ಟಿವಿ ನೋಡಬೇಡ ಓದಿಕೊ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಬೆಂಗಳೂರು: ನೀನು ಟಿವಿ ನೋಡಬೇಡ ಓದಿನ ಕಡೆ ಗಮನಕೊಡು ಎಂದು ಪೋಷಕರು ಹೇಳಿದಕ್ಕೇ ನೊಂದುಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.
ಎಸೆಸೆಲ್ಸಿ ವಿದ್ಯಾರ್ಥಿನಿ ಭೂಮಿಕಾ (15) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಕೆ.
ಬೆಂಗಳೂರಿನ ಶ್ರೀನಗರದಲ್ಲಿ ಕುಣಿಗಲ್ ಮೂಲದ ಸುರೇಶ್, ಪತ್ನಿ, ಪುತ್ರ ಹಾಗೂ ಪುತ್ರಿ ಜತೆ ವಾಸವಾಗಿದ್ದಾರೆ. ಕೃಷಿಕರಾಗಿರುವ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಮಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದು ಈಗ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಹೀಗಾಗಿಟಿವಿ ನೋಡುತ್ತಿದ್ದ ಭೂಮಿಕಾಳಿಗೆ ತಂದೆ ಸುರೇಶ್ ಪರೀಕ್ಷೆಗೆ ಓದಿಕೊ ಮಗಳೆ ಟಿವಿಯನ್ನು ಯಾವಾಗ ಬೇಕಾದರೂ ನೋಡಬಹುದು ಎಂದು ಹೇಳಿದರು.
ಆಗ ಆಕೆ ಊಟ ಮಾಡಿ ಓದಿಕೊಳ್ಳುತ್ತೇನೆ ಎಂದು ಹೇಳಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಸರಿ ಎಂದು ತಂದೆ ಸುರೇಶ್ ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಗಡೆ ಬಂದಿರಲಿಲ್ಲ. ಕರೆದರೂ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಫ್ಯಾನ್‌ಗೆ ನೇಣುಬಿಗಿದುಕೊಂಡಿರುವುದು ಗೊತ್ತಾಗಿದೆ.
ಇದರಿಂದ ಭಾರಿ ದುಃಖಿತರಾದ ತಂದೆ ತಾಯಿ ಸ್ಥಳದಲ್ಲಿ ಗೋಳಾಡಿದ್ದಾರೆ. ಇತ್ತ ವಿಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು ಪ್ರಕರಣರ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ದೂರು ದಾಖಲಿಸಿಕೊಂಡಿದ್ದಾರೆ.