Wednesday, October 30, 2024
NEWSದೇಶ-ವಿದೇಶನಮ್ಮರಾಜ್ಯ

ಪತ್ರಪಥ: ಆಂಧ್ರ- ಕರ್ನಾಕಟ ಗಡಿ ಭಾಗದಲ್ಲಿ KSRTC ಬಸ್‌ ಹೆಚ್ಚಿಸಿ – ಪ್ರಯಾಣಿಕರಿಗೂ ಅನುಕೂಲ ಸಂಸ್ಥೆಗೂ ಲಾಭ

ವಿಜಯಪಥ ಸಮಗ್ರ ಸುದ್ದಿ

ಮಾನ್ಯರೇ,: ಬೆಂಗಳೂರಿನಿಂದ ಯಲಹಂಕ ಚಿಂತಾಮಣಿ ಮದನಪಲ್ಲಿ ಪೈಲರ್ ತಿರುಪತಿ ಮಾರ್ಗವಾಗಿ ಕಡಪ ಮದನಪಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯಮಿತ ಸೇವೆ ತೀರಾ ಕಡಿಮೆಯಿದ್ದು, ಈ ಮಾರ್ಗಗಳ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ವಿಭಾಗದ ಚಿಂತಾಮಣಿ – ಮದನಪಲ್ಲಿ ಪೈಲರ್ ತಿರುಪತಿ ಮಾರ್ಗವಾಗಿ ಕಡಪ ಮದನಪಲ್ಲಿ ಕರ್ನಾಟಕ ಮತ್ತು ಆಂಧ್ರದ ಗಡಿಗಳಾಗಿದ್ದು ಈ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಭಾರಿ ಬೇಡಿಕೆ ಇದೆ.

ಈ ಮಾರ್ಗಗಳಲ್ಲಿ ಖಾಸಗಿ ಬಸ್ ಓಡಾಡುತ್ತಿದ್ದು, ಬೆಂಗಳೂರಿನಿಂದ ಕಡಪ – ಮದನಪಲ್ಲಿಗೆ ಸಂಚರಿಸಬೇಕಿರುವ ಸಾರ್ವಜನಿಕರಿಗೆ ಹೊರೆಯಾಗುವಂತಹ ಪ್ರಯಾಣ ದರ ವಿಧಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಹೆಚ್ಚು ಹಣ ಕೊಟ್ಟು ಪ್ರಯಾಣಿಸುವ ಸ್ಥಿತಿ ಬಂದಿದೆ.

ಹೀಗಾಗಿ ಚಿಂತಾಮಣಿ ಡಿಪೋನಿಂದ ಅಂತಾರಾಜ್ಯ ಮಾರ್ಗಗಳಿಗೆ ಯಲಹಂಕ – ಚಿಂತಾಮಣಿ – ಮದನಪಲ್ಲಿ – ಪೈಲರ್ ತಿರುಪತಿ ಮಾರ್ಗವಾಗಿ, ಬೆಂಗಳೂರಿನಿಂದ ಕಡಪ – ಮದನಪಲ್ಲಿ – ತಿರುಪತಿಗೆ ಕೆಎಸ್ಆರ್ಟಿಸಿ ಬಸ್ ಸಂಖ್ಯೆಗಳನ್ನು ಹೆಚ್ಚಿಸಬೇಕು. ಇದರಿಂದ ನಂ.1 ಆದಾಯ ಕೂಡ ಸಂಸ್ಥೆಗೆ ಬರಲಿದೆ. ಅಲ್ಲದೆ ಈ ಮಾರ್ಗವಾಗಿ ಪ್ರಯಾಣಿಸುವ ಸಾರ್ವಜನಿಕರಿಗೂ ಅನುಕೂಲವಾಗಲಿದ್ದು, ಖಾಸಗಿ ಬಸ್ ನವರ ಸುಲಿಗೆಯನ್ನು ತಪ್ಪಿಸಬಹುದಾಗಿದೆ.

ವಾರದ ಕೊನೆ ಮತ್ತು ಹಬ್ಬ ಹರಿದಿನಗಳೂ ಸೇರಿದಂತೆ ಸಾಮಾನ್ಯ ದಿನಗಳಲ್ಲೂ ಬಸ್‌ ಸೇವೆ ಒದಗಿಸುವ ಮೂಲಕ ಅಂತಾರಾಜ್ಯ ಕೆಎಸ್‌ಆರ್‌ಟಿಸಿ ನಿಯಮಿತ ಸೇವಾ ಸಮಸ್ಯೆಗಳನ್ನು ಪರಿಹರಿಸಿ.

ಕರ್ನಾಟಕ ಮತ್ತು ಆಂಧ್ರ ಗಡಿಗಳಿಂದ ಅಂತಾರಾಜ್ಯ ಪರಸ್ಪರ ಒಪ್ಪಂದದ ಕೆಎಸ್‌ಆರ್‌ಟಿಸಿ ಮತ್ತು ಎಪಿಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಬೇಕಿದೆ. ಈ ಬಗ್ಗೆ ದಯವಿಟ್ಟು ಗಮನಿಸಿ ಬೆಂಗಳೂರಿನಿಂದ ಕಡಪ – ಮದನಪಲ್ಲಿ ಮತ್ತು ತಿರುಪತಿ ಮೂಲಕ ಅಂತಾರಾಜ್ಯ ಕೆಎಸ್‌ಆರ್‌ಟಿಸಿ ಮತ್ತು ಎಪಿಎಸ್‌ಆರ್‌ಟಿಸಿ ಸೇವೆಯನ್ನು ಹೆಚ್ಚಿಸಿ.

ಕರ್ನಾಟಕ ಮತ್ತು ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ವಿಭಾಗದ ಚಿಂತಾಮಣಿ – ಮದನಪಲ್ಲಿ – ಕಡಪಾ -ತಿರುಪತಿ -ಮದನಪಲ್ಲಿ ಪೈಲರ್ ತಿರುಪತಿ ಮಾರ್ಗಗಳ ಮೂಲಕ ದಯವಿಟ್ಟು ಕೆಎಸ್ಆರ್ಟಿಸಿ ಬಸ್‌ಗಳ ಸೇವೆ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

l ಶ್ರೀಸಾಯಿ, ಪ್ರಯಾಣಿಕ ಮೊ: 91778 29677

 

Leave a Reply

error: Content is protected !!
LATEST
ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ