Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಬದುಕು ಹಳ್ಳ ಹಿಡಿಯಲು ಈ ಹಿಂದಿನ ಸರ್ಕಾರಗಳು ಕಾರಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳು ನಗರ, ಹಳ್ಳಿಗಳು ಮತ್ತು ಹೋಬಳಿ ಮಟ್ಟದಲ್ಲಿ ಸಂಚರಿಸುತ್ತಿವೆ. ಅವುಗಳ ಸಂಚಾರಕ್ಕೆ ಬೇಕಾಗಿರುವುದು ಅಧಿಕಾರಿಗಳಲ್ಲ ಬದಲಿಗೆ ಚಾಲನಾ ಸಿಬ್ಬಂದಿ.

ಅಂದರೆ ಚಾಲಕರು, ನಿರ್ವಾಹಕರು ಮತ್ತು ಬಸ್‌ಕೆಟ್ಟುಹೋದರೆ ಅದನ್ನು ದುರಸ್ತಿ ಮಾಡುವ ಮೆಕ್ಯಾನಿಕ್‌ಗಳು. ಇವರು ಇಲ್ಲದೆ ಹೋದರೆ ಸಾರಿಗೆ ಸಂಸ್ಥೆಗಳೇ ಇರೋದಿಲ್ಲ. ಆದರೆ ಇವರಿಗೆ ಸರಿಯಾದ ವೇತನಕೊಡದೆ, ಅವರ ಬದುಕನ್ನು ಹಳ್ಳ ಹಿಡಿಯುವಂತೆ ಈ ಹಿಂದಿನಿಂದಲೂ ಆಳ್ವಿಕೆ ನಡೆಸಿಕೊಂಡು ಬಂದಿರುವ ಸರ್ಕಾರಗಳು ಮಾಡಿಕೊಂಡು ಬಂದಿವೆ. ಅದು ಈಗಲೂ ಮುಂದುವರಿದಿದೆ.

ಮತ್ತೊಂದೆಡೆ, ಸರ್ಕಾರಿ ಬಸ್‌ಗಳೆಂದು ಎಲ್ಲರೀತಿಯ ರಿಯಾತಿ ಬಸ್‌ಪಾಸ್‌ಗಳನ್ನು ವಿತರಣೆ ಮಾಡಲು ಇಲಾಖೆ ಮಟ್ಟದಲ್ಲಿ ಸರ್ಕಾರವೇ ಆದೇಶ ಹೊರಡಿಸುತ್ತದೆ. ಆ ಬಳಿಕ ಆದಾಯ ಬರುತ್ತಿಲ್ಲ ಎಂದು ನೌಕರಿಗೆ ಕಿರುಕುಳ ಕೊಡುವ ನಿಟ್ಟಿನಲ್ಲಿ ಡಿಪೋಗಳಲ್ಲಿ ಅಧಿಕಾರಿಗಳನ್ನು ಕಾಡಲು ಈ ಸರ್ಕಾರದ ಜನಪ್ರತಿಗಳು ಮುಂದಾಗುತ್ತಾರೆ. ಇದು ಯಾವ ನ್ಯಾಯ? ಇದಕ್ಕೆ ಸಿಎಂ ಮತ್ತು ಸಾರಿಗೆ ಸಚಿವರ ಉತ್ತರ ಕೊಡುವಷ್ಟು ಜಾಣ್ಮೆ ತೋರುವರೆ.

ಸಾರಿಗೆ ನಿಗಮಗಳಲ್ಲಿ ನೌಕರಿ ಸಿಕ್ಕಿತು ಎಂದು ಈ ಹಿಂದೆ ಹಲವು ಕನಸುಗಳನ್ನು ಕಟ್ಟಿಕೊಂಡು ಖುಷಿ ಪಡುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ ಕಾರಣ ಸರ್ಕಾರ ಮತ್ತು ಸಾರಿಗೆ ನಿಗಮಗಳಿಗೆ ಒಂದ ಕೆಲ ನೀಚ ಅಧಿಕಾರಿಗಳ ನಡೆ ಎಂದರೆ ತಪ್ಪಾಗಲಾರದು. ಇನ್ನು ಪ್ರಸ್ತುತ ಬಿಜೆಪಿ ಸರ್ಕಾರ ಬಂದ ಮೇಲೆ ನೌಕರರು ಒತ್ತಡ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಕೀಳು ಭಾವನೆಯಿಂದ ಈ ನೌಕರರು ಕಾಣುತ್ತಿದ್ದಾರೆ.

ಅಂದರೆ ಯಥಾ ರಾಜ ತತಪ್ರಜೆ ಎಂಬುದಕ್ಕೆ ಬಿಜೆಪಿ ಸರ್ಕಾರ ಇಂದು ನಿದರ್ಶನವಾಗಿ ರಾಜ್ಯದಲ್ಲಿ ಕಾಣುತ್ತಿದೆ. ಸಾರಿಗೆ ನೌಕರರು ಕೂಡ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುತ್ತೇವೆ. ನಮ್ಮ ಕುಟುಂಬದವರು ಉತ್ತಮ ಜೀವನ ಸಾಗಿಸಲು ಬೇಕಾದಷ್ಟು ಸಂಪಾದಿಸುತ್ತೇವೆ ಎಂಬ ಆಶಾಗೋಪುರ ಕಟ್ಟಿಕೊಂಡು ಬಂದವರು. ಆದರೆ, ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಮಾಡದೆ, ಅವರ ಆರ್ಥಕ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳ್ಳಲು ಕಾರಣವಾಗಿದೆ ಈ ಸರ್ಕಾರ.

ಇನ್ನು ನಿಗಮಗಳ ಕೆಲವು ಅಧಿಕಾರಿಗಳು ಸಂಸ್ಥೆಯ ಕಾನೂನಿನಲ್ಲಿರುವ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ನೌಕರರಿಗೆ ಹಿಂಸೆ ನೀಡುತ್ತಿರುವುದನ್ನೆ ಕಾಯಕಮಾಡಿಕೊಂಡಿದ್ದಾರೆ. ಇದು ಸಚಿವರ ಗಮನಕ್ಕೆ ಬಂದಿಲ್ಲವೇ ಅಥವಾ ಸಚಿವರೇ ಅಧಿಕಾರಿಗಳನ್ನು ಈ ರೀತಿ ಕಿರುಕುಳ ಕೊಡಲು ಪ್ರಚೋದನೆ ನೀಡುತ್ತಿದ್ದಾರಾ ಎಂಬ ಅನುಮಾನಗಳು ದಟ್ಟವಾಗುತ್ತಿವೆ.

ಸಾರಿಗೆ ನಿಗಮಗಳಲ್ಲಿ ನೌಕರರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲು ಇರುವ ಅಧಿಕಾರಿಗಳಿಗೆ ಅಂದರೆ ಆಡಳಿತ ವರ್ಗದ ಸಿಬ್ಬಂದಿಗೆ ಮುಂಬಡ್ತಿ ಮತ್ತು ವೇತನ ಹೆಚ್ಚಳವು ಕಾಲ ಕಾಲಕ್ಕೆ ಆಗುತ್ತಲೇ ಇರುತ್ತದೆ. ಆದರೆ ಈ ಚಾಲನಾ ಸಿಬ್ಬಂದಿಗಳಿಗೆ ಮಾತ್ರ ಆ ಅವಕಾಶ ಇದರೂ 15-20-25 ವರ್ಷ ಸೇವೆ ಪೂರೈಸಿರುವವರಿಗೂ ಈವರೆಗೂ ಸೇವ ಮುಂಬಡ್ತಿ ನೀಡಿಯೇ ಇಲ್ಲ. ಇದಕ್ಕೆ ಕಾರಣ ಏನು?

ಇನ್ನಾದರೂ ಈ ನೌಕರರಿಗೆ ವೇತನ ಹೆಚ್ಚಳ ಮಾಡುವ ಮತ್ತು ಕಾಲಕಾಲಕ್ಕೆ ಸಿಗಬೇಕಾದ ಮುಂಬಡ್ತಿಯನ್ನು ಅಂದರೆ ನಿಗಮಗಳಲ್ಲಿ 5 ವರ್ಷಕ್ಕೆ ಒಮ್ಮೆ ಈಗಾಗಲೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡುತ್ತಿರುವ ರೀತಿಯಲ್ಲೇ ಕೊಡುವ ಮೂಲಕ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗನ್ನು ಒದಗಿಸಬೇಕು.

ಇನ್ನು ಹೇಳಬೇಕೆಂದರೆ ಎಟಿಎಸ್‌ಹುದ್ದೆಯಲ್ಲಿರುವ ಕೆಲವು ವ್ಯಕ್ತಿಹಳು ಸಂಸ್ಥೆಗೆ ಬಂದ 2-3 ವರ್ಷದಲ್ಲೇ ಕೋಟಿ ಕೋಟಿ ಹಣ ಮಾಡಿಕೊಂಡು ತಮಗೆ ಬೇಕಾದ ಸ್ಥಳದಲ್ಲಿ ಮನೆ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದರೆ ಇನ್ನು ಡಿಪೋ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ( ಅಧಿಕಾರಿಗಳು ಎಲ್ಲರೂ ಅಲ್ಲ) ನೌಕರರನ್ನು ಎಷ್ಟರ ಮಟ್ಟಿಗೆ ಸುಲಿಗೆ ಮಾಡುತ್ತಿದ್ದಾರೆ ಎಂಬುವುದರ ಬಗ್ಗೆ ಈವರೆಗೂ ಸಾರಿಗೆ ಸಚಿವರ ಏಕೆ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ?

ನಾಡಿನ ಜನತೆಗೆ ಉತ್ತಮ ಸಾರಿಗೆ ಸೇವೆ ಒದಗಿಸಬೇಕು ಎಂದು ಹೇಳುವ ಸರ್ಕಾರ ಮತ್ತು ಸಾರಿಗೆ ಸಚಿವರು ಸಂಸ್ಥಗಳಿಗೆ ಹೊರೆಯಾಗುವ ಬಸ್‌ಗಳ ಖರೀದಿಗೆ ಮುಂದಾಗುವುದು ಏತಕ್ಕಾಗಿ? ಇದರಿಂದ ಬರುವ ಲಾಭವಾದರೂ ಏನು? ಸಂಸ್ಥೆಗೆ ಮತ್ತು ಜಬನರಿಗೆ ಹೊರೆ ಆಗುವಂತ ನಿರ್ಧಾರವನ್ನು ಕೈ ಬಿಟ್ಟು ಸಾರ್ವಜನಿಕರಿಗೆ ಅನುಕೂಲಕರವಾದ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸಾರಿಗೆ ಸಚಿವರು ಹೊರಬೇಕಿದೆ.

ಇತ್ತ ಸಾರಿಗೆ ನಿಗಮಗಳನ್ನು ಅದೋಗತಿಗೆ ತರುತ್ತಿರುವ ಸರ್ಕಾರ ಈಗಲಾದರೂ ಅಧಿಕಾರ ಇರುವ ಕೆಲವೇ ಕೆಲವು ತಿಂಗಳುಗಳಲ್ಲಿ ತಮ್ಮ ಜಾಣ್ಮೆಯನ್ನು ತೋರಿ ನಿಗಮಗಳಿಗೆ ಮತ್ತು ನೌಕರರಿಗೆ ಸಹಿಸುದ್ದಿಯನ್ನು ಕೊಡಬೇಕಿದೆ. ಇಲ್ಲದಿದ್ದರೆ ನೀವು ಜನರಿಗೆ ಉಚಿತ ಪ್ರಯಾಣ ಎಂದು ಯಾಮಾರಿಸಲು ನೋಡಿದರೆ ಅದಕ್ಕೆ ಮುಂದಿನ ದಿನಗಳಲ್ಲಿ ಪಾಠಕಲಿಸಲಿದ್ದಾರೆ. ಅದನ್ನು ಮರೆಯಬೇಡಿ.

Leave a Reply

error: Content is protected !!
LATEST
KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ... ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌ KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ