NEWSನಮ್ಮಜಿಲ್ಲೆನಮ್ಮರಾಜ್ಯ

NWKRTC ಶಿರಸಿ: ಪತ್ತಿನ ಸಹಕಾರಿ ಸಂಘದ ಚುನಾವಣೆ – 16ಕ್ಕೆ 16ರೂ ಕೂಟದ ಅಭ್ಯರ್ಥಿಗಳನ್ನೇ ಗೆಲ್ಲಿಸಿದ ನೌಕರರು

ಸ್ಟಾಫ್‌ & ವರ್ಕರ್ಸ್‌ ಫೆಡರೇಷನ್ ಸಂಘಟನೆಯ 30 ವರ್ಷಗಳ ಆಡಳಿತ ಕೊನೆ

ವಿಜಯಪಥ ಸಮಗ್ರ ಸುದ್ದಿ

ಶಿರಸಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಪತ್ತಿನ ಸಹಕಾರಿ ಸಂಘದ 16 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಕಳೆದ ಜುಲೈ 23ರಂದು ರಂದು ಶಿರಸಿ ವಿಭಾಗದ ಪತ್ತಿನ ಸಹಕಾರಿ ಸಂಘದ ಚುನಾವಣೆ ನಡೆದಿತ್ತು. ಆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆ.13ರ ಭಾನುವಾರ ನಡೆದಿದ್ದು, ಈ ವೇಳೆ ಕೂಟ ಎಲ್ಲ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆ ಆಗುವ ಮೂಲಕ ಸತತ 30 ವರ್ಷಗಳಿಂದ ಆಡಳಿತ ಚುಕ್ಕಾಣಿ ಹಿಡಿದಿದ್ದ ಸ್ಟಾಫ್‌ & ವರ್ಕರ್ಸ್‌ ಫೆಡರೇಷನ್‌ ಸಂಘಟನೆಯ ಆಡಳಿತವನ್ನು ಕೊನೆಗಾಣಿಸಿದ್ದಾರೆ.

ಸ್ಪರ್ಧಿಸಿದ ಮೊದಲ ಪ್ರಯತ್ನದಲ್ಲೇ ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ 16ಕ್ಕೆ 16 ಸೀಟ್‌ಗಳನ್ನು ಗೆಲ್ಲುವ ಮುಖಾಂತರ ಅಧಿಕಾರದ ಗದ್ದುಗೆ ಹಿಡಿದೆ.

ಬದಲಾವಣೆ ಬಯಸಿದ ಶಿರಸಿ ವಿಭಾಗದ ನೌಕರರು ನಿರ್ಧರಿಸಿ ಸಂಪೂರ್ಣವಾಗಿ ಕೂಟದ ಪರ ಒಲವು ತೋರಿದ್ದು, ಈ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಈ ಅಭೂತಪೂರ್ವ ಗೆಲುವಿನ ರುವಾರಿಗಳಾದ ಶಿರಸಿ ವಿಭಾಗದ ಸಮಸ್ತ ಸದಸ್ಯರಿಗೆ ಕೂಟದ ಗೌರವ ಅಧ್ಯಕ್ಷ ಡಾ.ವೆಂಕಟೇಶ ಜಿ. ನಾಯಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಇನ್ನು ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ರಾಜ್ಯ ಉಪಾಧ್ಯಕ್ಷ ಸಂಜೀವ ಜೋಗೋಜಿ, ಸಂಘಟನಾ ಕಾರ್ಯದರ್ಶಿಗಳಾದ ಜಯಂತ ಮರ್ಗಿ, ಓಂಕಾರ್ ಮತ್ತು ಶಿರಸಿ ವಿಭಾಗದ ಕೂಟದ ಅಧ್ಯಕ್ಷ ವಾಸುದೇವಯ್ಯ, ಮತದಾನ ಮಾಡಿದ ಎಲ್ಲ ಮತದಾರರಿಗೆ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ವಿದ್ಯಾಧರ ಸರೂರ ವಂದನಾರ್ಪಣೆ ಸಲ್ಲಿಸಿದರು.

ಬದಲಾವಣೆ ಜಗದ ನಿಯಮ ಕಾರ್ಯಕರ್ತರ ಪರಿಶ್ರಮದಿಂದ ಬಂದ ಅಧಿಕಾರವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಇದೇ ವೇಳೆ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಎಲ್ಲ ನಿರ್ದೇಶಕರಿಗೂ ಸಲಹೆ ನೀಡಿದರು.

ವಾರದಿಂದ ಅಲ್ಲೇ ವಾಸ್ತವ್ಯ ಹೂಡಿದ ಮುಖಂಡರು: ಕೂಟದ ಮುಖಂಡರು ಒಂದು ವಾರದಿಂದ ಅಲ್ಲೇ ವಾಸ್ತವ್ಯ ಹೂಡಿ ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರ ಮಾಡಿದರು. ಅದೇ ರೀತಿ ಸ್ಟಾಫ್‌ & ವರ್ಕರ್ಸ್‌ ಫೆಡರೇಷನ್‌ ಮುಖಂಡರು ಮತ ಪ್ರಚಾರ ಮಾಡಿದರು. ಆದರೂ ಅವರ ಪರ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಮತದಾರರು ಶಾಕ್‌ ಕೊಟ್ಟಿದ್ದಾರೆ.

ಚುನಾಯಿತ ಸಾಮಾನ್ಯ ಅಭ್ಯರ್ಥಿಗಳು ಮತ್ತು ಪಡೆದ ಮತ:
1 ಆನಂದ ನಾಯಕ್ 486
2 ಕೃಷ್ಣ ಸನ್ಮನೆ 514
3 ಗಜಾನನ ನಾಯಕ್ 445
4 ಗಂಗಾಧರ ಪಟಗಾರ 418
5 ತಿಪ್ಪೇಸ್ವಾಮಿ 412
6 ನಾರಾಯಣ ಕೆ ಆಚಾರಿ 400
7 ಪ್ರದೀಪ್ ಕೇ ಸಿ 461
8 ಪ್ರೇಮಾನಂದ್ ಚಂಡೇಕರ್ 399
9  ಮೋಹನ ವೈದ್ಯ 486
10 ಸತೀಶ್ ನಾಯಕ್ 404
11 ಹರೀಶ್ ಬಿಜೆ 379

ಪರಿಶಿಷ್ಟ ಪಂಗಡ :
12  ರವಿ ತಳವಾರ್ 455
ಪರಿಶಿಷ್ಟ ಜಾತಿ:
13  ಹೊಳೆಯಪ್ಪ ಮಾದರ528
ಮಹಿಳಾ ಅಭ್ಯರ್ಥಿಗಳು:
14 ಅರ್ಚನಾ ಪವಾಸ್ಕರ್ 494
15  ರೇಣುಕಾ 423
ಹಿಂದುಳಿದ ವರ್ಗ ಎ
16 ರಾಜೇಶ್ ನಾಯಕ್ 319

ಈ 16 ಮಂದಿ ಚುನಾಯಿತ ನಿರ್ದೇಶಕರು ಮುಂದಿನ 5 ವರ್ಷಗಳವರೆಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಸಾಥ್‌ ನೀಡಿದ ವಿಭಾಗದ ಸಮಸ್ತ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕೂಟದ ಪದಾಧಿಕಾರಿಗಳು ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು