NEWSದೇಶ-ವಿದೇಶನಮ್ಮರಾಜ್ಯ

ಗ್ಯಾಸ್‌ ಸಿಲಿಂಡರ್‌ಗೆ 195.50 ರೂ ಏರಿಕೆ: ಶಾಕ್‌ಕೊಟ್ಟ ಕೇಂದ್ರ ಸರ್ಕಾರ

ನೊಂದವರಿಗೆ ಹೆಗಲು
  • ಒಂದು ತಿಂಗಳೊಳಗೆ 2 ಬಾರಿ ಏರಿಕೆ- 300 ರೂ.   ಹೆಚ್ಚಳ 

ನ್ಯೂಡೆಲ್ಲಿ: ಈಗಾಗಲೇ ಏಪ್ರಿಲ್ ತಿಂಗಳು ದುಬಾರಿ ತಿಂಗಳು ಎಂದೇ ಕರೆಯಲಾಗುತ್ತಿದೆ. ಇದರ ಬೆನ್ನಲ್ಲಿಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹಣಕಾಸು ವರ್ಷದ ಮೊದಲ ದಿನವೇ ದೇಶದ ಜನತೆಗೆ ಬಿಗ್‌ಶಾಕ್‌ ಕೊಟ್ಟಿದೆ.

ಗೃಹ ಬಳಕೆ ಸಿಲಿಂಡರ್ ಬೆಲೆ ಹೆಚ್ಚಾದ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 195.50 ರೂ. ಏರಿಕೆ ಮಾಡಿವೆ. ಈ ಮೂಲಕ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 2078.50 ರೂಪಾಯಿ ತಲುಪಿದೆ.

ಇದಕ್ಕೂ ಮೊದಲು, ಮಾರ್ಚ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನ 114.5 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈಗ ಮತ್ತೆ 195.50 ರೂಪಾಯಿಗೆ ಏರಿಕೆ ಮಾಡುವ ಮೂಲಕ ಕಳೆದ ಒಂದು ತಿಂಗಳಲ್ಲೇ 2ನೇ ಬಾರಿಗೆ ಶಾಕ್‌ಕೊಟ್ಟಿದೆ ಕೇಂದ್ರ ಸರ್ಕಾರ.

ಸದ್ಯ ಗೃಹಬಳಕೆ ಸಿಲಿಂಡರ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದ್ದು ಈಗಿನ ದರವೇ ಮುಂದುವರಿದಿದೆ. 14.2 ಕೆಜಿ ಸಿಲಿಂಡರ್‌ ಬೆಲೆ ಮಾ.7 ರಂದು ಕೊನೆಯದ್ದಾಗಿ 60 ರೂ. ಹೆಚ್ಚಳವಾಗಿತ್ತು. ದೆಹಲಿಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ 913 ರೂ. ಇದ್ದರೆ ಕರ್ನಾಟಕದಲ್ಲಿ 915.50 ರೂ.ಗೆ ಮಾರಾಟವಾಗುತ್ತಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರಗಳ ಆಧಾರದ ಮೇಲೆ ಪ್ರತಿ ತಿಂಗಳ ಮೊದಲ ದಿನದಂದು ATF ಮತ್ತು LPG ಬೆಲೆಗಳನ್ನು ಪರಿಷ್ಕರಿಸುತ್ತವೆ.

ಮೊದಲೇ ಸಿಲಿಂಡರ್ ಸಿಗ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ಪರದಾಡುತ್ತಿದ್ದಾರೆ. ಈ ನಡುವೆಯೇ ಬೆಲೆ ಏರಿಕೆ ಮಾಡಿರುವುದು ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

Megha
the authorMegha

Leave a Reply

error: Content is protected !!
Latest news
ಅಭ್ಯರ್ಥಿಗಳಿಗೆ ನಿರಾಳ: ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ಜು.8ರ ವರೆಗೆ ವಿಸ್ತರಣೆ! ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ 5ಮಂದಿ ಸಾವು, ನಲುಗಿದ ಜನತೆ, ಸಮುದ್ರದಂತೆ ಕಂಡುಬಂದ ರಸ್ತೆಗಳು BMTC: ಜುಲೈ 6ರಂದು ನೌಕರರ Pay fixation ಸಂಬಂಧ ಕೇಂದ್ರ ಕಚೇರಿಯಲ್ಲಿ ಸಭೆ ನಿಗದಿ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದ ಸಿಎಂಗೆ KPTCL ನೌಕರರಿಂದ ಸನ್ಮಾನ SIRಗೆ ತೆರಳುತ್ತಿದ್ದ VAO ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಗ್ರಾಮಾಡಳಿತ ಲೆಕ್ಕಾಧಿಕಾರಿ ಸ್ಥಿತಿ ಗಂಭೀರ- ಆಸ್ಪತ್ರೆ ... KSRTC: ನಾಲ್ಕೂ ನಿಗಮಗಳ ಬಸ್‌ ಕಿಟಕಿಗಳಿಗೆ ರಾಡ್‌ ಅಳವಡಿಸಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮೋಹನ್ ಕುಮಾರ್ ದಾನಪ... BMTC: ಕೆ.ಆರ್.ಸರ್ಕಲ್ ಬಳಿ ಹಿಂದಿನಿಂದ ವಜ್ರ ಬಸ್‌ಗೆ ಡಿಕ್ಕಿ ಹೊಡೆದ ಎಲೆಕ್ಟ್ರಿಕ್‌ ಬಸ್‌: 14ಕ್ಕೂ ಹೆಚ್ಚು ಮಂದಿಗೆ ಗ... ಬೆಂಗಳೂರು: ಕ್ಷಣಾರ್ಧದಲ್ಲಿ ಹೊತ್ತಿಉರಿದ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌: ಅದೃಷ್ಟವಶಾತ್‌ ಪ್ರಯಾಣಿಕರು ಪಾರು ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ