NEWSಕೃಷಿದೇಶ-ವಿದೇಶ

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ 5ಮಂದಿ ಸಾವು, ನಲುಗಿದ ಜನತೆ, ಸಮುದ್ರದಂತೆ ಕಂಡುಬಂದ ರಸ್ತೆಗಳು

ನೀರಿನ ಅಲೆಗಳು ಗೇಟ್‌ ವೇ ಆಫ್‌ ಇಂಡಿಯಾಕ್ಕೆ ಅಪ್ಪಳಿಸುತ್ತಿರುವುದು ವಿಡಿಯೋನಲ್ಲಿ ತೋರಿಸಿದೆ. ಇದನ್ನು ನೋಡಿದರೆ ಒಮ್ಮೆ ಸಮುದ್ರ ತಟದಲ್ಲಿದ್ದೀವೇನೋ ಅನಿಸುತ್ತದೆ ಅಷ್ಟಮಟ್ಟಿಗೆ ವರುಣ ಅಬ್ಬರಿಸಿದ್ದಾನೆ.

ನೊಂದವರಿಗೆ ಹೆಗಲು

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು ಬೊಬ್ಬಿರಿಯುತ್ತಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಆಗಿದ್ದು, ಇಂದು ಸುರಿದ ಮಳೆ ಇನ್ನಷ್ಟು ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಅದರಲ್ಲೂ ಪುಣೆ ಹಾಗೂ ಥಾಣೆಯಲ್ಲಿ ಮಳೆಗೆ 5 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಬೆಳಗ್ಗೆಯಿಂದಲೂ ವರುಣನ ಅಬ್ಬರ ಜೋರಾಗಿದ್ದು, ರಸ್ತೆಗಳಲ್ಲೇ ಕಾರುಗಳು, ಟ್ರಕ್‌ಗಳು ಮುಳುಗಡೆಯಾಗಿವೆ, ರಸ್ತೆಗಳೆಲ್ಲಾ ತುಂಬಿ ಹರಿಯುತ್ತಿದ್ದು, ಕಾರುಗಳು ಕೊಚ್ಚಿಕೊಂಡು ಹೋಗಿವೆ.

ಮುಂಬೈನಲ್ಲಿ ಮಳೆಯಿಂದಾದ ಅವಾಂತರಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಭಾರತದ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದ ʻಗೇಟ್‌ ವೇ ಆಫ್‌ ಇಂಡಿಯಾʼ ಬಳಿ ಭಾರೀ ಪ್ರಮಾಣದಲ್ಲಿ ಉಬ್ಬರವಿಳಿತ ಕಂಡುಬಂದಿದೆ.

ನೀರಿನ ಅಲೆಗಳು ಗೇಟ್‌ ವೇ ಆಫ್‌ ಇಂಡಿಯಾಕ್ಕೆ ಅಪ್ಪಳಿಸುತ್ತಿರುವುದು ವಿಡಿಯೋನಲ್ಲಿ ತೋರಿಸಿದೆ. ಇದನ್ನು ನೋಡಿದರೆ ಒಮ್ಮೆ ಸಮುದ್ರ ತಟದಲ್ಲಿದ್ದೀವೇನೋ ಅನಿಸುತ್ತದೆ ಅಷ್ಟಮಟ್ಟಿಗೆ ವರುಣ ಅಬ್ಬರಿಸಿದ್ದಾನೆ.

ಇನ್ನು ಮಳೆ ನೀರಿನಿಂದಾಗಿ ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ವಸಾಯ್‌ ಹಾಗೂ ನವಿ ಮುಂಬೈನಲ್ಲಿ ರಸ್ತೆಗಳು ಸಂಪೂರ್ಣ ಮುಚ್ಚಿಹೋಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಭಾಂಡಪ್‌ನ ಸೋನಾಪುರ ಪ್ರದೇಶದಲ್ಲಿ ನಿರಂತರ ಮಳೆಯಿಂದ ರಸ್ತೆಯ ಒಂದು ಭಾಗವೇ ಕುಸಿದಿದ್ದು, ಪ್ರಯಾಣಿಕರಲ್ಲಿ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ.

ಮತ್ತೊಂದು ಘಟನೆಯಲ್ಲಿ ರಸ್ತೆಯಲ್ಲಿ ನಿಂತಿದ್ದ ವಾಹನವೊಂದು ಮಳೆಯಿಂದ ಕುಸಿದ ರಸ್ತೆಗೆ ಬಿದ್ದಿದೆ. ಆದಾಗ್ಯೂ, ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇನ್ನು ಥಾಣೆ ಮತ್ತು ಪಾಲ್ಘರ್‌ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ವಿದ್ಯುತ್‌ ಕಂಬಗಳು, ಭಾರೀ ಗಾತ್ರದ ಮರಗಳು ನೆಲಕಚ್ಚಿವೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಜನ ಜೀವನವನ್ನು ಅಸ್ತವ್ಯಸ್ತಗೊಂಡಿದೆ. ನಾಳೆ ಅಂದರೆ ಭಾನುವಾರವೂ (ಜು.5) ಮಳೆರಾಯನ ಆರ್ಭಟ ಮುಂದುವರಿಯಲಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

Deva
the authorDeva

Leave a Reply

error: Content is protected !!
Latest news
ಅಭ್ಯರ್ಥಿಗಳಿಗೆ ನಿರಾಳ: ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ಜು.8ರ ವರೆಗೆ ವಿಸ್ತರಣೆ! ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ 5ಮಂದಿ ಸಾವು, ನಲುಗಿದ ಜನತೆ, ಸಮುದ್ರದಂತೆ ಕಂಡುಬಂದ ರಸ್ತೆಗಳು BMTC: ಜುಲೈ 6ರಂದು ನೌಕರರ Pay fixation ಸಂಬಂಧ ಕೇಂದ್ರ ಕಚೇರಿಯಲ್ಲಿ ಸಭೆ ನಿಗದಿ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದ ಸಿಎಂಗೆ KPTCL ನೌಕರರಿಂದ ಸನ್ಮಾನ SIRಗೆ ತೆರಳುತ್ತಿದ್ದ VAO ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಗ್ರಾಮಾಡಳಿತ ಲೆಕ್ಕಾಧಿಕಾರಿ ಸ್ಥಿತಿ ಗಂಭೀರ- ಆಸ್ಪತ್ರೆ ... KSRTC: ನಾಲ್ಕೂ ನಿಗಮಗಳ ಬಸ್‌ ಕಿಟಕಿಗಳಿಗೆ ರಾಡ್‌ ಅಳವಡಿಸಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮೋಹನ್ ಕುಮಾರ್ ದಾನಪ... BMTC: ಕೆ.ಆರ್.ಸರ್ಕಲ್ ಬಳಿ ಹಿಂದಿನಿಂದ ವಜ್ರ ಬಸ್‌ಗೆ ಡಿಕ್ಕಿ ಹೊಡೆದ ಎಲೆಕ್ಟ್ರಿಕ್‌ ಬಸ್‌: 14ಕ್ಕೂ ಹೆಚ್ಚು ಮಂದಿಗೆ ಗ... ಬೆಂಗಳೂರು: ಕ್ಷಣಾರ್ಧದಲ್ಲಿ ಹೊತ್ತಿಉರಿದ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌: ಅದೃಷ್ಟವಶಾತ್‌ ಪ್ರಯಾಣಿಕರು ಪಾರು ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ