NEWSನಮ್ಮಜಿಲ್ಲೆನಮ್ಮರಾಜ್ಯ

ನಿಗಮದಿಂದ ನಿಗಮಕ್ಕೆ 128 ಅಧಿಕಾರಿಗಳು, ನೌಕರರ ಶಾಶ್ವತ ವರ್ಗಾವಣೆ: ಜು.31ರೊಳಗೆ ಬಿಡುಗಡೆಗೆ ಎಂಡಿ ಅನ್ಬುಕುಮಾರ್‌ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರ ಸಿಬ್ಬಂದಿಗಳು ಕೌನ್ಸೆಲಿಂಗ್‌ನಲ್ಲಿ ಅವರ ಸ್ವ-ಇಚ್ಛೆಯ ಮೇರೆಗೆ ವಿಲೀನಗೊಳ್ಳಲು ಆಯ್ಕೆ ಮಾಡಿಕೊಂಡಿರುವ ನಿಗಮಗಳಿಗೆ ಶಾಶ್ವತವಾಗಿ ವರ್ಗಾವಣೆ ಮಾಡಿ ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಯುತ ಸಮಿತಿ ಅಧ್ಯಕ್ಷರಾದ ವಿ.ಅನ್ಬುಕುಮಾರ್‌ ಆದೇಶ ಹೊರಡಿಸಿದ್ದಾರೆ.

ಅಧಿಕಾರಿ, ನೌಕರ ಸಿಬ್ಬಂದಿಗಳು ಕೌನ್ಸೆಲಿಂಗ್‌ನಲ್ಲಿ ಅವರ ಸ್ವ-ಇಚ್ಛೆಯ ಮೇರೆಗೆ ವಿಲೀನಗೊಳ್ಳಲು ಆಯ್ಕೆ ಮಾಡಿಕೊಂಡಿರುವ ಮೊದಲನೆ ಆದ್ಯತೆಯ ನಿಗಮವನ್ನು ಮಾತ್ರ ಪರಿಗಣಿಸಿ ಅವರನ್ನು ಶಾಶ್ವತ ಹಂಚಿಕೆ ಹಾಗೂ ವಿಲೀನ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದಲ್ಲಿ ಬಿಎಂಟಿಸಿಯ 17 ಅಧಿಕಾರಿಗಳು, ಎನ್‌ಡಬ್ಲ್ಯುಕೆಆರ್‌ಟಿಸಿಯ 16 ಅಧಿಕಾರಿಗಳು ಹಾಗೂ ಕೆಕೆಆರ್‌ಟಿಸಿಯ 9 ಅಧಿಕಾರಿಗಳನ್ನು ಶಾಶ್ವತವಾಗಿ ಅವರು ಬಯಸಿದ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ. ಅದರಂತೆ ಬಿಎಂಟಿಸಿಯ 49 ಮೇಲ್ವಿಚಾರಕ ಸಿಬ್ಬಂದಿ, ಎನ್‌ಡಬ್ಲ್ಯುಕೆಆರ್‌ಟಿಸಿಯ 23 ಮೇಲ್ವಿಚಾರಕ ಸಿಬ್ಬಂದಿ ಹಾಗೂ ಕೆಕೆಆರ್‌ಟಿಸಿಯ 14 ಮೇಲ್ವಿಚಾರಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇವರನ್ನು ಹೊರತುಪಡಿಸಿ ಈ ಆದೇಶದಲ್ಲಿ ಬಿಎಂಟಿಸಿಯ ಇಬ್ಬರು ಅಧಿಕಾರಿಗಳು ಹಾಗೂ 4ಮಂದಿ ಮೇಲ್ವಿಚಾರಕ ಸಿಬ್ಬಂದಿಯನ್ನು ಎನ್‌ಡಬ್ಲ್ಯುಕೆಆರ್‌ಟಿಸಿಯ 5ಮಂದಿ ಅಧಿಕಾರಿಗಳನ್ನು ಹಾಗೂ ಕೆಕೆಆರ್‌ಟಿಸಿಯ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಮೇಲ್ವಿಚಾರಕ ಸಿಬ್ಬಂದಿಯ ವರ್ಗಾಗಣೆಯನ್ನು ಕೈ ಬಿಡಲಾಗಿದೆ ಎಂದು ಅನ್ಬುಕುಮಾರ್‌ ತಿಳಿಸಿದ್ದಾರೆ.

ಒಟ್ಟಾರೆ ಬಿಎಂಟಿಯಿಂದ 72 ಮಂದಿ ಅಧಿಕಾರಿಗಳು/ ನೌಕರರು ಶಾಶ್ವತ ವರ್ಗಾವಣೆ ಬಯಸಿ ಅರ್ಜಿಸಿದ್ದು, ಅವರಲ್ಲಿ 17 ಮಂದಿ ಅಧಿಕಾರಿಗಳನ್ನು (Officers) ಹಾಗೂ 49 ಮೇಲ್ವಿಚಾರಕ ಸಿಬ್ಬಂದಿ (Supervisory staff)ಗಳನ್ನು ಮಾತ್ರ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ. ಉಳಿದ 6 ಮಂದಿಯ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.

ಅದರಂತೆ ಎನ್‌ಡಬ್ಲ್ಯುಕೆಆರ್‌ಟಿಸಿಯಿಂದ ಒಟ್ಟು 44 ಅಧಿಕಾರಿಗಳು/ ಮೇಲ್ವಿಚಾರಕ ಸಿಬ್ಬಂದಿ ಶಾಶ್ವತ ವರ್ಗಾವಣೆ ಬಯಸಿ ಅರ್ಜಿಸಿದ್ದು, ಅವರಲ್ಲಿ 16 ಮಂದಿ ಅಧಿಕಾರಿಗಳನ್ನು (Officers) ಹಾಗೂ 23 ಮೇಲ್ವಿಚಾರಕ ಸಿಬ್ಬಂದಿ (Supervisory staff)ಗಳನ್ನು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ. ಉಳಿದ 5 ಮಂದಿ ಅಧಿಕಾರಿಗಳ ವರ್ಗಾವಣೆಯನ್ನು ತಡೆ ಹಿಡಿಯಲಾಗಿದೆ.

ಇನ್ನು ಕೆಕೆಆರ್‌ಟಿಸಿಯಿಂದ ಒಟ್ಟು 27 ಅಧಿಕಾರಿಗಳು/ ಮೇಲ್ವಿಚಾರಕ ಸಿಬ್ಬಂದಿ ಶಾಶ್ವತ ವರ್ಗಾವಣೆ ಬಯಸಿ ಅರ್ಜಿಸಿದ್ದು, ಅವರಲ್ಲಿ 9 ಮಂದಿ ಅಧಿಕಾರಿಗಳನ್ನು (Officers) ಹಾಗೂ 14 ಮೇಲ್ವಿಚಾರಕ ಸಿಬ್ಬಂದಿ (Supervisory staff)ಗಳನ್ನು ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದ್ದು, 27ರ 4 ಮಂದಿಯ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.

ಇನ್ನುಳಿದಂತೆ ಶಾಶ್ವತ ವರ್ಗಾವಣೆ ಮಾಡಲಾಗಿರುವ ಅಧಿಕಾರಿ/ಮೇಲ್ವಿಚಾರಕರ ಪಟ್ಟಿಯನ್ನು ಈಗಾಗಲೇ ಸಂಬಂಧಪಟ್ಟ ನಿಗಮಗಳ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅದರ ಜತೆಗೆ ಈ ಪಟ್ಟಿಯಲ್ಲಿ, ಬಿಡುಗಡೆಗೊಳಿಸದಿರಲು ತಿಳಿಸಿರುವ ಅಧಿಕಾರಿ/ಮೇಲ್ವಿಚಾರಕ ಸಿಬ್ಬಂದಿಗಳು ಇದ್ದು ಅವರು ಆದ್ಯತೆ ಬದಲಾವಣೆ ಮಾಡುವಂತೆ ಕೋರಿದ್ದು, ಅವರನ್ನು ಖುದ್ದಾಗಿ ಕೌನ್ಸೆಲಿಂಗ್ ಮಾಡಲು ಅಧಿಕಾರಯುತ ಸಮಿತಿ ತೀರ್ಮಾನಿಸಿದೆ.

ಆದುದರಿಂದ Officers not to Relieve /Supervisory staff not to Relieve ಎಂದು ತಿಳಿಸಿರುವ ಅಧಿಕಾರಿ/ ಮೇಲ್ವಿಚಾರಕ ” ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಬಾರದು. ಅವರನ್ನು ಹೊರತುಪಡಿಸಿ ತಮ್ಮ ನಿಗಮದಿಂದ ಮೂರು ನಿಗಮಗಳಿಗೆ ಶಾಶ್ವತವಾಗಿ ಹಂಚಿಕ ಹಾಗೂ ವಿಲೀನಗೊಂಡ ಅಧಿಕಾರಿ/ ಮೇಲ್ವಿಚಾರಕ ಸಿಬ್ಬಂದಿಗಳನ್ನು 31.07.2023 ರೊಳಗೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಯುತ ಸಮಿತಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಶಾಶ್ವತವಾಗಿ ವರ್ಗಾವಣೆಗೊಂಡ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: Autonomous Relieving letter 26-07-2023-1

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು