NEWSಉದ್ಯೋಗನಮ್ಮರಾಜ್ಯ

ಮೂರು ವರ್ಷ ಕಳೆಯಿತು- ಎಫ್‌ಡಿಎ, ಎಸ್‌ಡಿಎ ಅಭ್ಯರ್ಥಿಗಳಿಗೆ ಯಾವಾಗ ನೇಮಕಾತಿ ಆದೇಶ ಪತ್ರ ಕೊಡುತ್ತೀರಾ ಸಿಎಂ: ಶರತ್ ಖಾದ್ರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಎಫ್‌ಡಿಎ, ಎಸ್‌ಡಿಎ ಅಭ್ಯರ್ಥಿಗಳಿಗೆ ಯಾವಾಗ ನೇಮಕಾತಿ ಆದೇಶ ಕೊಡುತ್ತೀರಾ ಮುಖ್ಯಮಂತ್ರಿಗಳೇ ಎಂದು ಆಪ್ ಮುಖ್ಯ ವಕ್ತಾರ ಶರತ್ ಖಾದ್ರಿ ಪ್ರಶ್ನಿಸಿದ್ದಾರೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 60 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಎಲ್ಲಾ ಕಡೆ ಹೇಳಿಕೊಂಡು ಅಲೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಮೊದಲು 1800 ಮಂದಿಗೆ ಕೆಲಸ ಕೊಡಿ ಎಂದು ವ್ಯಂಗ್ಯವಾಡಿದರು.

2017 ರಲ್ಲಿ ನಡೆದ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ 1,812 ಮಂದಿ ಉತ್ತೀರ್ಣರಾಗಿದ್ದು, ಇದರಲ್ಲಿ ಒಂದಷ್ಟು ಮಂದಿಗೆ ನೇಮಕಾತಿ ಆದೇಶ ನೀಡಿ, ಒಂದಷ್ಟು ಮಂದಿಯನ್ನು ಕಳೆದ 3 ವರ್ಷಗಳಿಂದ ಬೀದಿ ಪಾಲು ಮಾಡಲಾಗಿದೆ. ಈ ಕೂಡಲೇ ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಇಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದ್ದು, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹತ್ತಿರ ಇರುವ ಅಭ್ಯರ್ಥಿಗಳಿಗೆ ಮಾತ್ರ ಕೆಲಸ ನೀಡಲಾಗಿದೆ, ಪ್ರಮಾಣಿಕ ಅಭ್ಯರ್ಥಿಗಳನ್ನು ಹಣಿಯಲಾಗುತ್ತಿದೆ ಎಂದು ದೂರಿದರು.

ಮಾಜಿ ಸೈನಿಕ ಹಾಗೂ ನೊಂದ ಅಭ್ಯರ್ಥಿಗಳ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಕೊವಿಡ್-19 ಕಾರಣ ಮುಂದಿಟ್ಟುಕೊಂಡು ಹಣಕಾಸು ಇಲಾಖೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಇಲಾಖೆಗಳಿಗೆ ಆದೇಶ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಇಲಾಖೆಗಳು ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿವೆ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.

ಈಗಾಗಲೇ ನಮ್ಮ ಜೊತೆಗಾರರು ಕೆಲಸ ಮಾಡುತ್ತಿದ್ದಾರೆ, ನಾವು ಇದ್ದ ಕೆಲಸವನ್ನು ಬಿಟ್ಟು ಉಪವಾಸ ಮಲಗುವಂತಾಗಿದೆ. ನಮ್ಮ ಸಹಪಾಠಿಗಳು ಈಗಾಗಲೇ ಸೇವಾ ಹಿರಿತನದಲ್ಲಿ ಮುಂದಿದ್ದು ನಮಗೆ ಅನ್ಯಾಯ ಎಸಗಲಾಗಿದೆ ಹಾಗೂ ಈ ಅನ್ಯಾಯದ ವಿರುದ್ದ ದನಿ ಎತ್ತದಂತೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ ಎಂದು ನೋವು ತೋಡಿಕೊಂಡರು.

ಈ ಅನ್ಯಾಯವನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಪ್ರತಿಭಟನೆಗ ನಡೆಸಲು ಪೊಲೀಸ್ ಹಾಗೂ ಗೃಹ ಇಲಾಖೆಗೆ ಅನುಮತಿ ಕೇಳಿದರೂ ನೀಡುತ್ತಿಲ್ಲ. ತಮಗೆ ಬೇಕಾದ ಇಲಾಖೆಗಳಿಗೆ ಬೇಕಾದಷ್ಟು ದುಡ್ಡು ಬಿಡುಗಡೆ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಬಡ ಅಭ್ಯರ್ಥಿಗಳ ಕೂಗು ಕೇಳಿಸುತ್ತಿಲ್ಲವೇ ಎಂದರು.

ಮತ್ತೊಬ್ಬ ಅಭ್ಯರ್ಥಿ ಆಶಾ ಮಾತನಾಡಿ, ನಮ್ಮ ಮೂಲ ದಾಖಲೆಗಳನ್ನು ಇಲಾಖೆಗಳಿಗೆ ಕೊಟ್ಟಿದ್ದು ಈ ದಾಖಲಾತಿಗಳು ಇಲ್ಲದೆ ನಮಗೆ ಹೊರಗೂ ಕೆಲಸ ಸಿಗುತ್ತಿಲ್ಲ ಎಂದು ಹೇಳಿದರು.

ಅಧಿಸೂಚನೆ ಹೊರಡಿಸಿದ್ದು ಯಾವಾಗ?
ಕೆಪಿಎಸ್‌ಸಿಯಿಂದ 01-09-2017 ರಂದು 507 ಎಫ್‌ಡಿಎ ಹಾಗೂ 551 ಎಸ್‌ಡಿಎ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. 24-11-2017ರಂದು 454 ಎಫ್‌ಡಿಎ, 300 ಎಸ್‌ಡಿಎ ಹೆಚ್ಚುವರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಒಟ್ಟಾರೆ 1812 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.11.03.2018ರಿಂದ 25.02.2018ರವರೆಗೆ ಸದರಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. 2019ಫೆಬ್ರವರಿಯಿಂದ 2019 ಏಪ್ರಿಲ್‌ವರೆಗೆ 1:5 ಆಧಾರದಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ನಂತರ 2020 ಜನವರಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿಯಿಂದ ಬಿಡುಗಡೆ ಗೊಳಿಸಲಾಗಿತ್ತು.

1 Comment

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ