NEWSನಮ್ಮರಾಜ್ಯರಾಜಕೀಯ

ಈಗ ಇರೋದು ಹೈಬ್ರಿಡ್ ತಳಿ ರಾಜಕಾರಿಗಳು, ಸಿಎಂ ಸಿಕ್ಕಿರೋದು ರಾಜ್ಯದ ದುರ್ದೈವ: ಸಿಎಂ ಇಬ್ರಾಹಿಂ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು. ಇಂದಿನ ಮುಖ್ಯಮಂತ್ರಿ ಸಿಕ್ಕಿರೋದು ರಾಜ್ಯದ ದುರ್ದೈವ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರೋದು ದುರ್ದೈವ. ಇನ್ನು ಸಿಎಂಗೆ ತಕ್ಕ ಮಂತ್ರಿಗಳಿದ್ದಾರೆ. ಇವರ ಮಧ್ಯೆ ಕೇಶವಕೃಪ, ಬಸವರ ಕೃಪಗಳು ಸಿಕ್ಕಿ ಒದ್ದಾಡುತ್ತಿವೆ. ಇನ್ನೊಂದೆಡೆ ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು. ನಾಟಿ ತಳಿಗಳು ಸಿಕ್ತಾ ಇಲ್ಲ. ಮರ್ಯಾದಸ್ಥರು ಸಿಗೋದು ವಿರಳವಾಗಿದೆ ಎಂದು ಲೇವಡಿ ಮಾಡಿದರು.

ತರಾವತಿ ಪರಧನ ಮತ್ತು ರಾಸಲೀಲೆ ರಾಸಲೀಲೆ ಹಾಗೂ ಕರ್ಮಕಾಂಡಗಳ ನಡುವೆ ರಾಜಕಾರಣ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಮಾಜಿ ಸಚಿವ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ

ಇದು ದಿಕ್ಕುತಪ್ಪಿದ ರಾಜಕಾರಣ. ಹಿಂದಿನ ಕಾಲದಲ್ಲಿ ಜನ ವೋಟು ಕೊಡಬೇಕಾದರೆ ಕುಲಕಸುಬು ನೋಡೋರು. ನಾವು ಸಹ ಒಂದು ಎತ್ತು ತಗೋಬೇಕಾದರೂ ಅದರ ತಳಿ ಸುಳಿ ಸೇರಿ ಅದರ ಹುಟ್ಟನ್ನು ನೋಡುತ್ತೇವೆ. ರೇಸ್‌ನಲ್ಲಿ ಕುದುರೆಗೆ ದುಡ್ಡು ಕಟ್ಟುವ ಮುನ್ನ ಅದರ ಅಪ್ಪ-ಅಮ್ಮ ಎಷ್ಟು ರೇಸ್ ಗೆದ್ದಿವೆ ಅಂತ ನೋಡುತ್ತಿದ್ದರು.

ಆದರೆ ಈಗಿನ ರೇಸ್ ಗಳು ಎಷ್ಟು ದುಡ್ಡು ತಂದಿದ್ದಾರೆ ಅಂತ ಮಾತ್ರ ನೋಡುತ್ತಾರೆ. ಈಗಿನ ರಾಜಕಾರಣ ಹಾಳಾಗಿ ಹೋಗಿದೆ. ಇದು ಸರಿಯಾಗುತ್ತದೆ ನಂಬಿಕೆ ಇಲ್ಲ. ಆದರೆ ಇದಕ್ಕಾಗಿ ಒಂದು ದೊಡ್ಡ ಕ್ರಾಂತಿ ಆಗಬೇಕಿದೆ. ಆ ಕ್ರಾಂತಿ ಆಗುತ್ತೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...