NEWSಕೃಷಿಮೈಸೂರು

ರೈತರತ್ನ ಕುರುಬೂರು ಶಾಂತಕುಮಾರ್ ಹುಟ್ಟು ಹಬ್ಬ ನೆನಪಿಗಾಗಿ ಕೃಷಿ ಕಾರ್ಮಿಕ ಮಹಿಳೆಯರಿಗೆ ಸನ್ಮಾನ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘ ವತಿಯಿಂದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಹುಟ್ಟು ಹಬ್ಬದ ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ಕೃಷಿ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಲಾಯಿತು.

ನಗರದ ಜಲದರ್ಶಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಗಮ್ಮ ನಂಜನಗೂಡು ಅಳಗಂಜಿ, ಭಾಗ್ಯಮ ಮೈಸೂರು ತಾಲೂಕಿನ ವಾಜಮಂಗಲ, ರೂಪ ಎಚ್.ಡಿ.ಕೋಟೆ ತಾಲೂಕಿನ ಶಾಂತಿಪುರ ಗ್ರಾಮದ ಕೃಷಿ ಕಾರ್ಮಿಕ ರೈತ ಮಹಿಳೆ, ಇವರನ್ನು ಸನ್ಮಾನಿಸಲಾಯಿತು.

ಮಾರ್ಚ್‌ ತಿಂಗಳ ಮಹಿಳಾ ದಿನಾಚರಣೆ ಅಂಗವಾಗಿ ಈ ಕೃಷಿ ಕಾರ್ಮಿಕ ಮಹಿಳೆಯರ ಸನ್ಮಾನಿಸಿ ಮಾತನಾಡಿದ ರೈತರತ್ನ ಕುರುಬೂರು ಶಾಂತಕುಮಾರ್, ಇಂದು ನನ್ನ 64 ವಸಂತಗಳ ದಾಟಿದ ಹುಟ್ಟುಹಬ್ಬದ ನೆನಪಿಗಾಗಿ ರೈತರ ಕೃಷಿ ಕಾರ್ಯಕ್ಕೆ ಬೆನ್ನೆಲುಬಾಗಿ ಸದಾ ದುಡಿಯುವ ಮಹಿಳೆಯರನ್ನು ಗೌರವಿಸುವುದು, ರೈತ ಸಂಕುಲಕ್ಕೆ ಗೌರವ ತಂದುಕೊಡುತ್ತದೆ ಎಂದರು.

ಇನ್ನು ಕೃಷಿ ಕಾರ್ಮಿಕರು ರೈತರ ಕಣ್ಣುಗಳಿದ್ದಂತೆ. ಕೃಷಿ ಕಾರ್ಮಿಕ ಮಹಿಳೆಯರು ನಮ್ಮ ಸಮಾಜದ ಶಕ್ತಿಯಾಗಿದ್ದಾರೆ. ಅವರ ಶ್ರಮದಿಂದಲೇ ಕೃಷಿ ಕ್ಷೇತ್ರ ಬೆಳೆಯುತ್ತಿದೆ. ಆದ್ದರಿಂದ ಅವರನ್ನು ಗೌರವಿಸಿ, ಅವರ ಜೀವನ ಮಟ್ಟವನ್ನು ಸುಧಾರಿಸುವುದು ನಮ್ಮ ಎಲ್ಲರ ಹೊಣೆಗಾರಿಕೆಯಾಗಿದೆ, ಸರ್ಕಾರ ಕೃಷಿ ಕಾರ್ಮಿಕ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆ ಹಾಗೂ ಜೀವನ ಭದ್ರತೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಮೆಯಲಿ ಮುಂದಾಗಿದ್ದಾರೆ. ಜನರ ಧ್ವನಿ ಆಗಬೇಕಾಗಿದ್ದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾದ ಶಾಸಕರು ಹೈಟೆಕ್ ಭಿಕ್ಷುಕರಂತೆ IPL ಕ್ರಿಕೆಟ್ ಟಿಕೆಟ್ ಬೇಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಮುಖ್ಯ ಅತಿಥಿ ರಾಜ್ಯಧರ್ಮ ಪತ್ರಿಕೆಯ ಸಂಪಾದಕ ಮಹಿ ಮಹೇಶ್ ಕೃಷಿ ಕಾರ್ಮಿಕ ಮಹಿಳೆಯರನ್ನು ಶಾಲು ಹೊದಿಸಿ ಮೈಸೂರು ಪೇಟ ಹಾಕಿ ಸನ್ಮಾನಿ ಮಾತನಾಡುತ್ತಾ, ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಧನೆ ತೋರಿಸಿದ್ದಾರೆ. ಕೃಷಿ ಕ್ಷೇತ್ರದಲ್ಲೂ ಪುರುಷರಷ್ಟೇ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಗಳು ಎಲ್ಲ ರಂಗದಲ್ಲಿಯೂ ಶೇಕಡ 50ರಷ್ಟು ಮೀಸಲಾತಿ ನೀಡುವುದು ಅವಶ್ಯಕವಿದೆ ಎಂದರು.

ರಾಜ್ಯ ಕಬ್ಬು ಬೆಳೆಗಾರ ಸಂಘದ ಖಜಾಂಚಿ ಎಂ.ಬಿ.ಚೇತನ್, ಕಮಲಮ್ಮ, ರೂಪ ಮುದುಕನಪುರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾಧ್ಯಕ್ಷ ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ವರಕೋಡು ನಾಗೇಶ್, ರಾಜೇಶ್, ದೇವನೂರು ವಿಜಯೇಂದ್ರ, ಕಿರಗಸೂರು ಪ್ರಸಾದ್ ನಾಯಕ, ಅಂಬಳೆ ಮಂಜುನಾಥ್, ಸಾತಗಳ್ಳಿ ಬಸವರಾಜ್, ಕಾಟೂರು ಮಹದೇವಸ್ವಾಮಿ, ದೇವನೂರು ಮಹಾದೇವಪ್ಪ, ಕೂರ್ಗಳ್ಳಿ ರವಿಕುಮಾರ್, ಕೆಂಡಗಣ್ಣಸ್ವಾಮಿ, ವಾಜಮಂಗಲ ಮಹಾದೇವು, ಪ್ರಭುಸ್ವಾಮಿ, ರಂಗರಾಜು, ಇನ್ನು ಮುಂತಾದವರು ಇದ್ದರು.

Megha
the authorMegha

Leave a Reply

error: Content is protected !!
Latest news
ಡೀಸೆಲ್‌ ಟ್ಯಾಂಕರ್‌-ಕಾರಿನ ನಡುವೆ ಭೀಕರ ಅಪಘಾತ: ತಪ್ಪಿದ ಭಾರಿ ದುರಂತ KSRTC: ಸಿಬ್ಬಂದಿಗಳಿಗೆ 38 ತಿಂಗಳ ಹಿಂಬಾಕಿ, ವೇತನ ಹೆಚ್ಚಳ ಮಾಡೋಕೆ ಹಣವಿಲ್ಲವೆನ್ನೋ ಸಚಿವರಿಗೆ ಅನಾವಶ್ಯ ಖರ್ಚು ಮಾಡೋಕ... ರೈತರತ್ನ ಕುರುಬೂರು ಶಾಂತಕುಮಾರ್ ಹುಟ್ಟು ಹಬ್ಬ ನೆನಪಿಗಾಗಿ ಕೃಷಿ ಕಾರ್ಮಿಕ ಮಹಿಳೆಯರಿಗೆ ಸನ್ಮಾನ ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. ಭತ್ಯೆ, ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟ... KSRTC: ನಾಳೆ ನೌಕರರ ಕೂಟದ ಸರ್ವ ಸದಸ್ಯರ, ಪದಾಧಿಕಾರಿಗಳು, ನಿವೃತ್ತರ ಸಭೆ KSRTC: ನೌಕರರಿಗೆ ವೇತನ ಬಡ್ತಿ ನೀಡಿದ ಆಯಾ ತಿಂಗಳಲ್ಲಿಯೇ HRMSನಲ್ಲಿ ಜಾರಿ ಮಾಡಿ, ಇಲ್ಲದಿದ್ದರೆ ಕ್ರಮ- ಸಿಪಿಎಂ ಎಚ್ಚರ... ನಾಲ್ಕೂ ಸಾರಿಗೆ ನಿಗಮಗಳಿಗೆ "ಶಕ್ತಿ" ಮುಂಗಡವಾಗಿ 500 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ಭವಿಷ್ಯ ಶೂನ್ಯ! ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ...