Please assign a menu to the primary menu location under menu

CrimeNEWSಸಿನಿಪಥ

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪುಟ್ಟಗೌರಿ ಮದುವೆ, ಗಿಣಿರಾಮದಂತಹ ಹಿಟ್‌ ಧಾರಾವಾಹಿಗಳನ್ನು ನೀಡಿದ್ದ ಕನ್ನಡ ಕಿರುತೆರೆಯ ನಿರ್ದೇಶಕ ಮತ್ತು ನಿರ್ಮಾಪಕ ಕೆ.ಎಸ್. ರಾಮ್​ಜೀ  ವಿರುದ್ಧ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿದ್ದವು.

ಇದನ್ನು ಗಮನಿಸಿದ ನಿರ್ಮಾಪಕ ರಾಮ್​ಜೀ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಯುವನಟಿ ಒಬ್ಬರು ಯೂಟೂಬ್‌ ಸಂದರ್ಶನದಲ್ಲಿ ರಾಮ್‌ಜೀ ಅವರ ಹೆಸರನ್ನು ಹೇಳದೆ ಲೈಗಿಂಕ ಕಿರುಕುಳದ ಆರೋಪ ಮಾಡಿದ್ದರು.   ಈಗ ಸಾಮಾಜಿಕ ಜಾಲತಾಣದಲ್ಲಿ ‘ಎಕ್ಸ್​ಪೋಸಿಂಗ್ ಕೆ.ಎಸ್. ರಾಮ್​ಜೀ’ ಹೆಸರಿನ ಪೇಜ್ ತೆರೆದು ರಾಮ್​ಜೀ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಲಾಗುತ್ತಿದೆ.

ಆ ಯುವತಿ ತನಗಾದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದು, ಕೆಲವು ಸುದ್ದಿ ವಾಹಿನಿಗಳ ಕದ ತಟ್ಟಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಆದರೆ, ಕೆ.ಎಸ್‌.ರಾಮ್‌ಜಿ ನ್ಯಾಯಾಲಯದ ಮೊರೆ ಹೋಗಿ ಕಾರ್ಯಕ್ರಮ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ ಎಂಬ ಪೋಸ್ಟ್​ಗಳನ್ನು ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇದೀಗ ಕೆ.ಎಸ್. ರಾಮ್​ಜೀ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ವಿರುದ್ಧ ಅಪಪ್ರಚಾರ ಮಾಡಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ತಾವು ಯಾವ ಯುವತಿಗೂ ಲೈಂಗಿಕ ಕಿರುಕುಳ ನೀಡಿಲ್ಲ, ಯಾವುದೇ ಅಪರಾಧ ಮಾಡಿಲ್ಲ ಎಂದು ರಾಮ್​ಜೀ ಹೇಳಿದ್ದಾರೆ. ಕನ್ನಡದ ಪ್ರಸಿದ್ಧ ನಿರ್ದೇಶಕ ನಿರ್ಮಾಪಕರ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಿರುವುದು ಕಿರುತೆರೆ ಲೋಕದಲ್ಲಿ ಆತಂಕ ಸೃಷ್ಟಿಸಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ ಟಿವಿ ನೋಡಬೇಡ ಓದಿಕೊ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು ಸಂಬಳಗಾರ ವರ್ಗಕ್ಕೆ 2025ರ ಬಜೆಟ್​​ನಲ್ಲಿ ಭರ್ಜರಿ ಗಿಫ್ಟ್‌ಕೊಟ್ಟ ವಿತ್ತ ಸಚಿವರು THE UNION BUDGET 2025-26: ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ- ರೈತರಿಗೆ ನಿರಾಸೆ 8ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ಬರೆಯಲು ಸಜ್ಜಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ