NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಮಹಿಳಾ ನೌಕರರಿಗೆ ಋತುಚಕ್ರ ರಜೆ LMS ತಂತ್ರಾಂಶದಲ್ಲಿ ಅನುಷ್ಠಾನ-ಸಿಪಿಎಂ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಹಿಳಾ ನೌಕರರಿಗೆ ಋತುಚಕ್ರ ರಜೆಯನ್ನು LMS ತಂತ್ರಾಂಶದಲ್ಲಿ ಅನುಷ್ಠಾನಗೊಳಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪ್ರಿಯಾಂಗಾ ಅವರ ಆದೇಶದ ಮೇರೆಗೆ ಇದೇ ಫೆ.12ರಿಂದ LMS ತಂತ್ರಾಂಶದ ಮೂಲಕವೇ ರಜೆ ಹಾಕಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಇಲಾಖಾ ಮುಖ್ಯಸ್ಥರು, ಎಲ್ಲ ಹಿರಿಯ / ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯವ್ಯವಸ್ಥಾಪಕರು, ಕಾರ್ಯನಿರ್ವಾಹಕ ಅಭಿಯಂತರರು, ಪ್ರಾಂಶುಪಾಲರು ಇದನ್ನು ಪಾಲಿಸುವಂತೆ ತಿಳಿಸಿದ್ದಾರೆ.

ಹೀಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಮಹಿಳಾ ನೌಕರರಿಗೆ ಋತುಚಕ್ರ ರಜೆಯ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಯಿಂದ ಹೊರಡಿಸಲಾಗಿರುವ ಸುತ್ತೋಲೆಯಂತೆ NWKRTC ಸಂಸ್ಥೆಯಲ್ಲಿ ಯಥಾವತ್ತಾಗಿ ಅಳವಡಿಸಿಕೊಂಡು ಅರ್ಹ ಮಹಿಳಾ ನೌಕರರಿಗೆ ಋತುಚಕ್ರದ ರಜೆಯನ್ನು LMS ತಂತ್ರಾಂಶದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಅರ್ಹ ಮಹಿಳಾ ನೌಕರರಿಗೆ ಋತುಚಕ್ರ ರಜೆಯನ್ನು LMS ತಂತ್ರಾಂಶದಲ್ಲಿ ಇದೇ 12-02-2026 ರಿಂದ ಜಾರಿಗೊಳಿಸಿ ಅವಕಾಶ ಕಲ್ಪಿಸಲಾಗಿದ್ದು, ಈ ರಜೆ ಪಡೆಯಲು ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ಮುಂದುವರಿದ ನಿರ್ದೇಶನಗಳನ್ನು ಈ ಕೆಳಗಿನಂತೆ ಸೂಚಿಸಿದ್ದಾರೆ.

ಮಹಿಳಾ ಚಾಲನಾ ಸಿಬ್ಬಂದಿಗಳು LMS ಲಾಗಿನ್ ಆದ ನಂತರ Apply Leave option ನಲ್ಲಿ ಕ್ಲಿಕ್ ಮಾಡಿ Non Auto Leave Select ಮಾಡಬೇಕು. Special Leave (SPL_Lv) ಕ್ಲಿಕ್ಕಿಸಿ ದಿನಾಂಕವನ್ನು ಆಯ್ಕೆ ಮಾಡಿ Apply ಮಾಡಬೇಕು.

ಇತರೇ ಮಹಿಳಾ ನೌಕರರು LMS ಲಾಗಿನ್ ಆದ ನಂತರ Apply Leave option ನಲ್ಲಿ ಕ್ಲಿಕ್ ಮಾಡಿ Special Leave (SPL_Lv) ಕ್ಲಿಕ್ಕಿಸಿ ದಿನಾಂಕವನ್ನು ಆಯ್ಕೆ ಮಾಡಿ Apply ಮಾಡಬೇಕು.

ಈ ದಿನ (Today) ಅಥವಾ ಹಿಂದಿನ ದಿನಕ್ಕೆ (Yesterday) ರಜೆಯನ್ನು ಅರ್ಹ ಮಹಿಳಾ ನೌಕರರು ಸಲ್ಲಿಸಬಹುದಾಗಿದೆ.

ರಜೆಯನ್ನು ರದ್ದುಪಡಿಸಿಕೊಳ್ಳಲು ತಂತ್ರಾಂಶದಲ್ಲಿ Leave Cancellation option ನ್ನು ಕ್ಲಿಕ್ ಮಾಡಿದ ನಂತರ Cancel option ಕ್ಲಿಕ್ ಮಾಡಿ ರಜೆಯನ್ನು ರದ್ದುಪಡಿಸಿಕೊಳ್ಳಬಹುದಾಗಿದೆ.

ಆದರೆ, ಹಿಂದಿನ ದಿನದ ರಜೆಯನ್ನು ರದ್ದುಪಡಿಸಲು ಅವಕಾಶವಿರುವುದಿಲ್ಲ. ಈ ದಿನದ (Today) ರಜೆಯನ್ನು ರಾತ್ರಿ 12 ಗಂಟೆಯೊಳಗಾಗಿ ರದ್ದುಪಡಿಸಲು ಅವಕಾಶ ಕಲ್ಪಿಸಿದೆ.

LMS ತಂತ್ರಾಂಶದಲ್ಲಿ ಸಾಂಧರ್ಬಿಕ ರಜೆ ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಆದರೆ ರಜೆಯನ್ನು ತಿರಸ್ಕರಿಸಲು ಅವಕಾಶವಿರುವುದಿಲ್ಲ.

ಋತುಚಕ್ರ ರಜೆಯು ವಾರದ ರಜೆ, ಹಬ್ಬದ ರಜೆ ಮತ್ತು ಸಾರ್ವತ್ರಿಕ ರಜೆ ಹೊರತುಪಡಿಸಿ ಇತರೇ ರಜೆಯೊಂದಿಗೆ ಸಂಯೋಜನೆಗೆ ಅವಕಾಶವಿರುವುದಿಲ್ಲ. ಈ ಎಲ್ಲ ಮಾಹಿತಿಯನ್ನು ಸಂಸ್ಥೆಯ ಎಲ್ಲ ಅರ್ಹ ಮಹಿಳಾ ನೌಕರರ ಗಮನಕ್ಕೆ ತರುವಂತೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಕೋರಿದ್ದಾರೆ.

Megha
the authorMegha

Leave a Reply

error: Content is protected !!