂದ ನಿಧನ ಹೊಂದುತ್ತಾರೆ ನಂತರ ಶ್ರೀಮತಿ ದಾಸಪ್ಪನವರು ಕುಟುಂಬ ಹಾಗೂ ಸಮಾಜ ಎರಡನ್ನು ಸಮಾನವಾಗಿ ಕಂಡ ಪರಿ ನಿಜಕ್ಕೂ ಶ್ರೇಷ್ಠ ಸಾಧನೆ.

ಮಂತ್ರಿಯಾಗಿ ಯಶೋದರ ದಾಸಪ್ಪ
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶ್ರಿಮತಿ ಯಶೋದರ ದಾಸಪ್ಪನವರು 1950 ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಹುಕಾರ್ ಚನ್ನಯ್ಯನವರನ್ನು ಪರಾಭವಗೊಳಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣಿಯಾದರು. 1962 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗಂಡಸಿ ವಿಧಾನಸಭಾ ಕ್ಷೇತ್ರದಿಂದ ಮೈಸೂರು ರಾಜ್ಯದ ವಿಧಾನಸಭೆಗೆ ಸರಿ ಸುಮಾರು 11498 ಮತಗಳ ಅಂತರದಿಂದ ಆಯ್ಕೆಗೊಂಡು ಪ್ರಥಮವಾಗಿ ಪಾದಾರ್ಪಣೆ ಮಾಡುತ್ತಾರೆ.

ನಿಜಲಿಂಗಪ್ಪನವರಿಗಾಗಿ ಸ್ಥಾನ ತ್ಯಾಗ
ಪಕ್ಷದ ನಾಯಕರಾಗಿದ್ದ ನಿಜಲಿಂಗಪ್ಪನವರು ಆಯ್ಕೆಯಾಗದ ಕಾರಣ  ಎಸ್ ಆರ್ ಕಂಠಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ. ಅವರ ಸಂಪುಟದಲ್ಲಿ ಮಾರ್ಚ್ ಮಾಹೆಯಲ್ಲಿ ಮಂತ್ರಿಯಾಗಿ ಎಂಟು ಜನರಿದ್ದ ಸಂಪುಟಕ್ಕೆ ಪ್ರಥಮ ಮಹಿಳೆಯಾಗಿ ಶ್ರೀಮತಿ ಯಶೋದರ ದಾಸಪ್ಪನವರು ಸೇರುತ್ತಾರೆ. ನಂತರದ ದಿನಗಳಲ್ಲಿ ನಿಜಲಿಂಗಪ್ಪನವರಿಗಾಗಿ ಸ್ಥಾನ ತ್ಯಾಗ ಮಾಡುವ ಸಲುವಾಗಿ ಬಾಗಲಕೋಟೆ ಕ್ಷೇತ್ರದ ಮುನರಾಳ ಅವರು ರಾಜೀನಾಮೆ ನೀಡುತ್ತಾರೆ. ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಜಲಿಂಗಪ್ಪ ಆಯ್ಕೆಯಾಗುತ್ತಾರೆ. ಕಂಠಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತಾರೆ.  1962 ಜೂನ್ 2 ರಂದು ನಿಜಲಿಂಗಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸುತ್ತಾರೆ. ಅವರ ಸಂಪುಟದಲ್ಲಿ ಸಹ ಸಮಾಜ ಕಲ್ಯಾಣ ಸಚಿವರಾಗಿ ಶ್ರೀಮತಿ ಯಶೋದರ ದಾಸಪ್ಪನವರು ಮುಂದುವರಿಯುತ್ತಾರೆ.

ಹರಿಜನ ಗಿರಿಜನ ಮಕ್ಕಳು ಹಾಗೂ ಮಹಿಳಾ ಕಲ್ಯಾಣ ಸಾಮಾಜಿಕ ಅಸಮಾನತೆ ವಿರುದ್ದ ಧ್ವನಿ ಎತ್ತಿದ ಗಟ್ಟಿಗಿತ್ತಿ ಇವರು. ಹಲವು ಯೋಚನೆ ಹಾಗೂ ಯೋಜನೆಗಳ ಮೂಲಕ ಸಾಮಾಜಿಕ ಅಸಮಾನತೆ ತೋಲಗಿಸಬೇಕು ಎಂದು ಹೋರಾಡಿದ ಸಾರ್ಥಕ ಮಂತ್ರಿ ಶ್ರೀಮತಿ ಯಶೋದರ ದಾಸಪ್ಪನವರು.

ಕಳ್ಳಬಟ್ಟಿಯಿಂದ ನೊಂದವರ ಕಿವಿಯಾಗಿದ್ದ ಯಶೋದರಮ್ಮ
ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಪಾನ ನಿರೋಧ ಕಾಯಿದೆ ವಾಪಸ್ ಪಡೆಯುವ ವಿಷಯದಲ್ಲಿ ಅನುಮೋದನೆ ಪಡೆಯಲು ಮಂತ್ರಿ ಮಂಡಲದ ಸಭೆ ಕರೆದಿದ್ದರು. ಈ ವೇಳೆಯಲ್ಲಿ ಕಳ್ಳಬಟ್ಟಿಯಿಂದ ನೊಂದವರ ಕಿವಿಯಾಗಿದ್ದ ಯಶೋದರಮ್ಮ ಇದನ್ನ ವಿರೋಧಿಸಿದರು. ಚುನಾವಣೆ ಪೂರ್ವದಲ್ಲಿ ಗಾಂಧಿ ಕರೆಗೆ ಓಗೊಟ್ಟು ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಈಚಲು ಮರ ಕಡಿಯುವ ಚಳವಳಿಯಲ್ಲಿ ಭಾಗವಹಿಸಿದ್ದ ನಿಜಲಿಂಗಪ್ಪ ಯಶೋದರಮ್ಮ ಅಧಿಕಾರ ಬಂದಾಗ ನಿಜಲಿಂಗಪ್ಪ ಬದಲಾದ ಪರಿ ಕಂಡು ಕೆಂಡಾಮಂಡಲರಾದರು. ವಿಧೇಯಕ ಪ್ರಸ್ತಾವನೇ ಆದರೆ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿಯೂ ಮನೆಯಿಂದ ಬೇರೆ ಕಾರು ತನ್ನಿ ಎಂದು ಆಪ್ತರಿಗೆ ತಿಳಿಸಿ ಮಂತ್ರಿ ಮಂಡಲ ಸಭೆಗೆ ಹೊರಟ ಯಶೋದರಮ್ಮನವರು ಹೋದ ದಾರಿಯಲ್ಲಿ ರಾಜೀನಾಮೆ ಪತ್ರ ನೀಡಿ ಹೊರ ನಡೆದು ತಮ್ಮ ಸ್ವಂತ ಕಾರಿನಲ್ಲಿ ಮನೆಗೆ ಬಂದ ದಿಟ್ಟ ಮಹಿಳೆ ಶ್ರೀಮತಿ.

ನೊಂದು ಬೆಂದವರಿಗಾಗಿ ಸಾಮಾಜಿಕ ಸುಧಾರಣೆಗಾಗಿ ಅರಸೀಕೆರೆಯಲ್ಲಿ ಕಸ್ತೂರಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿರ್ಮಾಣ ಮಾಡಿ ಉಳಿದ ಜೀವಿತಾವಧಿಯನ್ನು ಸಮಾಜಮುಖಿ ಚಿಂತನೆಗಳ ಅನುಷ್ಠಾನಕ್ಕೆ ವಿನಿಯೋಗ ಮಾಡಿಕೊಂಡರು…

ಮರೆಯಲಾಗದ ಮಹನೀಯರು ಕಾರ್ಯಕ್ರಮ ನಾಳೆ
ಹೆಣ್ಣು ಎಂದರೆ ಅಸಡ್ಡೆ ಎನ್ನುವ ಕಾಲಘಟ್ಟದಲ್ಲಿ ಮಹಾನ್ ಸಾಧನೆ ಮಾಡಿದ ಶ್ರೀಮತಿ ಯಶೋದರ ದಾಸಪ್ಪನವರು ನಮಗೆ ಆದರ್ಶವಾಗಲಿ. ಮದ್ಯಪಾನ ನಿಷೇಧ ವಾಪಸ್ ಪಡೆದರೆ ನಾನು ಮಂತ್ರಿ  ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಆಗ ನಾನು ಸರ್ಕಾರಿ ಕಾರು ಉಪಯೋಗಿಸುವುದು ತರವಲ್ಲ ಎಂದು ಹೇಳಿ ಅಂತೆಯೇ ರಾಜೀನಾಮೆ ನೀಡಿ ತಮ್ಮ ಖಾಸಗಿ ಕಾರಿನಲ್ಲಿ ಮನೆಗೆ ಬಂದ ದಿಟ್ಟ ಮಹಿಳೆ.  ರಾಜ್ಯದ ಮೊದಲ ಮಹಿಳಾ ಮಂತ್ರಿ ಶ್ರೀಮತಿ ಯಶೋದರ ದಾಸಪ್ಪನವರ ಕುರಿತ  ಮರೆಯಲಾಗದ ಮಹನೀಯರು ಕಾರ್ಯಕ್ರಮ ನಾಳೆ ಅಂದರೆ ಸೋಮವಾರ ಫೆ.1 ಸಂಜೆ 5 ಗಂಟೆಗೆ  ಕನ್ನಡ ಸಾಹಿತ್ಯ ಪರಿಷತ್ ವಿಜಯನಗರ ಮೈಸೂರು ಇಲ್ಲಿ ಜರುಗಲಿದೆ ಬನ್ನಿ ಭಾಗವಹಿಸಿ.

ಸತೀಶ್ ಗೌಡ
ಮೊ: 9986403488

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...