NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನೆ ಮನವಿ
![](https://vijayapatha.in/wp-content/uploads/2025/01/8-jan-2025-nwkrtc-md-kodihalli-3.jpg)
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನವಲಗುಂದ ಘಟಕದ ನಿರ್ವಾಹಕ ಎಸ್.ಎನ್. ಚೀರ್ಚಿನಕಲ್ ಅವರು ಕರ್ತವ್ಯದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ತಂದಿರುವ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿಗಮದ ಎಂಡಿ ಪ್ರಿಯಾಂಗಾ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸೇನೆ ಒತ್ತಾಯಿಸಿದೆ.
ಮಂಗಳವಾರ ನಿಗಮದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರನ್ನು ಭೇಟಿ ಮಾಡಿದ ಸೇನೆಯ ಪದಾಧಿಕಾರಿಗಳು iಇದೇ ಜ.4ರಂದು ಆತ್ಮಹತ್ಯೆಗೆ ಯತ್ನಿಸಿ ಸದ್ಯ ಚಿಕಿತ್ಸೆ ಪಡೆಯುತ್ತಿರುವ ನಿರ್ವಾಹಕನ ಸ್ಥತಿಗೆ ಕಾರಣರಾದವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು,
ಇದರ ಜತೆಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ ಮನವಿ ಪತ್ರವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸೇನೆಯ ರಾಜ್ಯ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲೂ ನಗದ ರಹಿತ ವೈದ್ಯಕೀಯ ಸೌಲಭ್ಯವನ್ನು ಶೀಘ್ರವಾಗಿ ಜಾರಿ ಮಾಡಬೇಕು. ಈ ನಿಟ್ಟಿನಲ್ಲಿ ನೀವು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಎಂಡಿ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಇನ್ನು ನೌಕರರು ಸರಿಯಾಗಿ ರಜೆ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಘಿ ಎಲ್‌ಎಂಎಸ್ ರಜೆಯನ್ನು ಬಿಎಂಟಿಸಿ ಮಾದರಿಯಲ್ಲಿ ಅಥವಾ ಕೆಎಸ್ಆರ್ಟಿಸಿ, ಕೆಕೆಆರ್‌ಟಿಸಿ ಮಾದರಿಯಲ್ಲಿ ನಮ್ಮಲ್ಲಿಯೂ ಸಹ ಜಾರಿಗೆ ತರಬೇಕೆಂದು ಮನವಿ ಸಲ್ಲಿಸಿದರು.
ಗೌರವ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇನ್ನಿತರ ಸಮಸ್ಯೆಗಳನ್ನು ಎಂಡಿ ಅವರೆ ಬಳಿ ಚರ್ಚಿಸಲಾಯಿತು. ಈ ವೇಳೆ ವ್ಯವಸ್ಥಾಪಕ ನಿರ್ದೇಶಕರು ಮನವಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ತಿಳಿಸಿದರು ಎಂದು ಸೇನೆಯ ಪದಾಧಿಕಾರಿ ಟಿ.ಡಿ.ಗುಡಿಮನಿ ತಿಳಿಸಿದರು.
ಸಾರಿಗೆ ಸೇನೆಯ ರಾಜ್ಯ ಕಾರ್ಯಧ್ಯಕ್ಷ ಯೋಗೀಶ್ ಸಿ.ಎಚ್. ಹಾಗೂ ಜಗನ್ನಾಥ್ ಕೆ.ಕೆ., ಅರುಣ್ ಕುಮಾರ್ ಹಾಗೂ ಸದಸ್ಯರು ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)