CrimeNEWSನಮ್ಮಜಿಲ್ಲೆ

ರಾಮನಗರ: ಸ್ಮಶಾನದಿಂದ ಮನುಷ್ಯರ ಬುರುಡೆ ತಂದು ಪೂಜೆ ಮಾಡುತ್ತಿದ್ದವನ ಬಂಧನ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಮನುಷ್ಯರ ಹತ್ತಾರು ತಲೆ ಬುರುಡೆ ಹಾಗೂ ಕೆಲವು ಮೂಳೆಗಳನ್ನು ಇಟ್ಟುಕೊಂಡು ಪೂಜೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬಿಡದಿ ಹೋಬಳಿ ಜೋಗರದೊಡ್ಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡಿಸಿದೆ ಪೊಲೀಸರು ಗ್ರಾಮದ ಬಲರಾಮ್ (30) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಲರಾಮ್ ತನ್ನ ತೋಟದ ಮನೆಯಲ್ಲಿ ಮನುಷ್ಯರ ಬುರುಡೆಗಳನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದ. ಸ್ಮಶಾನಗಳಲ್ಲಿ ಶವಗಳನ್ನು ಊಳುತ್ತಿದ್ದನ್ನು ಗಮನಿ ಬಳಿಕ ರಾತ್ರಿ ವೇಳೆ ಸ್ಮಶಾನಕ್ಕೆ ಹೋಗಿ ಗುಂಡಿಯಿಂದ ದೇಹ ಹೊರ ತಗೆದು ಬುರುಡೆ ಸೇರಿದಂತೆ ಹಲವು ಮೂಳೆಗಳನ್ನು ತಂದು ತೋಟದ ಮನೆಯಲ್ಲಿ ಸಂಗ್ರಹಿಸಿ ಪೂಜೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನು ಸ್ಮಶಾನ ಕಾಳಿ ಪೀಠ ಎಂದು ಹೇಳಿಕೊಂಡು ಸಣ್ಣ ದೇವಾಲಯ ಕಟ್ಟಿಕೊಂಡು ಪೂಜೆ ಮಾಡುತ್ತಿದ್ದ. ದೇವಾಲಯಕ್ಕೆ ಯಾರನ್ನು ಸಹ ಸೇರಿಸುತ್ತಿರಲಿಲ್ಲ. ಬುರುಡೆಗಳ ಜೊತೆಗೆ ತ್ರಿಶೂಲಗಳನ್ನು ಇಟ್ಟಿಕೊಂಡು ಪೂಜೆ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಸ್ಮಶಾನದಿಂದ ಬುರುಡೆ‌ಯನ್ನು ತರುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದದ್ದಾನೆ. ಈ ವೇಳೆ ಗ್ರಾಮಸ್ಥರು ಸ್ಮಶಾನದ ಪೀಠದ ಒಳಗೆ ಹೋಗಿ ನೋಡಿದಾಗ ನಿಜ ಬಣ್ಣ ಬಯಲಾಗಿದೆ.

20ಕ್ಕೂ ಹೆಚ್ಚು ಮನುಷ್ಯರ ತಲೆ ಬುರುಡೆಗಳು ಹಾಗೂ ಕೆಲವು ಮೂಳೆಗಳು ಪತ್ತೆಯಾಗಿವೆ. ಈ ವಿಷಯವನ್ನು ತಕ್ಷಣ ಗ್ರಾಮಸ್ಥರು ಬಿಡದಿ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪೂಜಾರಿ ಬಲರಾಮ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ