NEWSನಮ್ಮರಾಜ್ಯ

ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಹೊಸ ವರ್ಷ ಸ್ವಾಗತಿಸಲು ಪೊಲೀಸರು ತೋರಿದ ಶಿಸ್ತು ಶ್ಲಾಘನೀಯ: ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಸುರಕ್ಷಿತವಾಗಿ ಹಾಗೂ ಅಷ್ಟೇ ಅದ್ದೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಮ್ಮ ಕರ್ನಾಟಕ ಪೊಲೀಸರು ತೋರಿದ ಶಿಸ್ತು, ಸಮರ್ಪಣೆ ಮತ್ತು ಅವಿಶ್ರಾಂತ ಪ್ರಯತ್ನಗಳು ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರ ವೃತ್ತಿಪರತೆ ಮತ್ತು ಸಾರ್ವಜನಿಕರ ಸುರಕ್ಷತೆಯೆಡೆಗಿನ ಬದ್ಧತೆಯು ನೈಜ ಸೇವಾ ಮನೋಭಾವದ ದ್ಯೋತಕ. ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದರು.

ಹೊಸವರ್ಷವು ಎಲ್ಲ ಕನ್ನಡಿಗರಿಗೂ ಸುಖ, ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ. ಇನ್ನು ಬದಲಾವಣೆಯ ವರ್ಷದಿಂದ ಭರವಸೆಯ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ ನಾಡ ಬಾಂಧವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಈ ವರ್ಷ ಉತ್ತಮ ಮಳೆ – ಬೆಳೆಯಾಗಿ ರಾಜ್ಯ ಸಮೃದ್ಧಿಯಾಗಲಿ, ಸಮಾಜದಲ್ಲಿ ದ್ವೇಷ, ಅಸೂಯೆ ಅಳಿದು ಪ್ರೀತಿ – ಶಾಂತಿ – ಸೌಹಾರ್ದತೆ ನೆಲೆಸಲಿ, ಶಿಕ್ಷಣ, ಉದ್ಯೋಗ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವ ನಾಡಿನ ಪ್ರತಿಯೊಬ್ಬರ ಬದುಕು ಉನ್ನತಿಯೆಡೆಗೆ ಸಾಗಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದರು.

ನಾವೆಲ್ಲರೂ ಕೂಡಿ ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳೋಣ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Megha
the authorMegha

2 Comments

  • ಹೊಸ ವರ್ಷದ ಸಂಭ್ರಮವನ್ನು ಯಾವುದೇ ಅಹಿತಕರ ಘಟನೆಗಳಿಲ್ಲದೆ ಸಾಗಲು ಪೊಲೀಸರು ಮಾಡಿದ ಶ್ರಮವನ್ನು ಸಿಎಂ ಗುರುತಿಸಿರುವುದು ಖಂಡಿತವಾಗಿ ಪ್ರೋತ್ಸಾಹಕಾರಿ. ಆದರೆ ಇದೇ ರೀತಿಯ ಶಿಸ್ತು ಹಾಗೂ ಜವಾಬ್ದಾರಿ ಸಾಮಾನ್ಯ ದಿನಗಳಲ್ಲಿ ಕೂಡ ಸಮಾನವಾಗಿ ಮುಂದುವರಿಯುವುದು ಸಾರ್ವಜನಿಕರ ನಂಬಿಕೆಯನ್ನು ಇನ್ನಷ್ಟು ಬಲಪಡಿಸಬಹುದು. ಹೊಸ ವರ್ಷದಲ್ಲಿ ಎಲ್ಲರಿಗೂ ಸುರಕ್ಷತೆ ಹಾಗೂ ಸೌಹಾರ್ದತೆ ಹೆಚ್ಚುವಂತೆ ವ್ಯವಸ್ಥೆಗಳು ಮತ್ತಷ್ಟು ಪಾರದರ್ಶಕವಾಗಲು ನಿರೀಕ್ಷೆ.

  • ಸಿಎಂ ಸಿದ್ದರಾಮಯ್ಯರ ಹೇಳಿದಂತೆ, ಪೊಲೀಸರು ಹೊಸ ವರ್ಷವನ್ನು ಸುರಕ್ಷಿತವಾಗಿ ಬರಮಾಡಲು ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಾರೆ. ಈ ಶಿಸ್ತು ಮತ್ತು ಸಮರ್ಪಣೆಯು ನಮ್ಮ ಸಮಾಜದಲ್ಲಿ ಸುರಕ್ಷತೆ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಪ್ರಕಾರದಲ್ಲಿ ಪೊಲೀಸ್ ಸಿಬ್ಬಂದಿಯ ಕೃತಜ್ಞತೆಯನ್ನು ನಮ್ಮ ಸಮುದಾಯ ಮುಂದುವರಿಸಬೇಕು.

Leave a Reply to AI Music Generator Cancel reply

error: Content is protected !!
Latest news
ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ ಚಿತ್ರದುರ್ಗ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾರಿಗೆ ನೌಕರರ ಪಾದಯಾತ್ರೆ ಆರಂಭ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿ ನಾಪತ್ತೆ