Wednesday, October 30, 2024
NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಸಲಹಲು ಬಿಡದೆ ಇದೆಂಥ ವರ್ತನೆ ತೋರುತ್ತಿದ್ದೀರಿ ಮಾನ್ಯ ಎಂಡಿ ಸಹೇಬರೇ..!

ವಿಜಯಪಥ ಸಮಗ್ರ ಸುದ್ದಿ
  • ಒಬ್ಬ ಚಾಲಕನ ಮೇಲೇಕೆ ನಿಮಗೆ ಕೋಪ  *ಅರ್ಥವಾಗುತ್ತಿಲ್ಲ ನಿಮ್ಮ ನಿಲುವು * ಪೊಲೀಸ್‌ ದೂರು ಕೊಟ್ಟು ಹಿಂಸೆ ನೀಡುತ್ತೀರಿ ಎಂದರೆ ಆತ ಮಾಡಿದ  ಘನಘೋರ ಅಪರಾಧವಾದರೂ ಏನು?

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕನೇ ನಿಗಮವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರನೊಬ್ಬ ತನ್ನ ಆನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಳ್ಳಲಾಗದೆ ಕಂಗಾಲಾಗಿ ನಿಗಮದ ಎಂಡಿ ಬಳಿ ಹೋದರೆ. ಈ ಎಂಡಿ ಸಹೇಬರು ಆತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ಕೊಡಿಸುತ್ತಾರೆ ಎಂದರೆ ಇವರಿಗೆ ಮಾನವೀತೆ ಇದೆಯೇ? ಇದು ನಾಚಿಕೆಗೇಡಿನ ಸಂಗತಿ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕಳೆದ 18 ವರ್ಷದಿಂದ ಪ್ರಾಮಾಣಿಕವಾಗಿ ಸಾರಿಗೆ ನಿಗಮದಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರು ಸಹ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ನೋಡಿಕೊಳ್ಳಲಾಗದೆ ಪರಿತಪ್ಪಿಸುತ್ತಿರುವ NWKRTC ನಿಗಮದ ಚಾಲಕನ ವೇದನೆಯನ್ನು ಅರ್ಥ ಮಾಡಿಕೊಳ್ಳಲಾಗದ ಇಂಥ ವ್ಯವಸ್ಥಾಪಕ ನಿರ್ದೇಶಕರು ನಿಗಮದಲ್ಲಿ ಇದ್ದರೇನು ಇಲ್ಲದಿದ್ದರೇನು ಹೇಳಿ.

ತಮ್ಮ ವ್ಯಾಪ್ತಿಗೆ ಬರುವ ಕೆಳ ಹಂತದ ನೌಕರನ ಸಮಸ್ಯೆಗೆ ಸ್ಪಂದಿಸದೆ 2018ರಲ್ಲಿ ಇದ್ದ ಎಂಡಿ ಮತ್ತೆ ಆ ಬಳಿಕ ಬಂದಿರುವ ಪ್ರಸ್ತುತ NWKRTC ನಿಗಮದ ಎಂಡಿಯಾಗಿರುವ ಎಸ್‌.ಭರತ್‌ ಅವರಿಗೆ ಈ ಚಾಲಕನ ಮನೆಯ ಪರಿಸ್ಥಿತಿ ಅರ್ಥವಾಗದಿರುವುದು ದುರಂತವೂ ಅಥವಾ ನಾವು ಉನ್ನತ ಹುದ್ದೆಯಲ್ಲಿದ್ದೇವೆ ಎಂದು ನೌಕರರ ಸಮಸ್ಯೆ ಆಲಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೋ ಏನೋ ಗೊತ್ತಾಗುತ್ತಿಲ್ಲ ಇವರ ನಡೆ.

ಹೌದು! ನೋಡಿ ಸುಭಾಷ್ ನಾಗಪ್ಪ ಚವಲಗಿ ಚಾಲಕ (ಬಿಲ್ಲೆ ಸಂಖ್ಯೆ 1927) ಆದ ನಾನು ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯನ್ನು ನೋಡಿಕೊಳ್ಳುವುದಕ್ಕೆ ಯಾರು ಇಲ್ಲ ಹೀಗಾಗಿ ನನ್ನನ್ನು ಬೆಳಗಾವಿಗೆ ವರ್ಗಾವಣೆ ಮಾಡಿ ಎಂದು ಎಂಡಿ ಅವರಲ್ಲಿ ಕೇಳಿಕೊಂಡಿದ್ದಾರೆ. ಆದರೆ ಆ ಎಂಡಿ ಸಹೇಬರು ಡಿಸಿ ಮತ್ತು ಡಿಎಂಗೆ ಈ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ಅಂದರೆ, ಚಾಲಕ ಸುಭಾಷ್ ನಾಗಪ್ಪ ಅವರ ಪತ್ನಿಗೆ ತಲೆಯ ಭಾಗದಲ್ಲಿ ಶಸ್ತ್ರ ಚಿಕಿತ್ಸೆ ಆಗಿದ್ದು, ಅದು ಗುಣಮುಖವಾಗದೆ ಹುಣ್ಣುಗಳಾಗಿ ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ಮಾಹಿತಿ ಪಡೆದುಕೊಂಡರೂ ಅವರ ಸಮಸ್ಯೆಗೆ ಸ್ಪಂದಿಸದೆ. ಅವರ ವಿರುದ್ದವೇ ಪೊಲೀಸ್‌ ಠಾಣೆಗೆ ದೂರು ಕೊಡಿಸಿರುವುದು ಒಬ್ಬ ಎಂಡಿಗೆ ಶೋಭೆತರುವಂಥದಲ್ಲ. ಭರತ್‌ ಅವರು ಒಬ್ಬ ನಿಷ್ಠಾವಂತ ಅಧಿಕಾರಿ ಎಂದು ನೌಕರರು ಹೇಳುತ್ತಿದ್ದರು. ಆದರೆ ಇವರೇ ಈ ಮಟ್ಟಕ್ಕೆ ಇಳಿದು ಒಬ್ಬ ಸಾಮಾನ್ಯ ನೌಕರನಿಗೆ ಹಿಂಸೆ ನೀಡುತ್ತಾರೆ ಎಂದರೆ ನಂಬಲಾಗುತ್ತಿಲ್ಲ. ಆದರೂ ಇದು ಸತ್ಯ.

ಚಾಲಕ ಸುಭಾಷ್ ನಾಗಪ್ಪ ಏನು ಹೇಳಿದ್ದಾರೆ?: ಸುಭಾಷ್ ನಾಗಪ್ಪ ಚವಲಗಿ ಚಾಲಕ ಬಿಲ್ಲೆ ಸಂಖ್ಯೆ 1927 ಆದ ನಾನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 18 ವರ್ಷ ನಿರಂತರವಾಗಿ ಗೈರು ಹಾಜರಿ ಆಗದೆ ನನ್ನ ಕೆಲಸವನ್ನು ನಿಯತ್ತಾಗಿ ನಿಷ್ಠೆಯಿಂದ ಮಾಡಿದ್ದೇನೆ. ಆ ಬಳಿಕ ಅಂತರ್ ನಿಗಮ ವರ್ಗಾವಣೆಯಾಗಿ ನಾನು NWKRTCಗೆ ಬಂದಿದ್ದೇನೆ.

ನಾನು ವರ್ಗಾವಣೆ ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ ಚಿಕ್ಕೋಡಿ ಅಥವಾ ಬೆಳಗಾವಿ ಅಂತ ಮೆನ್ಷನ್ ಮಾಡಿ ವರ್ಗಾವಣೆಯಾಗಿದ್ದು, ನನಗೆ ಬೆಳಗಾವಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕಿತ್ತು. ಆದರೆ ನಾನು ನಿಗಮದ ಕೇಂದ್ರ ಕಚೇರಿ ಹುಬ್ಬಳ್ಳಿಗೆ ಬಂದಾಗ ನನ್ನ ಮೇಲಧಿಕಾರಿಗಳು ಸಿರ್ಸಿಯಲ್ಲಿ ಚಾಲಕ ಮತ್ತು ನಿರ್ವಾಹಕರ ಕೊರತೆ ಇದೆ ನೀವು ಎರಡು ತಿಂಗಳ ಮಟ್ಟಿಗೆ ಸಿರ್ಸಿ ವಿಭಾಗದಲ್ಲಿ ಕೆಲಸ ಮಾಡಿ ನಾವು ನಿಮ್ಮನ್ನು ಎರಡೂ ತಿಂಗಳಲ್ಲೇ ನೀವು ಕೇಳಿ ಬಂದಿರುವ ಬೆಳಗಾವಿಗೆ ವರ್ಗಾವಣೆ ಮಾಡಿ ಕಳಿಸುತ್ತೇವೆ ಅಂತ ಹೇಳಿದ್ದರು.

2018ರಲ್ಲಿ ಇದ್ದ ಅಂದಿನ ವ್ಯವಸ್ಥಾಪಕ ನಿರ್ದೇಶಕರು ನಮ್ಮನ್ನು ಸಿರ್ಸಿ ವಿಭಾಗಕ್ಕೆ ಕಳುಹಿಸಿದ್ದರು. ಅಂದಿನ ಎಂಡಿ ಅವರ ಆದೇಶವನ್ನು ಒಪ್ಪಿ ಸಿರ್ಸಿಯಲ್ಲಿ ಅಂದಿನಿಂದಲೂ ಕೆಲಸ ಮಾಡುತ್ತಿದ್ದೇನೆ. ಕಳೆದ ಐದು ವರ್ಷದಿಂದ ಇಲ್ಲೇ ಕೆಲಸ ಮಾಡುತ್ತಿದ್ದರೂ ಕೂಡ ಈವರೆಗೂ ನನಗೆ ವರ್ಗಾವಣೆ ಮಾಡಿಲ್ಲ.

ಈ ನಡುವೆ ನಾನು ನಮ್ಮ ಮನೆ ಸಮಸ್ಯೆ ಇರೋದನ್ನು ವ್ಯವಸ್ಥಾಪಕ ನಿರ್ದೇಶಕರಾದ ಎಸ್‌. ಭರತ್ ಅವರನ್ನು ನೇರವಾಗಿ ಭೇಟಿಯಾಗಿ ಹೇಳಿಕೊಂಡೆ. ಆವಾಗ ಅವರು ನನಗೆ ವರ್ಗಾವಣೆ ಮಾಡುತ್ತೇನೆ ಸ್ವಲ್ಪ ದಿವಸ ಇರು ಎಂದು ಹೇಳಿ ನನಗೆ ಸಮಾಧಾನ ಮಾಡಿ ಕಳಿಸಿದ್ದರು.

ಆದರೂ ಕೂಡ ನಾನು ಬಳಿಕ ಆನ್ಲೈನ್ ಮುಖಾಂತರ ವರ್ಗಾವಣೆ ಅಪ್ಲಿಕೇಶನ್ ಹಾಕಿದ್ದೆ. ಆದ್ರು ನನ್ನನ್ನು ವರ್ಗಾವಣೆ ಮಾಡಿಲ್ಲ. ಸಿರ್ಸಿ ವಿಭಾಗದ ಘಟಕದಲ್ಲಿ ಸಿನಿಯಾರಿಟಿ ಪ್ರಕಾರ ವರ್ಗಾವಣೆ ಮಾಡಿದ್ದಾರೆ. ಅದು ನನ್ನ ಮನಸ್ಸಿಗೆ ನೋವಾಗಿ ನಾನು ಮತ್ತೆ ವ್ಯವಸ್ಥಾಪಕ ನಿರ್ದೇಶಕರಿಗೆ ನನ್ನ ಕಷ್ಟಗಳನ್ನು ಹೇಳಿಕೋಂಡು ವಾಟ್ಸಪ್ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದೆ, ಇದು ಸತ್ಯ. ಇದಾದಮೇಲೆ ನನ್ನ ಘಟಕ ವ್ಯವಸ್ಥಾಪಕರು ನನ್ನ ಮೇಲೆ ಪೊಲೀಸ್ ಠಾಣೆಗೆ ಹೋಗಿ ನಮ್ಮ ಮೇಲಧಿಕಾರಿಗೆ ನಮ್ಮ ಚಾಲಕ ಸುಭಾಷ್ ಬ್ಲಾಕ್‌ಮೇಲ್‌ ಮಾಡ್ತಾ ಇದ್ದಾರೆ ಅಂತ ದೂರನ್ನು ನೀಡಿದ್ದಾರೆ.

ಕಾರವಾರ ಟೌನ್ ಪೊಲೀಸ್‌ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರು ನನ್ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದರು. ಆ ವೇಳೆ ನಾನು ಅವರ ಬಳಿ ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ವಿವರವಾಗಿ ಹೇಳಿಕೊಂಡೆ. ಅವರ ಮನಸ್ಸು ಕರಗಿ ನನಗೆ ಬುದ್ಧಿವಾದ ಹೇಳಿ ಇತರ ಮಾಡಿದ್ರೆ ಸರಿಯಲ್ಲಪ್ಪ ನಿನ್ನ ನಂಬಿಕೊಂಡೇ ನಿನ್ನ ಹೆಂಡತಿ ಇದ್ದಾರೆ. ಈರೀತಿ ಎಲ್ಲ ಮಾಡಿಕೊಳ್ಳಬೇಡ ಅಂತ ಹೇಳಿ ನನಗೆ ನೆಮ್ಮದಿಯಿಂದ ಕೆಲಸ ಮಾಡು ದೇವರಿದ್ದಾನೆ ಎಂದು ಹೇಳಿ ಕಳುಹಿಸಿದರು.

ಎಂಡಿ ಅವರ ಹತ್ತಿರ ಹೋಗಿ ಮೀಟ್ ಮಾಡು ಅಂತ ಹೇಳಿದ್ದು, ಅಲ್ಲದೆ ಘಟಕ ವ್ಯವಸ್ಥಾಪಕರನ್ನು ಪೊಲೀಸ್ ಠಾಣೆಗೆ ಕರೆಸಿ ಅವರನ್ನು ಎಂಡಿ ಅವರ ಬಳಿ ಕಳುಹಿಸಿಕೊಡಿ ಮೇಡಂ ಅಂತ ಹೇಳಿ ಕಳಿಸಿದ್ದರು. ಆದರೂ ಕೂಡ ನಮ್ಮ ಘಟಕ ವ್ಯವಸ್ಥಾಪಕರು ನನ್ನನ್ನು ರಜಾ ಕೊಡದೆ ಕಳುಹಿಸಿಲ್ಲ.

ಈ ನಡುವೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅವರು ಈ ಸಂಬಂಧ ಆರೋಪ ಪತ್ರವನ್ನು ನೀಡಿದ್ದಾರೆ. ನಾನು ಏನು ತಪ್ಪು ಮಾಡದಿದ್ದರೂ ಹೀಗೇಕೆ ಮಾಡಿದ್ದಾರೆ ಎಂದು ನನಗೆ ತುಂಬಾ ಮನಸ್ಸಿಗೆ ನೋವಾಗಿದೆ. ನಾನೇನು ಅಂತ ತಪ್ಪು ಮಾಡಿದ್ದೇನೆ ಅನ್ನೋದು ನನಗೆ ಅರ್ಥ ಆಗ್ತಾ ಇಲ್ಲ. ಈ ಬಗ್ಗೆ ನಮ್ಮ ಮೇಲಧಿಕಾರಿಗಳು ಕ್ರಮ ತೆಗೆದುಕೊಂಡು ನನಗೆ ನ್ಯಾಯ ಒದಗಿಸಿ ಕೊಡಬೇಕು. ನನ್ನ ಹೆಂಡತಿ ತುಂಬ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಅವಳನ್ನು ನೋಡಿಕೊಳ್ಳುವುದಕ್ಕೆ ನನಗೆ ಅವಕಾಶ ಮಾಡಿಕೊಡಿ ಎಂದು ಸುಭಾಷ್‌ ಕೇಳಿಕೊಂಡಿದ್ದಾರೆ.

ಇನ್ನು ನನ್ನ ಮಗ ಒಬ್ಬ ಭಾರತೀಯ ಸೈನಿಕ, ಇನ್ನೊಬ್ಬ ದೊಡ್ಡ ಮಗನ ಮದುವೆ ಮಾಡಿದ್ದೇನೆ. ಅವನು ಈಗ ಹೆಂಡತಿ ಕರ್ಕೊಂಡು ಬೇರೆ ಆಗಿದ್ದಾನೆ. ಇದರಿಂದ ಈಗ ನನ್ನ ಹೆಂಡತಿನ ನೋಡಿಕೊಳ್ಳುವವರು ಯಾರು ಇಲ್ಲ. ಹೀಗಾಗಿ ನನಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮಸ್ಯೆಯನ್ನು ನೋಡಿಯಾರು ಪರಿಹಾರ ನೀಡುತ್ತಾರೆ ಎಂದು ಈಗಲೂ ನಂಬಿದ್ದೇನೆ ಎಂದು ಸುಭಾಷ್ ನಾಗಪ್ಪ ಚವಲಗಿ ಕಾಯುತ್ತಿದ್ದಾರೆ.

ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿ ನಿಗಮದ ಎಂಡಿ ಭರತ್‌ ಅವರು ಈ ಚಾಲಕನಿಗೆ ನ್ಯಾಯ ದೊರಕಿಸಿಕೊಡುತ್ತಾರೆಯೇ ಎಂಬುದನ್ನು ಕಾದು ನೋಡೋಣ.

Leave a Reply

error: Content is protected !!
LATEST
ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ