NEWSನಮ್ಮರಾಜ್ಯಸಂಸ್ಕೃತಿ

NWKRTC: ಜಾತಿರಹಿತ ಲಿಂಗ ತಾರತಮ್ಯ ಇಲ್ಲದ ಸಮಾಜ ಕಟ್ಟಲು ಶ್ರಮಿಸಿದವರು ಬಸವಣ್ಣ: ಸಾರಿಗೆ ಅಧಿಕಾರಿ ಅಶೋಕ ಪಾಟೀಲ

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ವರ್ಗರಹಿತ, ಜಾತಿರಹಿತ ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ಮಾನವೀಯತೆಯ ತಳಹದಿಯ ಮೇಲೆ ಕಟ್ಟಲು ಶ್ರಮಿಸಿದವರು ಬಸವಣ್ಣನವರು ಎಂದು ಇದೇ ವೇಳೆ ಸಂಸ್ಥೆಯ ಹಾವೇರಿ ವಿಭಾಗದ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಹೇಳಿದರು.

ಹಾವೇರಿ ಘಟಕದಲ್ಲಿ ಸೋಮವಾರ ಆಚರಿಸಲಾದ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಬಸವಾದಿ ಶಿವಶರಣರು ನೀಡಿದ ಸಂದೇಶಗಳು ಲೋಕಮಾನ್ಯವಾಗಿವೆ. ಬಸವಣ್ಣನವರು ನೀಡಿದ ಸಪ್ತಶೀಲಗಳು ಎಂದರು.

ಇನ್ನು ಅವರ ಆದರ್ಶ ಜೀವನಕ್ಕೆ ಈ ಸಪ್ತಶೀಲಗಳು ಅಡಿಪಾಯವಾಗಿದ್ದು ಅವುಗಳ ಅನುಷ್ಠಾನ ಅತ್ಯವಶ್ಯಕವಾಗಿದ್ದು ಎಲ್ಲರೂ ವಚನಗಳ ಅಧ್ಯಯನ ಮತ್ತು ಅದರ ಅಂಶಗಳ ಅನುಷ್ಠಾನಕ್ಕೆ ಕಾರ್ಯೋನ್ಮುಖ ಆಗಬೇಕಾಗಿರುವುದು ಹಿಂದಿನ ಅನಿವಾರ್ಯತೆಯಾಗಿದೆ ಎಂದರು.

ಧಾರವಾಡದ ನ್ಯಾಯವಾದಿ ಕೆ.ಎಸ್. ಕೋರಿ ಶೆಟ್ಟರ್ ಮಾತನಾಡಿ, ಬಸವಣ್ಣವರು ಸ್ತ್ರೀ ಸಮಾನತೆಯ ಹರಿಕಾರರು. ಬಸವಣ್ಣವರ ನಡೆ ನುಡಿ ಒಂದಾದ ತತ್ವಗಳು ಪ್ರಸ್ತುತ ವಿಶ್ವ ಮಾನ್ಯತೆಯನ್ನು ಪಡೆದಿದ್ದು ಅವರ ಕಾಯಕ ದಾಸೋಹ ತತ್ವಗಳು ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ. ಕಾಯಕ ತತ್ವ ಅಕ್ಷರ ಸಹ ಸಾರಿಗೆ ಸಂಸ್ಥೆಯ ಸಿಬ್ಬಂದಿಯಿಂದ ಸರ್ವಕಾಲಕ್ಕೂ ಸಾರ್ವಜನಿಕರಿಗೆ ಸಾರಿಗೆ ಸೇವೆಯನ್ನು ನೀಡುವುದರ ಮುಖಾಂತರ ಆಚರಣೆಯಾಗುತ್ತಿದೆ ಎಂದರು.

ನಿವೃತ್ತ ಸಿಬ್ಬಂದಿ ಮೇಲ್ವಿಚಾರಕ ಮಲ್ಲಿಕಾರ್ಜುನ ಹಿಂಚಿಗೇರಿ ಬಸವಣ್ಣವರ ವಚನಗಳ ವಿಶ್ಲೇಷಣೆ ಮಾಡುವುದರ ಜತೆಗೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಮಿಕ ಸಂಘಟನೆಯ ಮುಖಂಡ ಮಂಜುನಾಥ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕ ವ್ಯವಸ್ಥಾಪಕ ಪ್ರಶಾಂತ ಸಂಗ್ರೇಶಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಈರಪ್ಪ ಕಡ್ಲಿಮಟ್ಟಿ ಸಂಚಾರ ನಿರೀಕ್ಷಕ ಟ.ಕೆ.ನದಾಫ, ಎಸ್.ಎಸ್.ಸೋಮನಾಳ, ಎಂ.ಎಸ್ ಪವಾರ, ಸಂತೋಷ್ ಪಟ್ಟಣಶೆಟ್ಟಿ, ವಿಜಯಕುಮಾರ್ ಎಸ್ ಪಿ, ಗೊಲ್ಗೊಂಡ, ಎಚ್.ಎಸ್ ಗುಳೇದ, ಜಯವರ್ಧನ, ಅಭಿಷೇಕ, ಪಾರ್ವತಿ ಯತ್ನಳ್ಳಿ, ಗೀತಾಂಜಲಿ ದೇವಗೇರಿ, ಶೋಭಾ ದೇಟಿನ, ಕಾರ್ಮಿಕ ಸಂಘಟನೆಗಳ ಮುಖಂಡರು ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಹಾದಾಸೋದ ವ್ಯವಸ್ಥೆ ಮಾಡಲಾಗಿತ್ತು.

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!