CRIMENEWSನಮ್ಮಜಿಲ್ಲೆ

ಡೀಸೆಲ್‌ ಟ್ಯಾಂಕರ್‌-ಕಾರಿನ ನಡುವೆ ಭೀಕರ ಅಪಘಾತ: ತಪ್ಪಿದ ಭಾರಿ ದುರಂತ

ನೊಂದವರಿಗೆ ಹೆಗಲು

ಹಾಸನ: ಡೀಸೆಲ್‌ ಟ್ಯಾಂಕರ್‌ ಮತ್ತು ಕಾರಿನ ನಡುವೆ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಭಾರೀ ದುರಂತವೊಂದು ತಪ್ಪಿದ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಡೀಸೆಲ್‌ ಸೋರಿಕೆಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮುಂದಾಗಬಹುದಿದ್ದ ಅನಾಹುತ ತಪ್ಪಿದಂತಾಗಿದೆ.

ಇನ್ನು ಟ್ಯಾಂಕರ್‌ ಡಿಕ್ಕಿಯಿಂದ ಕಾರಿನ ಒಂದು ಬದಿ ನಜ್ಜುಗುಜ್ಜಾಗಿದ್ದು, ರಸ್ತೆಯ ಇನ್ನೊಂದು ಬದಿಗೆ ಹಾರಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನಗರ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮ... ದಂಪತಿಗಳ ಏಕಾಂತದಿಂದ ಕಾಂತಿಯುತ ತ್ವಚೆ, ಯುವಕರಾಗಿಡುವ ಮೋಡಿ ಅಡಗಿದೆ! ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ