CRIMENEWSದೇಶ-ವಿದೇಶಸಿನಿಪಥ

ಹೃದಯಾಘಾತದಿಂದ ತಮಿಳು ಚಲನಚಿತ್ರ ನಿರ್ದೇಶಕ ವಿಕ್ರಮ್ ಸುಗುಮಾರನ್ ನಿಧನ

ವಿಜಯಪಥ ಸಮಗ್ರ ಸುದ್ದಿ

ಚೆನ್ನೈ: ತಮಿಳು ಚಲನಚಿತ್ರ ನಿರ್ದೇಶಕ ವಿಕ್ರಮ್ ಸುಗುಮಾರನ್ (47) ಬಸ್ಸಿನಲ್ಲಿ ಪ್ರಯಾಣಿಸುವಾಗ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೊಸ ಚಿತ್ರದ ಬಗ್ಗೆ ನಿರ್ಮಾಪಕರಿಗೆ ಕಥೆ ಹೇಳಲು ಮಧುರೈನಿಂದ ಚೆನ್ನೈಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಅಷ್ಟರಲ್ಲೇ ಇಹಲೋಕ ತ್ಯಜಿಸಿದರು ಎಂದು ವೈದ್ಯರು ಖಚಿತಪಡಿಸಿದರು.

ವಿಕ್ರಮ್ ಸುಗುಮಾರನ್ ಅವರ ಚೊಚ್ಚಲ ಚಿತ್ರ ‘ಮದ ಯಾನೈ ಕೂಟಂ’ ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರವಾಗಿದೆ.

ವಿಕ್ರಮ್ ಸುಗುಮಾರನ್ 1999 ಮತ್ತು 2000ರ ನಡುವೆ ನಿರ್ದೇಶಕ ಬಾಲು ಮಹೇಂದ್ರ ಅವರ ಸಹಾಯಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ‘ಮದ ಯಾನೈ ಕೂಟಂ’ ಚಿತ್ರದೊಂದಿಗೆ ಬೆಳಕಿಗೆ ಬಂದರು. ಅವರು ‘ಥೇರಂ ಪೋರಂ’ ಎಂಬ ಹೊಸ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ವಿಕ್ರಮ್ ಸುಗುಮಾರನ್ ಅವರ ಅಂತ್ಯಕ್ರಿಯೆ ಚೆನ್ನೈನಲ್ಲಿ ನಡೆಯಿತು. ಅವರ ನಿಧನಕ್ಕೆ ತಮಿಳು ಚಲನಚಿತ್ರ ನಟರು, ನಟಿಯರು ಮತ್ತು ಆಪ್ತ ವಲಯ ಸಂತಾಪ ಸೂಚಿಸುವ ಮೂಲಕ ಶ್ರಧಾಂಜಲಿ ಸಲ್ಲಿಸಿದ್ದಾರೆ.

Megha
the authorMegha

Leave a Reply

error: Content is protected !!