ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು
ನಾಟಿಕೋಳಿ ಸಾರು ಜತೆಗೆ ರಾಗಿ ಮುದ್ದೆ ಬಳಿಕ ಅನ್ನ ಉಂಡರೆ ಅದು ಸಿಂಪಲ್ ಆಗಿದ್ದರೂ ಒಳ್ಳೆ ಊಟ ಮಾಡಿದಂತೆಯೇ ಸರಿ ಎಂದುಕೊಳ್ಳುವ ನಮ್ಮ ಹಳ್ಳಿ ಹೈದರಿಗೆ ಇಂದು ನಾಟಿ ಕೋಳಿ ಸಾರು ಮಾಡುವ ವಿಧಾನ ಮತ್ತು ಅದರ ವಿಶೇಷತೆಗಳ ಬಗ್ಗೆ ನಾವು ಒಂದಷ್ಟು ಮಾಹಿತಿ ಹಂಚಿಕೊಳ್ಳಬೇಕು ಎನಿಸುತ್ತಿದೆ.
ಏನೇನೋ ತಿಂದು ಬಾಯಿ ಕೆಟ್ಟುಹೋಗಿದೆಕಮ್ಮಿ ಅದಕ್ಕೆ ಇಂದು ಕೋಳಿ ಸಾರು ಮಾಡು ಮನೆಯಲ್ಲಿರುವ ಹುಂಜವನ್ನು ಕೋಯ್ದು ಕೋಳಿ ಸಾರು ಮಾಡು ಎಂದು ನಮ್ಮ ಹಳ್ಳಿಯಲ್ಲಿ ವಯಸ್ಸಾದವರು ಹೇಳಿ ಮಾಡಿಸಿಕೊಂಡು ಚಪ್ಪರಿಸುತ್ತಿದ್ದರು.
ಹೀಗಾಗಿ ನಮ್ಮ ಹಳ್ಳಿಯ ಅದರಲ್ಲೀ ರೈತಾಪಿ ಜನರು ಸೇರಿದಂತೆ ಬಹುತೇಕರು ಹೆಚ್ಚಾಗಿ ಇಷ್ಟಪಡುವ ಈ ನಾಟಿಕೋಳಿಯ ಸಾರು ಮಾಡುವುದು ಹೇಗೆ ಎಂದು ನಾವು ತಿಳಿದುಕೊಳ್ಳೋಣ. ನಾಟಿಕೋಳಿ ಸಾರಿನ ಗಮದಿಂದ ಬಾಯಲ್ಲಿ ನೀರು ಬರುತ್ತದೆ.
ಇದು ನಾಟಿಕೋಳಿ ಸಾರು ಪ್ರಿಯರಿಗೆ ಆಗುವ ಉಲ್ಲಾಸಕರ ಮನಸ್ಸನ್ನು ಮುದಗೊಳಿಸುತ್ತದೆ. ಅದಕ್ಕಾಗಿಯೇ ಜತೆಗೆ ಇಂದು ಏನೆ ಆಗಲಿ ಕೋಳಿ ಸಾರು ಮಾಡೋಣ ಎನ್ನುವವರಿಗೆ ಈ ಮಾಹಿತಿ ಕೊಡುತ್ತಿದ್ದೇವೆ.
ಹಾಗಿದ್ದರೆ ತಡವೇಕೆ ಬನ್ನಿ ಅದೇನಿದೆ ಅಂತ ನೋಡೋಣ- ನಾಟಿ ಕೋಳಿ ಸಾರು: ಕರ್ನಾಟಕದ ಜನಪ್ರಿಯ ಮತ್ತು ಸಾಂಪ್ರದಾಯಿಕ ಅಡುಗೆಗಳಲ್ಲಿ ಇದು ಒಂದು. ಇದು ತನ್ನ ರುಚಿ ಮತ್ತು ಪೌಷ್ಟಿಕಾಂಶಗಳಿಂದಾಗಿ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ.
ನಾಟಿ ಕೋಳಿ ಸಾರು ತನ್ನ ವಿಶಿಷ್ಟವಾದ ರುಚಿಯಿಂದಾಗಿ ಜನಪ್ರಿಯವಾಗಿದೆ. ಇದು ಮಸಾಲೆಯುಕ್ತ ಮತ್ತು ಸ್ವಲ್ಪ ಖಾರವಾಗಿರುವುದರಿಂದ ರಾಗಿ ಮುದ್ದೆ, ಅನ್ನದೊಂದಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.
ಇದರಲ್ಲಿ ಪೌಷ್ಟಿಕಾಂಶ: ನಾಟಿ ಕೋಳಿ ಮಾಂಸವು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದು ಹಲವು ರೋಗಗಳಿಗೂ ಮದ್ದು ಎಂದು ಹಳ್ಳಿಯ ರೈತಾಪಿ ಹಿರಿಯರು ಹೇಳುತ್ತಿರುತ್ತಾರೆ.
ಸಾಂಪ್ರದಾಯಿಕ: ನಾಟಿ ಕೋಳಿ ಸಾರು ಕರ್ನಾಟಕದ ಸಂಸ್ಕೃತಿಯ ಭಾಗವಾಗಿದೆ. ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು: ನಾಟಿ ಕೋಳಿ, ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು, ಎಣ್ಣೆ, ಉಪ್ಪು, ಮಸಾಲೆ ಪದಾರ್ಥಗಳು (ಧನಿಯಾ, ಜೀರಿಗೆ, ಮೆಣಸು, ಕೆಂಪು ಮೆಣಸಿನಕಾಯಿ, ಅರಿಶಿನ, ಚಕ್ಕೆ, ಲವಂಗ, ಏಲಕ್ಕಿ).
ಮಾಡುವ ವಿಧಾನ: * ಕೋಳಿಯನ್ನು ಸ್ವಚ್ಛ ಮಾಡಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
* ಮಸಾಲೆಯ ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
* ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೊ ಹಾಕಿ ಮೃದುವಾಗುವವರೆಗೆ ಹುರಿಯಿರಿ.
- ರುಬ್ಬಿದ ಮಸಾಲೆಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
- ಕೋಳಿ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಸ್ವಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ ಕೋಳಿ ಮೃದುವಾಗುವವರೆಗೆ ಬೇಯಿಸಿ.
- ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ, 5 ನಿಮಿಷ ಕುದಿಸಿ. ನಂತರ ಒಲೆಯಿಂದ ಇಳಿಸಿ.
ಈಗ ರುಚಿಕರವಾದ ನಾಟಿ ಕೋಳಿ ಸಾರು ಸಿದ್ಧವಾಗಿದೆ. ಇದನ್ನು ಬಿಸಿ ರಾಗಿ ಮುದ್ದೆ ಅಥವಾ ಅನ್ನದೊಂದಿಗೆ ಬಿಸಿಬಿಸಿಯಾಗಿ ಬಡಿಸಿಕೊಂಡು ಚಪ್ಪರಿಸಿದರೆ ಸ್ವರ್ಗಕ್ಕೆ ಮೂರೇಗೇಣು ಎಂಬ ಅನುಭವ ನಿಮಗೆ ಆಗದಿರದು.
ಏನಂತೀರ. ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ಭಾವಿಸುತ್ತೇವೆ. ನಿಮಗೆ ಬೇರೆ ಯಾವುದೇ ಪ್ರಶ್ನೆಗಳಿದ್ದರೆ [email protected] ಗೆ ಮೇಲ್ ಮಾಡುವುದನ್ನು ಮರೆಯಬೇಡಿ.