NEWSನಮ್ಮರಾಜ್ಯಸಿನಿಪಥ

ಮಸಣದ ಹೂವು ಅಪರ್ಣಾ ಮಾಡುತ್ತಿದ್ದ ಶುದ್ಧ ಕನ್ನಡ ನಿರೂಪಣೆಗೆ ಮನ ಸೋಲದವರೇ ಇಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಕೋಲ್ಮಿಂಚು ಮೂಡಿಸಿದ್ದ ನಟಿ, ಖ್ಯಾತ ನಿರೂಪಕಿ ಅಪರ್ಣಾ ವಿಧಿವಶರಾಗಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ, ಮಜಾ ಟಾಕೀಸ್‌ ವರು ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದರು. ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಶುದ್ಧ ಕನ್ನಡಕ್ಕೆ ಮನಸೋಲದವರೇ ಇಲ್ಲ.

ಚಂದನದಲ್ಲಿ ಮೂಡಿದ ಬಂದ ಚಂದದ ನಿರೂಪಣೆ ಮೂಲಕ ಹೊಸ ಲೋಕ ಪ್ರವೇಶಿಸಿದ ಅಪರ್ಣಾ, ತಮ್ಮ ಶುದ್ಧವಾದ ಕನ್ನಡ, ಮಾತಿನ ಶೈಲಿ ಹಾಗೂ ನಟನೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ರು. ಈಗ ಆ ಬಳಗವನ್ನೆಲ್ಲಾ ಬಿಟ್ಟು ಅಪರ್ಣಾ ಶಾಶ್ವತ ವಿದಾಯ ಹೇಳಿದ್ದಾರೆ. ಅಪರ್ಣಾ ವಿದಾಯ ಹೇಳಿದ್ರೂ, ಅವರ ಧ್ವನಿ ಮಾತ್ರ ಶಾಶ್ವತ. ಭವಿಷ್ಯದಲ್ಲಿ ಬರುವ ಅದೆಷ್ಟೋ ತಾಯಿ ಭುವನೇಶ್ವರಿಯ ಕನ್ನಡದ ಪೀಳಿಗೆಗಳು ಈ ಮಧುರ ಧ್ವನಿಯನ್ನು ಪ್ರೀತಿಸಿ, ಆರಾಧಿಸಲಿದೆ.

ಚಿಕ್ಕಮಗಳೂರು ಜಿಲ್ಲೆ ಪಂಚನಹಳ್ಳಿಯಲ್ಲಿ ಜನನ: ಹುಟ್ಟಿದ್ದು ಶುದ್ಧಗನ್ನಡದ ನೆಲೆ, ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ ಪಂಚನಹಳ್ಳಿ. ಬೆಳೆಸಿದ್ದು ಬೆಂಗಳೂರು ಎಂಬ ಮಾಯಾನಗರ ಸಪ್ತಕೋಟಿ ಕನ್ನಡಿಗರ ಪ್ರೀತಿ ತುಂಬಿದ ಹೃದಯ. ದೂರದರ್ಶನದ ಕಲಾವಿದೆಯಾಗುವ ಹೆಬ್ಬಯಕೆಯಿಂದ ಬಂದಾಕೆಗೆ ಬಣ್ಣದ ಲೋಕ ಬರ ಸೆಳೆದಿತ್ತು. ಚಿತ್ರಬ್ರಹ್ಮ ಪುಟ್ಟಣ ಕಣಗಾಲ್​ ಸಿನಿಮಾದಲ್ಲಿ ನಟಿಸಿದ್ದ ಅಪರ್ಣಾಗೆ ಸಿಕ್ಕ ಚಾನ್ಸ್​ಗಳು ಕಮ್ಮಿ. ಆದ್ರೆ, ಬದುಕು ಮಾತ್ರ ನಿರೂಪಣೆಯತ್ತ ಕರೆತಂದಿತ್ತು. ಅದೇ ಸರ್ವಸ್ವವೂ ಆಯ್ತು..

ಚಿತ್ರಬ್ರಹ್ಮನ ಗರಡಿಯಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅಪರ್ಣಾ, ಮಸಣದ ಹೂವಾಗಿ ಚಿರಪರಿಚಿತ. 1984ರಲ್ಲಿ ಮಸಣದ ಹೂವು ಸಿನಿಮಾ ಅಪರ್ಣಾರಿಗೆ ಮೊದಲ ಸಿನಿಮಾವಾದ್ರೆ, ಪುಟ್ಟಣ್ಣ ಕಣಗಾಲ್​ರ ಕೊನೇ ಚಿತ್ರ.. ಆದ್ರೆ ಅಪರ್ಣಾ ಸಿನಿಯಾನ ತುಂಬಾ ದೂರವೇನಲ್ಲ.. ಅದು 10ಕ್ಕೆ ನಿಂತಿತ್ತು. ಈ ಸಿನಿ ಯಾತ್ರೆ ಬಳಿಕ ದೂರದರ್ಶನ ಹತ್ತಿರವಾಗಿತ್ತು.

1990.. ದೂರದರ್ಶನದಲ್ಲಿ ಅಪರ್ಣಾ ನಿರೂಪಕಿಯಾಗಿ ಕಾಣಿಸಿಕೊಂಡ್ರು.. ಸದಾ ಕಲಿಕೆ, ಅಪ್ಪಟ ಕನ್ನಡ ಪದಗಳ ಮುತ್ತು ಪೋಣಿಸಿದ ಅಪರ್ಣಾರ ಭಾಷಾ ಶುದ್ಧಿಯೇ ಅಪೂರ್ವ. ಸರ್ಕಾರಿ ಕಾರ್ಯಕ್ರಮದಿಂದ, ಸಾಹಿತ್ಯ ಸಮ್ಮೇಳನ ಸೇರಿ ಬಹುತೇಕ ಕಾರ್ಯಕ್ರಮಗಳಲ್ಲಿ ಆ ಧ್ವನಿ ಇಲ್ಲದಿದ್ರೆ ಅದು ಅಪೂರ್ಣ ಅನ್ನೋ ಮಟ್ಟಿಗೆ ಅಪರ್ಣಾ ಬೆಳೆದು ನಿಂತಿದ್ರು..

ಅಪರ್ಣಾ ಅಪೂರ್ವ ದಾಖಲೆ!: 1993ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ರೇಡಿಯೋ ಜಾಕಿ. 1998ರಲ್ಲಿ ದೀಪಾವಳಿ ಪ್ರಯುಕ್ತ 8 ಗಂಟೆಗಳ ಕಾಲ ನಿರೂಪಣೆ. 90ರ ದಶಕದಿಂದ ಶುರುವಾಗಿ 7000ಕ್ಕೂ ಅಧಿಕ ಕಾರ್ಯಕ್ರಮ. ಬಿಗ್ ಬಾಸ್ ಕನ್ನಡ ಸೀಸನ್-1ರ ಸ್ಪರ್ಧಿ ಆಗಿ 41 ದಿನ ರಂಜನೆ. 2015ರ ನಂತ್ರ ಮಜಾ ಟಾಕೀಸ್​​ನಲ್ಲಿ ವರಲಕ್ಷ್ಮೀಯಾಗಿ ನಟನೆ. 20 ವರ್ಷಗಳ ಬಳಿಕ ‘ಗ್ರೇ ಗೇಮ್ಸ್’ ಸಿನಿಮಾಕ್ಕೆ ಬಣ್ಣ ಹಚ್ಚಿದ್ರು. ನಮ್ಮ ಮೆಟ್ರೋ, KSRTC, BSNL ಮತ್ತು ಏರ್​ಟೆಲ್​ಗೂ ಧ್ವನಿ.

ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ಕನ್ನಡ ಸಂಭಾಷಣೆಯಿಂದ ನಟಿ, ನಿರೂಪಕಿ ಅಪರ್ಣಾ ಗಮನ ಸೆಳೆದವರು. ಅಪರ್ಣಾ ಅಂದ್ರೆ ಕನ್ನಡ, ನಟನೆ, ಅವರ ಗುಣ ಎಲ್ಲವೂ ನೆನಪು. ಕಳೆದ ಕೆಲ ದಿನಗಳಿಂದ ಅಪರ್ಣಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಚಿಕ್ಕಮಗಳೂರಿನ ಪಂಚನಹಳ್ಳಿಯಿಂದ ಶುರುವಾದ ಅಪರ್ಣಾ ಪಯಣ, ಬೆಂಗಳೂರಿನ ಬಸವನಗುಡಿಯಲ್ಲಿ ಅಂತ್ಯ ಕಂಡಿದೆ. ಕ್ಯಾನ್ಸರ್ ಕಾಯಿಲೆಯಿಂದ ಅಪರ್ಣಾ ನಿಧನರಾಗಿದ್ದಾರೆ.

ಪ್ರೀತಿ ಇಲ್ಲದ ಮೇಲೆ ಎಂಬ ಧಾರಾವಾಹಿಯಲ್ಲಿ ಪಲ್ಲವಿ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ.. ಕಿರುತೆರೆಯ ಮಾಧ್ಯಮದ ಈವರೆಗೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿ ಸಿಕ್ಕಿದೆ. ಒಟ್ಟಾರೆ, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು‌ ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ ಚಿರಮೌನಕ್ಕೆ ಜಾರಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ