NEWSನಮ್ಮರಾಜ್ಯ

BMTC: ಜುಲೈ 6ರಂದು ನೌಕರರ Pay fixation ಸಂಬಂಧ ಕೇಂದ್ರ ಕಚೇರಿಯಲ್ಲಿ ಸಭೆ ನಿಗದಿ

ಸಂಸ್ಥೆಯ ಕೇಂದ್ರ ಕಚೇರಿ / ಕಾರ್ಯಾಗಾರ ಮತ್ತು ಘಟಕಗಳಲ್ಲಿ 01.07.2026 ರಂದು ಸೇವೆಯಲ್ಲಿ ಮುಂದುವರಿದ ಅಧಿಕಾರಿ / ನೌಕರರ ಪರಿಷ್ಕೃತ ಮೂಲ ವೇತನ ನಿಗದಿಯನ್ನು ಸುತ್ತೋಲೆಯನ್ವಯ ನಿಗದಿಪಡಿಸುವ ಬಗ್ಗೆ ಸ್ಪಷ್ಟೀಕರಣ / ಮಾಹಿತಿ ನೀಡುವ ಬಗ್ಗೆ  ಸೂಚಿಸಿದ್ದು, 6.07.2026ರಂದು ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್‌ನಲ್ಲಿ ಸಭೆಯನ್ನು ಅಯೋಜಿಸಿದ್ದು, ಅದರಂತೆ ಸಿಬ್ಬಂದಿಗಳನ್ನು ನಿಗದಿತ ಸಮಯದೊಳಗೆ ಹಾಜರಾಗುವಂತೆ ಸೂಚಿಸಿ ನಿಯೋಜಿಸಲು ಈ ಮೂಲಕ ಸೂಚಿಸಲಾಗಿದೆ

ನೊಂದವರಿಗೆ ಹೆಗಲು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿ/ ನೌಕರರಿಗೆ 01.04.2025 ರಿಂದ ಜಾರಿಗೆ ಬಂದಿರುವ ಪರಿಷ್ಕೃತ ಮೂಲ ವೇತನದಂತೆ Pay fixation ಸಂಬಂಧ ಇದೇ ಜುಲೈ 6 ಮತ್ತು 7ರಂದು ಹಮ್ಮಿಕೊಂಡಿದ್ದು ಈ ಸಭೆಗೆ ಸಿಬ್ಬಂದಿ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆಯ ಮೇಲ್ವಿಚಾರಕರು/ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ನಿಯೋಜಿಸುವಂತೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಕಚೇರಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಲಾಗಿದ್ದು, ಜುಲೈ 6ರಂದು ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್‌ನಲ್ಲಿ ಸಭೆಯನ್ನು ಅಯೋಜಿಸಿಲಾಗಿದೆ. ಹೀಗಾಗಿ ಬೆಳಗ್ಗೆ 11 ಗಂಟೆಗೆ ಬಿಎಂಟಿಸಿಯ ಘಟಕ-2 ರಿಂದ ಘಟಕ- 26ರವರೆಗಿನ ಸಿಬ್ಬಂದಿ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆಯ ಮೇಲ್ವಿಚಾರಕರು/ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ನಿಯೋಜಿಸಬೇಕು.

ಅದರಂತೆ ಅಂದೇ ಮಧ್ಯಾಹ್ನ 2.30 ಗಂಟೆಗೆ ಇದೇ ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್‌ನಲ್ಲಿ ನಡೆಯುವ ಸಭೆಗೆ ಬಿಎಂಟಿಸಿಯ ಘಟಕ-27 ರಿಂದ ಘಟಕ- 52 ರವರೆಗಿನ ಸಿಬ್ಬಂದಿ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆಯ ಮೇಲ್ವಿಚಾರಕರು/ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ನಿಯೋಜಿಸಬೇಕು ಎಂದು ತಿಳಿಸಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂದಿಸಿದಂತೆ ರಾಜ್ಯ ಸರ್ಕಾರವು ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಅರ್ಹ ನೌಕರರ/ ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) 31.03.2025 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ 12.50 ರಷ್ಟು ಹೆಚ್ಚಿಸಿ 01.04.2025 ರಿಂದ ಮೂಲ ವೇತನವನ್ನು ಪರಿಷ್ಕರಿಸಿ, ಅದರಂತೆ ಎಲ್ಲ ವೇತನ ಶ್ರೇಣಿಗಳನ್ನು ಜಾರಿಗೊಳಿಸಲು12.05.2026ರಲ್ಲಿ ಅನುಮೋದಿಸಿ ಆದೇಶ ಹೊರಡಿಸಿದೆ.

ಈ ಆದೇಶದಂತೆ 01.07.2026 ರಂದು ಸೇವೆಯಲ್ಲಿ ಮುಂದುವರಿದ ನೌಕರರು/ ಅಧಿಕಾರಿಗಳಿಗೆ ಪರಿಷ್ಕೃತ ಮೂಲ ವೇತನವನ್ನು 01.04.2025 ರಿಂದ ಜಾರಿಗೊಳಿಸಿ, ಜುಲೈ-2026 ರ ಮಾಹೆಯಿಂದ ಮತ್ತು ಮುಂದಕ್ಕೆ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸಲು KSRTC ನಿಗಮ ಕೇಂದ್ರ ಕಚೇರಿಯಿಂದ 01.07.2026 ರಂದು ಸುತ್ತೋಲೆ ಹೊರಡಿಸಲಾಗಿದೆ.

ಮುಂದುವರಿದು, ಈ ಸಂಬಂಧ ಕೇಂದ್ರ ಕಚೇರಿ / ಕಾರ್ಯಾಗಾರ ಮತ್ತು ಘಟಕಗಳಲ್ಲಿ 01.07.2026 ರಂದು ಸೇವೆಯಲ್ಲಿ ಮುಂದುವರಿದ ಅಧಿಕಾರಿ / ನೌಕರರ ಪರಿಷ್ಕೃತ ಮೂಲ ವೇತನ ನಿಗದಿಯನ್ನು ಸುತ್ತೋಲೆಯನ್ವಯ ನಿಗದಿಪಡಿಸುವ ಬಗ್ಗೆ ಸ್ಪಷ್ಟೀಕರಣ / ಮಾಹಿತಿ ನೀಡುವ ಬಗ್ಗೆ  ಸೂಚಿಸಿದ್ದು, 6.07.2026ರಂದು ಕೇಂದ್ರ ಕಚೇರಿಯ 4ನೇ ಮಹಡಿಯಲ್ಲಿರುವ ಮಿನಿ ಮೀಟಿಂಗ್ ಹಾಲ್‌ನಲ್ಲಿ ಸಭೆಯನ್ನು ಅಯೋಜಿಸಿದ್ದು, ಅದರಂತೆ ಸಿಬ್ಬಂದಿಗಳನ್ನು ನಿಗದಿತ ಸಮಯದೊಳಗೆ ಹಾಜರಾಗುವಂತೆ ಸೂಚಿಸಿ ನಿಯೋಜಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
ಅಭ್ಯರ್ಥಿಗಳಿಗೆ ನಿರಾಳ: ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ಜು.8ರ ವರೆಗೆ ವಿಸ್ತರಣೆ! ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ 5ಮಂದಿ ಸಾವು, ನಲುಗಿದ ಜನತೆ, ಸಮುದ್ರದಂತೆ ಕಂಡುಬಂದ ರಸ್ತೆಗಳು BMTC: ಜುಲೈ 6ರಂದು ನೌಕರರ Pay fixation ಸಂಬಂಧ ಕೇಂದ್ರ ಕಚೇರಿಯಲ್ಲಿ ಸಭೆ ನಿಗದಿ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದ ಸಿಎಂಗೆ KPTCL ನೌಕರರಿಂದ ಸನ್ಮಾನ SIRಗೆ ತೆರಳುತ್ತಿದ್ದ VAO ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಗ್ರಾಮಾಡಳಿತ ಲೆಕ್ಕಾಧಿಕಾರಿ ಸ್ಥಿತಿ ಗಂಭೀರ- ಆಸ್ಪತ್ರೆ ... KSRTC: ನಾಲ್ಕೂ ನಿಗಮಗಳ ಬಸ್‌ ಕಿಟಕಿಗಳಿಗೆ ರಾಡ್‌ ಅಳವಡಿಸಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮೋಹನ್ ಕುಮಾರ್ ದಾನಪ... BMTC: ಕೆ.ಆರ್.ಸರ್ಕಲ್ ಬಳಿ ಹಿಂದಿನಿಂದ ವಜ್ರ ಬಸ್‌ಗೆ ಡಿಕ್ಕಿ ಹೊಡೆದ ಎಲೆಕ್ಟ್ರಿಕ್‌ ಬಸ್‌: 14ಕ್ಕೂ ಹೆಚ್ಚು ಮಂದಿಗೆ ಗ... ಬೆಂಗಳೂರು: ಕ್ಷಣಾರ್ಧದಲ್ಲಿ ಹೊತ್ತಿಉರಿದ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌: ಅದೃಷ್ಟವಶಾತ್‌ ಪ್ರಯಾಣಿಕರು ಪಾರು ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ