NEWSನಮ್ಮಜಿಲ್ಲೆನಮ್ಮರಾಜ್ಯ

“ಶಕ್ತಿ” ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾರಿಗೆ ಸಚಿವರೆ!? ವಾಹ್‌ ಬೇಷ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ “ಶಕ್ತಿ’ ಯೋಜನೆ ಜಾರಿಯಾದ ಅನಂತರ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ. ಬಿಎಂಟಿಸಿ ಹೊರತು ಪಡಿಸಿ ಉಳಿದ ಸಾರಿಗೆ ನಿಗಮಗಳು ಲಾಭದಲ್ಲಿವೆ. ಆದರೆ, ಸಂಬಳ, ನಿರ್ವಹಣೆ ವೆಚ್ಚ, ಡೀಸೆಲ್‌ ದರ ಹೆಚ್ಚಳವಾಗಿರುವುದು ಒಂದೆಡೆಯಾದರೆ ಕಳೆದ 4 ವರ್ಷಗಳಿಂದ ಟಿಕೆಟ್‌ ದರ ಹೆಚ್ಚಿಸಿಲ್ಲದ ಕಾರಣದಿಂದಾಗಿ ಲಾಭವನ್ನು ತೋರಿಸಲಾಗುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮೊನ್ನೆ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಸಚಿವರು, 2024ರ ಜೂನ್‌ ವರೆಗೆ “ಶಕ್ತಿ’ ಯೋಜನೆಯಡಿ 4,453.50 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು 1,413.47 ಕೋಟಿ ರೂ. ಬರಲು ಬಾಕಿ ಇದೆ.‌

ಆದರೆ ಯೋಜನೆಗೆ ಈ ವರ್ಷದ ಬಜೆಟ್‌ನಲ್ಲಿ 5,015 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ವರ್ಷ ಸ್ವಲ್ಪ ಕೊರತೆಯಾಗಬಹುದು. ಇದನ್ನು ಸರಿಪಡಿಸಲು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು ಪೂರಕ ಬಜೆಟ್‌ನಲ್ಲಿ ಒದಗಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ವೇತನ ತಾರತಮ್ಯಕ್ಕೆ ನೌಕರರ ಬೇಸರ: ಶಕ್ತಿಯೋಜನೆಯಿಂದ ನಿಗಮಗಳಿಗೂ ಲಾಭ, ಜನರಿಗೂ ಲಾಭವಾಗುತ್ತಿದೆ. ಆದರೆ ನಾವೇನು ಕರ್ಮ ಮಾಡಿದ್ದೇವೆ. ನಮಗೆ 2020ರ ಜನವರಿಯಿಂದ 1ರಿಂದ ಬಾಕಿ ಇರುವ ವೇತನ ಹೆಚ್ಚಳದ ಹಿಂಬಾಕಿ ಇನ್ನೂ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ಈವರೆಗೂ ಚಕಾರವೆತ್ತಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮುಖ್ಯವಾಗಿ ರಾಜ್ಯ ಸರ್ಕಾರವು ನೌಕರರು ಮತ್ತು ಅಧಿಕಾರಿಗಳ ನಡುವಿನ ಅಂತರ ತಗ್ಗಿಸಲು KSRTC ನೌಕರರ ಸಂಘಗಳಿಗೆ ಚುನಾವಣೆ ನಡೆಸಲು ಅನುಮೋದನೆ ನೀಡಬೇಕು. ಕೆಲವು ವಿಚಾರಗಳಲ್ಲಿ ಅಧಿಕಾರಿಗಳು ಮನಸ್ಸಿಗೆ ಬಂದಂಗೆ ನಿರ್ಧಾರ ಕೈಗೊಳ್ಳುತ್ತಿದ್ದು, ವೇತನ ತಾರತಮ್ಯಕ್ಕೆ ಕಾರಣವಾಗಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಚಿವರು ಕಳೆದೊಂದು ವರ್ಷದಲ್ಲಿ ಸಾರಿಗೆ ಇಲಾಖೆ ಮಾಡಿದ ಸಾಧನೆಗಳ ಪೈಕಿ ಮಾತನಾಡುತ್ತಿದ್ದಾರೆ. ಈ ಮಧ್ಯೆ ನಿಗಮಗಳಲ್ಲಿ ದುಡಿಯುತ್ತಿರುವ ನೌಕರರ ಬೇಡಿಕೆಗಳನ್ನು ಸಹ ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಒಟ್ಟಾರೆ ಸಾರಿಗೆ ನಿಗಮಗಳು ದಕ್ಷತೆಯಿಂದ ಮತ್ತು ಸಾರ್ವಜನಿಕ ಸ್ನೇಹಿಯಾಗಿ ಉತ್ತಮ ಕೆಲಸ ಮಾಡುತ್ತಿವೆ ಎಂದು ಪ್ರಶಸ್ತಿ ಮೇಲೆ ಪ್ರಶಸ್ತಿ ಪಡೆಯುತ್ತಲೇ ಇವೆ. ಆದರೆ ನೌಕರರಿಗೆ ಮಾತ್ರ ಉತ್ತಮ ಸೌಲಭ್ಯ, ವೇತನ ನೀಡುವಲ್ಲಿ ಮಾತ್ರ ಸರ್ಕಾರ ಮತ್ತು ಸಾರಿಗೆ ಸಚಿವರು ಮುಂದಾಗುತ್ತಿಲ್ಲ. ಇದು ಯಾವ ನ್ಯಾಯ ಸ್ವಾಮಿ ಎಂದು ಪಬ್ಲಿಕ್‌ ಕೇಳುತ್ತಿದ್ದಾರೆ.

ಇನ್ನು ಶಕ್ತಿ ಯೋಜನೆ ಒಂದು ವರ್ಷದ ಸಾಧನೆ ಬಗ್ಗೆ 40ಕ್ಕೂ ಹೆಚ್ಚು ಪುಟಗಳನ್ನು ಸಿದ್ಧಪಡಿಸಿ ಅದರಲ್ಲಿ ನಿಮ್ಮ ಸಾಧನೆಯನ್ನು ಬಿಂಬಿಸಿಕೊಂಡಿದ್ದೀರಿ. ಆದರೆ ಅದಕ್ಕೆ ಹೆಗಲು ಕೊಟ್ಟು ನಿಂತಿರುವ ನೌಕರರ ಬಗ್ಗೆ ಮತ್ತು ಅವರ ವೇತನ ತಾರತಮ್ಯತೆ ನಿವಾರಿಸುವ ಬಗ್ಗೆ ಏಕೆ ಈ ನಿಮ್ಮ ಕೈ ಪಿಡಿಯಲ್ಲಿ ಹೇಳಿಲ್ಲ? ಇದು ನಿಮ್ಮ ತಾರತಮ್ಯತೆಗೆ ಹಿಡಿದ ಕನ್ನಡಿಯಲ್ಲವೇ ಎಂದು ಜನರೆ ನಿಮ್ಮನ್ನು ಕೇಳುತ್ತಿದ್ದಾರೆ.

ಇನ್ನು ನೌಕರರ ಸಮಸ್ಯೆ ನಿವಾರಿಸುವಲ್ಲಿ ಮುಂದಾಗದ ನೀವು ಯಾವ ಪುರುಷಾರ್ಥಕ್ಕೆ ಈ 40 ಪುಟಗಳಿಗೂ ಹೆಚ್ಚಿನ ಕೈಪಿಡಿ ಮಾಡಿಕೊಂಡು ಅದನ್ನು ಹಂಚುತ್ತಿದ್ದೀರಿ ಎಂದು ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ. ಇನ್ನು ನಿಮಗೆ ನಿಜವಾಗಲು ಮಾನ ಮರ್ಯಾದೆ ಎಂಬುವುದು ಎಲ್ಲದರೂ ಒಂದು ಮೂಲೆಯಲ್ಲಿ ಕಿಂಚಿತ್ತಾದರೂ ಇದ್ದರೆ ನೌಕರರಿಗೆ ಸಿಹಿ ಸುದ್ದಿ ಕೊಡಿ ಎಂದು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ