ಮೈಸೂರು: ಮದುವೆ ನಿರಾಕರಿಸಿದ್ದಕ್ಕೆ ಬೇಸರಗೊಂಡ ಭಗ್ನ ಪ್ರೇಮಿ ಮನೆಯ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದು, ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ಲಕ್ಷ್ಮೀಪುರಂನಲ್ಲಿ ಇಂದು ನಡೆದಿದೆ.
ಸ್ಥಳೀಯ ನಿವಾಸಿ ಗಗನ್ ಎಂಬಾತನೆ ಯುವತಿಗೆ ಚಾಕು ಇರಿದ ಆರೋಪಿ. 5 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಆಕೆಗೆ 18 ವರ್ಷವಾದಾಗ ಅವಳನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಆಕೆ ತಾನು ಯುವಕನನ್ನು ಮದುವೆಯಾಗುದಕ್ಕೆ ನಿರಾಕರಿಸಿದ್ದಾಳೆ. ಅಲ್ಲದೆ ಯುವತಿಯ ಪೋಷಕರೂ ಸಹ ಗಗನ್ ಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬೇಸರ ಹಾಗೂ ಉದ್ರಿಕ್ತಗೊಂಡ ಗಗನ್ ಭಾನುವಾರ ಆಕೆಗೆ ಚಾಕು ಇರಿದು ನಂತರ ಪೊಲೀಸರಿಗೆ ಶರಣಗಿದ್ದಾನೆ,
ಇತ್ತ ಚಾಕು ಇರಿತಕ್ಕೊಳಗಾಗಿ ಗಾಯಗೊಂಡ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.