CrimeNEWSನಮ್ಮರಾಜ್ಯ

₹2.06 ಕೋಟಿ ಮೌಲ್ಯದ ಅನ್ನಭಾಗ್ಯ ಅಕ್ಕಿಗೆ ಕನ್ನ ಪ್ರಕರಣ: ದೂರು ಕೊಟ್ಟ ಅಧಿಕಾರಿಯೇ ಖದೀಮ- ತನಿಖೆಯಿಂದ ಹೊರಬಿತ್ತು ಸತ್ಯ

ಪ್ರಭುದೊರೆ, ಭೀಮರಾಯ ಮಸಾಲಿ.
ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಅನ್ನಭಾಗ್ಯ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಕ್ಕಿ ಕಳ್ಳತನ ಪ್ರಕರಣದಲ್ಲಿ ದೂರುದಾರನೇ ಆರೋಪಿಯಾಗಿದ್ದಾನೆ ಎಂಬುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಗೋದಾಮಿನಿಂದ 2.06 ಕೋಟಿ ರೂ. ಮೌಲ್ಯದ 6077 ಕ್ವಿಂಟಲ್ ಅನ್ನಭಾಗ್ಯ ಪಡಿತರ ಅಕ್ಕಿ ನಾಪತ್ತೆಯಾಗಿತ್ತು. ಈ ಕುರಿತು ಆಹಾರ ನಾಗರಿಕ ಸರಬರಾಜು ಇಲಾಖೆಯ Deputy Director (DD) ಭೀಮರಾಯ ಮಸಾಲಿ ಶಹಾಪುರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇವರು ನೀಡಿದ ದೂರಿನ ಅನ್ವಯ ಪೊಲೀಸ್ ತನಿಖಾ ತಂಡದ ವಿಚಾರಣೆ ಶುರುಮಾಡಿದಾಗ ಅಸಲಿ ಸತ್ಯ ಹೊರಬಂದಿದೆ.

ಆ ಅಸಲಿಯತ್ತು ಏನೆಂದರೆ ದೂರು ನೀಡಿದ್ದ ಭೀಮರಾಯ ಮಸಾಲಿ ಅವರೇ ಪ್ರತೀ ತಿಂಗಳು 50 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಟಾಬಯಲಾಗಿದೆ. ಇದಲ್ಲದೆ, ಅಕ್ಕಿ ಕಳ್ಳತನದಲ್ಲಿ ನೇರವಾಗಿ ಅಧಿಕಾರಿಗಳು ಭಾಗಿಯಾಗಿರುವುದು ಈ ಮೂಲಕ ಬೆಳಕಿಗೆ ಬಂದಿದೆ.

ಈ ದಂಧೆಗೆ ಸಹಕಾರ ನೀಡಿದ್ದಕ್ಕೆ ಫುಡ್ ಇನ್ಸ್‌ಪೆಕ್ಟರ್‌ಗಳಿಗೆ ಪ್ರತೀ ತಿಂಗಳು 20 ಸಾವಿರ ರೂ. ಲಂಚ ಕೂಡ ಸಂದಾಯವಾಗುತ್ತಿತ್ತು. ಶಿರಸ್ತೇದಾರರಿಗೆ ಎ-1 ಆರೋಪಿ ಶಿವಯ್ಯ ಪ್ರತೀ ತಿಂಗಳು 10 ಸಾವಿರ ರೂ.ಗಳನ್ನು ಫೋನ್‌ ಪೇ ಮೂಲಕ ಹಾಕುತ್ತಿದ್ದ ಎಂಬುವುದು ತಿಳಿದು ಬಂದಿದೆ.

ಮಾತ್ರವಲ್ಲದೆ, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೂ ಇದರಲ್ಲಿ ಭರ್ಜರಿ ಪಾಲಿತ್ತು. ಹಾಲಿ ಹಾಗೂ ಹಿಂದಿನ Deputy Director ಅವರಿಗೂ ಪ್ರತೀ ತಿಂಗಳು 50 ಸಾವಿರ ರೂ. ತಲುಪುತಿತ್ತು. ಇದರೊಂದಿಗೆ ಹಿಂದಿನ Deputy Director ಪ್ರಭು ದೊರೆ ಹಾಗೂ ಈಗಿನ Deputy Director ಹಣ ಪಡೆದಿರುವ ವಿಷಯವು ಬೆಳಕಿಗೆ ಬಂದಿದೆ. ಇವೆಲ್ಲವನ್ನು ಆರೋಪಿ ಪೊಲೀಸ್​ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.

ಸದ್ಯ ಅಕ್ಕಿ ನಾಪತ್ತೆ ಪ್ರಕರಣದ ತನಿಖೆ ಸುರಪುರ ಡಿವೈಎಸ್​​ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ನಡೆಯುತ್ತಿದೆ. ಇವರೊಂದಿಗೆ ಶಹಾಪುರ ಠಾಣೆ ಸಿಪಿಐ ಎಸ್.ಎಂ. ಪಾಟೀಲ್, ಗೋಗಿ ಠಾಣೆ ಪಿಎಸ್ಐ ದೇವೇಂದ್ರರೆಡ್ಡಿ ಇದ್ದಾರೆ. ಇನ್ನು ತನಿಖೆ ವೇಳೆ ಹೊರಬಿದ್ದ ಮಾಹಿತಿಯಂತೆ ಇಂದು ಯಾದಗಿರಿ ಜಿಲ್ಲೆಯ ಫುಡ್ ಡಿಡಿ ಬಂಧನವಾಗುವ ಸಾಧ್ಯತೆ ಇದೆ.

ಪೊಲೀಸರು Deputy Director ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಿರುವ ಸಾಧ್ಯತೆ ಇದ್ದು, ಯಾದಗಿರಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಲಿ ಮತ್ತು ಹಾಲಿ Deputy Director ಜತೆ ಹಿಂದಿನ Deputy Director ಪ್ರಭು ದೊರೆ ಕೂಡಾ ಬಂಧನವಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಾಲ್ವರು ಅಧಿಕಾರಿಗಳ ಅಮಾನತು: ಈ ಅನ್ನ ಭಾಗ್ಯ ಅಕ್ಕಿ ನಾಪತ್ತೆ ಪ್ರಕರಣ ಸಂಬಂಧ ನಾಲ್ವರು ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಈ ಮುನ್ನ ತನಿಖೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಶಹಾಪುರ ತಾಲೂಕಿನ ಆಹಾರ ಶಿರಸ್ತೇದಾರ ಪ್ರಮೀಳಾ, ಆಹಾರ ನಿರೀಕ್ಷಕರಾದ ವಿಜಯರೆಡ್ಡಿ, ಬಸವರಾಜ ಹಾಗೂ ವಡಗೇರಾ ತಾಲೂಕಿನ ಆಹಾರ ನಿರೀಕ್ಷಕ ಜಂಬಯ್ಯ ಬಿ. ಗಣಚಾರಿ ಎಂಬುವರನ್ನು ಅಮಾನತು ಮಾಡಿ ಆಹಾರ ನಾಗರಿಕ ಹಾಗೂ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತ ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ